Advertisement

ಗೊಬ್ಬರಕ್ಕಾಗಿ ಬೀದಿಗಿಳಿದ ಅನ್ನದಾತರು

04:59 PM Sep 23, 2020 | Suhan S |

ಕುಣಿಗಲ್‌: ರಸಗೊಬ್ಬರಕ್ಕೆ ಒತ್ತಾಯಿಸಿ ರೈತರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರಿ ಸಂಘದ ಎದುರು ಪ್ರತಿಭಟನೆ ನಡೆಸಿದರು.

Advertisement

ಖಾಸಗಿ ರಸಗೊಬ್ಬರ ಅಂಗಡಿ ಮಾಲೀಕರು ರೈತರಿಗೆ ನಿಖರ ಬೆಲೆಗೆ ಗೊಬ್ಬರ ನೀಡದೆ, ಹಣದಾಸೆಗಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ ರೈತರಿಗೆ ರಸಗೊಬ್ಬರ ಕೊಡಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಆರೋಪಿ ನೂರಾರು ರೈತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು. ರೈತ ಬಿದನಗೆರೆ ನಾಗೇಶ್‌ ಮಾತನಾಡಿ, ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಇಲ್ಲದೆ ತಾಲೂಕು ಸದಾ ಬರಗಾಲಕ್ಕೆ ತುತ್ತಾಗಿದೆ, ಅಪರೂಪಕ್ಕೆ ಈ ಭಾರಿ ಉತ್ತಮ ಮುಂಗಾರು ಮಳೆ ಪ್ರಾರಂಭವಾಗಿದ್ದು, ಈ ನಿಟ್ಟಿನಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಆದರೆ ರೈತರಿಗೆ ಅಗತ್ಯವಿರುವ ರಸ ಗೊಬ್ಬರ ಪೂರೈಸುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ದೂರಿದರು.

ರೈತ ಮಹಿಳೆ ಜಯಮ್ಮ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ದನ ಕರುಗಳನ್ನು ಮನೆಯ ಹತ್ತಿರ ಬಿಟ್ಟು ಗೊಬ್ಬರಕ್ಕಾಗಿ ಕುಣಿಗಲ್‌ಗ‌ೂ ಗ್ರಾಮಕ್ಕೂ ಅಲೆಯುತ್ತಿದ್ದೇವೆ ನಮ್ಮ ನೋವು ಕೇಳು ವವರು ಯಾರು ಇಲ್ಲ, ಓಟಿಗೆ ಮಾತ್ರ ರಾಜಕಾರಣಿಗಳು ಮನೆ ಬಾಗಿಲಿಗೆ ಬರುತ್ತಾರೆ ನಮ್ಮಗಳ ಸಮಸ್ಯೆ ಕೇಳುವವರು ಯಾರು ಇಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಶಿವರಾಜ್‌ ಮಾತನಾಡಿ, ನಾಡಿಗೆ ಅನ್ನ ನೀಡುವ ಅನ್ನದಾತನ ಸಮಸ್ಯೆ ಕೇಳುವವರು ಯಾರು ಇಲ್ಲ, ಗೊಬ್ಬರಕ್ಕಾಗಿ ರೈತರು ಬೀದಿಗೆ ಇಳಿದಿದ್ದಾರೆ ಆದರೂ ಗೊಬ್ಬರ ಕೊಡಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ, ರೈತರಿಗೆ ಬೇಡವಾದ ಕಾಯ್ದೆಗಳನ್ನು ಜಾರಿಗೆ ತಂದು ಬಲಾಡ್ಯ ಉದ್ಯಮಿಗಳಿಗೆ ಅನುಕೂಲ ಮಾಡಿ ಕೊಡಲು ಸರ್ಕಾರಗಳು ಮುಂದಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೂಡಲೇ ವ್ಯವಸಾಯಕ್ಕೆ ಬೇಕಾಗಿರುವಗೊಬ್ಬರ,ಬಿತ್ತನೆಬೀಜ ಮೊದಲಾದ ಸೌಲಭ್ಯಗಳು ನೀಡಬೇಕೆಂದು ಆಗ್ರಪಡಿಸಿದರು.ಮೋಟಯ್ಯ,ಆಲ್ಕೆರೆನಂಜೇಶ, ಕಲ್ಲಪಾಳ್ಯದ ನಾಗೇಶ, ಮಂಜುನಾಥ್‌, ತೇನಮ್ಮ, ಗೌರಮ್ಮ, ಜಯಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next