Advertisement

Farmers Protest; ನಾಡಿದ್ದು ಎನ್‌ಡಿಎ ಸಂಸದರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ:

12:06 AM Feb 19, 2024 | Team Udayavani |

ಚಂಡೀಗಢ: “ದಿಲ್ಲಿ ಚಲೋ’ ರೈತ ಪ್ರತಿಭಟನೆ 6ನೇ ದಿನಕ್ಕೆ ತಲುಪಿರುವ ನಡುವೆಯೇ ಪ್ರತಿಭಟನೆಗೆ ಇತರ ರೈತ ಸಂಘಟನೆಗಳ ಬೆಂಬಲವೂ ಹೆಚ್ಚುತ್ತಿದೆ. ಫೆ. 21ರಂದು ಎನ್‌ಡಿಎ ಸಂಸದರ ವಿರುದ್ಧ ದೇಶಾದ್ಯಂತ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ)ರೈತರಿಗೆ ಕರೆ ನೀಡಿದೆ.

Advertisement

ಇದಲ್ಲದೆ ಮಂಗಳವಾರದಿಂದ 3 ದಿನಗಳ ಕಾಲ ಪಂಜಾಬ್‌ನಲ್ಲಿರುವ ಬಿಜೆಪಿ ನಾಯಕರ ನಿವಾಸದ ಮುಂದೆಯೂ ಪ್ರತಿಭಟಿಸುವುದಾಗಿ ಮೋರ್ಚಾ ಹೇಳಿದೆ. ಮತ್ತೂಂದೆಡೆ ಪಂಜಾಬ್‌ ಮತ್ತು ಹರಿಯಾಣ ಗಡಿಯಲ್ಲಿರುವ ರೈತರ ಧರಣಿ ಮುಂದುವರಿದಿದೆ.

ಫೆ. 24ರ ವರೆಗೆ ಪಂಜಾಬ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತ
ಪಟಿಯಾಲಾ, ಸಂಗ್ರೂರ್‌, ಫ‌ತೇಹ್‌ಘರ್‌ ಸಾಹಿಬ್‌ ಸೇರಿ ಪಂಜಾಬ್‌ನ ಹಲವು ಜಿಲ್ಲೆಗಳಲ್ಲಿ ಫೆ. 24ರ ವರೆಗೆ ಅಂತರ್ಜಾಲ ಸೇವೆ ಸ್ಥಗಿತವನ್ನು ವಿಸ್ತರಿಸಲಾಗಿದೆ. ಹರಿಯಾಣದಲ್ಲೂ ಇಂಟರ್‌ನೆಟ್‌ ಸೇವೆ ಸ್ಥಗಿತ ವಿಸ್ತರಣೆ ಆಗುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next