Advertisement
ಪ್ರತಿಭಟನ ನಿರತ ಯುವ ರೈತ ಶುಭಕರಣ್ ಸಿಂಗ್ ಸಾವಿನ ಬೆನ್ನಲ್ಲೇ ಫೆ.26ರ ವರೆಗೆ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಶುಭಕರಣ್ ಸಾವಿಗೆ ಕಾರಣರಾದವರ ವಿರುದ್ಧ ಎಫ್ಐಆರ್ ದಾಖಲಿಸುವವರೆಗೂ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಶುಕ್ರವಾರ ಸಂಜೆ ರೈತ ಮುಖಂಡರು ಸಭೆ ನಡೆಸಿ ದ್ದು, ಫೆ. 29ರ ವರೆಗೆ ದಿಲ್ಲಿ ಚಲೋ ಪ್ರತಿಭಟನೆ ಸ್ಥಗಿತಗೊಳಿಸುತ್ತಿದ್ದೇವೆ. ಮುಂದಿನ ನಿರ್ಧಾರ ಆ ಬಳಿಕ ತಿಳಿಸುತ್ತೇವೆ ಎಂದಿದ್ದಾರೆ.
ಇತ್ತೀ ಚೆಗೆ ಮೃತ ಪಟ್ಟ ಪ್ರತಿಭಟನಾನಿರತ ರೈತ ಶುಭಕರಣ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್‌ನ ಸಿಎಂ ಭಗವಂತ್ ಮಾನ್ ಸಿಂಗ್ ನೇತೃ ತ್ವದ ಆಪ್ ಸರಕಾರ 1 ಕೋಟಿ ರೂ.ಗಳ ಪರಿಹಾರ ಘೋಷಿಸಿದೆ. ಜತೆಗೆ, ಮೃತನ ಸಹೋದರಿಗೆ ಸರಕಾರಿ ಉದ್ಯೋಗದ ಭರವಸೆಯನ್ನೂ ನೀಡಿದೆ. ಇನ್ನೊಂದೆಡೆ, ಶುಕ್ರವಾರ ಪಂಜಾಬ್‌ನ 17 ಜಿಲ್ಲೆಗಳ 47 ಸ್ಥಳಗಳಲ್ಲಿ ಪ್ರತಿಭಟನೆ ಮೂಲಕ ರೈತರು ಕರಾಳ ದಿನ ಆಚರಿಸಿದ್ದು, ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸಿದ್ದಾರೆ.
Related Articles
ರೈತ ಪ್ರತಿಭಟನೆಗೆ ನಿಹಾಂಗ್ ಸಿಕ್ಖರು ಸೇರ್ಪಡೆಗೊಂಡಿದ್ದು, ಕತ್ತಿ, ಈಟಿಗಳಂಥ ಶಸ್ತ್ರಗಳಿಂದ ಸಜ್ಜಿತರಾಗಿಯೇ ಪ್ರತಿಭಟನೆಗೆ ಧುಮುಕಿರು ವುದು ವರದಿಯಾಗಿದೆ. ಪ್ರತಿಭಟನ ನಿರತ ರೈತರನ್ನು ಬೆದರಿಸಿ, ಓಡಿಸಬಹುದೆಂದು ಸರಕಾರ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ರೈತರ ರಕ್ಷಣೆಗಾಗಿಯೇ ನಾವು ಬಂದಿದ್ದೇವೆ. ಪ್ರತಿಭಟನೆ ಪುನರಾರಂಭ ಆಗುವವರೆಗೂ ಕುದುರೆ ಸವಾರಿ, ಕತ್ತಿ ವರಸೆ, ಧ್ಯಾನದಂಥ ನಮ್ಮ ಶಕ್ತಿ ಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇವೆ. ಯಾವುದೇ ಸಂದರ್ಭ ಎದುರಿಸಲು ಸಿದ್ಧ ಎಂದು ಶೇರ್‌ಸಿಂಗ್ ಹೇಳಿದ್ದಾರೆ.
Advertisement
ಪೊಲೀಸರ ಯೂಟರ್ನ್!ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೆಲವು ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅನ್ವಯ ಕೇಸು ದಾಖಲಿಸುವ ತನ್ನ ಹಿಂದಿನ ನಿರ್ಣಯವನ್ನು ಹರಿಯಾಣ ಪೊಲೀಸರು ಹಿಂಪಡೆಯುವು ದಾಗಿ ಶುಕ್ರವಾರ ಹೇಳಿದ್ದಾರೆ. ಪೊಲೀ ಸರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತ ವಾದ ಬೆನ್ನಲ್ಲೇ ಅವರು ಯೂಟರ್ನ್ ಹೊಡೆ ದಿ ದ್ದಾ ರೆ. ಇದೇ ವೇಳೆ ಪ್ರತಿಭಟನಕಾರರು ಮಾಡುತ್ತಿ ರುವ ಸಾರ್ವಜನಿಕ ಆಸ್ತಿ-ಪಾಸ್ತಿಗಳ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕಾಗುತ್ತದೆ ಎಂದೂ ಪೊಲೀಸರು ಎಚ್ಚರಿಸಿದ್ದಾರೆ.