Advertisement

ಕೋಡಿಹಳ್ಳಿ ವಿರುದ್ಧ ರೈತರ ಪ್ರತಿಭಟನೆ

04:50 PM Jun 01, 2022 | Shwetha M |

ನಿಡಗುಂದಿ: ಕೇಂದ್ರದ ಕೃಷಿ, ಎಪಿಎಂಸಿ ಸೇರಿದಂತೆ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲು ವಿರೋಧಿಸಿ ದೆಹಲಿಯಲ್ಲಿ ನಡೆದ ರೈತ ಹೋರಾಟ ಹತ್ತಿಕ್ಕಲು ಹಣದ ಅಮಿಷಕ್ಕೆ ಕೋಡಿಹಳ್ಳಿ ಚಂದ್ರಶೇಖರ ಭಾಗಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದ್ದು ಅವರ ವಿರುದ್ಧ ಕ್ರಮ ಪಡೆಯುವುದು ಹಾಗೂ ಮುಂಗಾರು ಬಿತ್ತನೆಗೆ ಬೇಕಾದ ಕೃಷಿ ಸಾಮಗ್ರಿಗಳು, ರಸಗೊಬ್ಬರ ಪೂರೈಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲ್ದಾರ್‌ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಕೋಡಿಹಳ್ಳಿ ಚಂದ್ರಶೇಖರ ಅವರ ಮೇಲೆ 35 ಕೋಟಿ ರೂ. ಹಣ ಆಮಿಷದ ಆರೋಪವಿದ್ದು ಶೀಘ್ರ ಅವರ ಮೇಲೆ ಉನ್ನತ ಮಟ್ಟದ ತನಿಖೆ ನಡೆಸಲು ಸರ್ಕಾರ ಸಮಿತಿ ನೇಮಕ ಮಾಡಬೇಕು. ಇದರಲ್ಲಿ ಭಾಗಿಯಾದ ಎಲ್ಲರ ಮೇಲೆ ಕಾನೂನು ಕ್ರಮ ಪಡೆಯಬೇಕು. ಕೋಡಿಹಳ್ಳಿಯವರು ರೈತರ ಹೆಸರಿಗೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಇವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಪಡೆದು ರೈತರಿಗೆ ಹಚ್ಚಿದ ಕಪ್ಪು ಮಸಿ ಕಳಚುವಂತಾಗಬೇಕು. ಜಿಲ್ಲೆಯಲ್ಲಿ ಮುಂಗಾರು ಬಿತ್ತನ ಆರಂಭವಾಗುತ್ತಿದ್ದು ರೈತರ ಚಟುವಟಿಕೆಗೆ ಬೇಕಾದ ಸಾಮಗ್ರಿಗಳನ್ನು ಶೀಘ್ರ ಪೂರೈಸಬೇಕು. ಆಲಮಟ್ಟಿಯ ಕಾಲುವೆ ದುರಸ್ತಿಯ ಕ್ಲೋಸರ್‌ ಕಾಮಗಾರಿಗೆ ತಡವಾಗಿ ಟೆಂಡರ್‌ ಕರೆಯಲಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ತಾಲೂಕು ಘಟಕದ ಅಧ್ಯಕ್ಷ ಸೀತಪ್ಪ ಗಣಿ, ಪೀರಸಾಬ ನದಾಫ್‌, ವೆಂಕಟೇಶ ವಡ್ಡರ, ಬಿ.ಆರ್‌ ವಾಲಿಕಾರ, ಪರಶುರಾಮ ಸಪೂರಿ, ಮಾಧುರಾಯಗೌಡ ಪಾಟೀಲ, ಸಾಬಣ್ಣ ಅಂಗಡಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next