Advertisement

ತಪ್ಪು ಮಾಹಿತಿ ಹರಡುತ್ತಿರುವ ಖಲಿಸ್ತಾನಿ ಖಾತೆಗಳನ್ನು ತೆಗೆಯಿರಿ : ಟ್ವೀಟರ್ ಗೆ ಕೇಂದ್ರ ಮನವಿ

10:44 AM Feb 08, 2021 | Team Udayavani |

ನವ ದೆಹಲಿ: ರೈತರ ಪ್ರತಿಭಟನೆಯ ಹಿನ್ನಲೆಯಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದ 1178 ಪಾಕಿಸ್ತಾನಿ, ಖಲಿಸ್ತಾನಿ ಖಾತೆಗಳನ್ನು ತೆಗೆದು ಹಾಕುವಂತೆ ಸರ್ಕಾರ  ಟ್ವೀಟರ್ ಅನ್ನು ಕೇಳಿಕೊಂಡಿದೆ.

Advertisement

ಫೆಬ್ರವರಿ 4 ರಂದೇ  ತಪ್ಪು ಮಾಹಿತಿಯನ್ನು ರವಾನಿಸುತ್ತಿದ್ದ ಖಾತೆಗಳ ಪಟ್ಟಿಯನ್ನು ಸರ್ಕಾರ ಟ್ವೀಟರ್ ಗೆ ಕೊಟ್ಟಿದ್ದರೂ ಟ್ವೀಟರ್ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಓದಿ : ಉತ್ತರಾಖಂಡ್ ಹಿಮ ದುರಂತ: ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆ ನೀಡಲಿರುವ ರಿಷಭ್ ಪಂತ್

ಈ ಖಾತೆಗಳಲ್ಲಿ ಆಟೋಮೆಟೆಡ್ ಬಾಟ್ಸ್ ಗಳಿದ್ದು, ಇದನ್ನು ತಪ್ಪು ಮಾಹಿತಿಯನ್ನು ಮತ್ತು ಪ್ರಚೋದನಕಾರಿ ವಿಷಯಗಳನ್ನು ಹಂಚಿಕೊಳ್ಳಲು ಬಳಸಿಕೊಳ್ಳಲಾಗುತ್ತದೆ ಎಂದು ಜ್ಹಿ ಮೀಡಿಯಾ ವರದಿ ಮಾಡಿದೆ.

ಇನ್ನು, ಈ ಹಿಂದೆಯೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಪ್ಪು ಮಾಹಿತಿಯನ್ನು ಹರಡುತ್ತಿದ್ದ 257  ಖಲಿಸ್ತಾನಿ ಖಾತೆಗಳ ಪಟ್ಟಿಯನ್ನು ತೆಗೆದು ಹಾಕಲು ಟ್ವೀಟರ್ ಗೆ ನೀಡಿತ್ತು.

Advertisement

ಓದಿ : ಮಲಯಾಳಿ ಬೆಡಗಿ ನಿರಂಜನಾ ಅನೂಪ್ ವಿಶೇಷ ಫೋಟೋ ಗ್ಯಾಲರಿ

Advertisement

Udayavani is now on Telegram. Click here to join our channel and stay updated with the latest news.

Next