Advertisement
ಬೇತಮಂಗಲ ಬಸ್ ನಿಲ್ದಾಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು. ರೈತ ಸಂಘ, ಹಸಿರು ಸೇನೆ,ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಸ್ತೆ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆಕೂಗಲಾಯಿತು.
Related Articles
Advertisement
ಅ.ಮು.ಲಕ್ಷ್ಮೀ ನಾರಾಯಣ, ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ವಿಜಯ ರಾಘವರೆಡ್ಡಿ, ಮಾಜಿ ಅಧ್ಯಕ್ಷ ವಿ.ಜಿ.ಶಂಕರ್, ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಪದ್ಮನಾಭರೆಡ್ಡಿ, ತಾಪಂ ಸದಸ್ಯ ಜಯರಾಮರೆಡ್ಡಿ, ಗ್ರಾಪಂ ಸದಸ್ಯರಾದ ವಿನುಕಾರ್ತಿಕ್, ಡೇರಿ ಮಂಜುನಾಥ್, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ್, ಸಹಕಾರ್ಯದರ್ಶಿ ಕಾರಿ ಮಂಜುನಾಥ್,ಕಾರಿ ವಿಶ್ವನಾಥ್, ವಡ್ಡಹಳ್ಳಿ ಲಕ್ಷ್ಮೀ ನಾರಾಯಣ್,ಕರವೇ ಮಾಜಿ ಜಿಲ್ಲಾಧ್ಯಕ್ಷಕೋದಂಡಪ್ಪ, ಸುಬ್ರಹ್ಮಣಿ, ಗಣೇಶ್, ತಂಬಾರ‌್ಲಹಳ್ಳಿ ಮುನೇಗೌಡ, ಒಬಿಸಿ ಮುನಿಸ್ವಾಮಿ ಮತ್ತಿತರರಿದ್ದರು.
ಕೆಜಿಎಫ್ ಬಂದ್‌ಯಶಸ್ವಿ :
ಕೆಜಿಎಫ್: ಕೇಂದ್ರ-ರಾಜ್ಯ ಸರ್ಕಾರಗಳುಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಖಂಡಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದಕೆಜಿಎಫ್ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.
ಬಂದ್ ಪ್ರಯುಕ್ತ ನಗರದ ಜನಜೀವನ ಅಸ್ತವ್ಯಸ್ತವಾಗಿತ್ತು. ಹೋಟೆಲ್, ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿ, ಬ್ಯಾಂಕ್ ಮುಚ್ಚಿದ್ದವು. ರಾಬರ್ಟ್‌ಸನ್‌ಪೇಟೆ ಮತ್ತು ಆ್ಯಂಡರ್ಸನ್‌ಪೇಟೆ ಮಾರುಕಟ್ಟೆ ಮುಚ್ಚಿದ್ದವು. ಖಾಸಗಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮಾಡಲಿಲ್ಲ. ಆಟೋ ಬೀದಿಗೆ ಇಳಿಯಲಿಲ್ಲ. ರೈತ ಸಂಘದ ಕಾರ್ಯಕರ್ತರು ರ್ಯಾಲಿ ನಡೆಸಿದರು. ರೈತ ಮುಖಂಡರಾದ ಹರಿಕುಮಾರ್, ಕಾರಿ ವಿಶ್ವನಾಥ್, ಲಕ್ಷ್ಮೀ ನಾರಾಯಣ, ಸುಬ್ರಹ್ಮಣಿ, ಕರ್ನಾಟಕ ರಕ್ಷಣಾ ವೇದಿಕೆಕೋದಂಡರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಸಿಪಿಎಂ ನಗರಸಭೆ ಸದಸ್ಯ ಪಿ.ತಂಗರಾಜ್ ನೇತೃತ್ವದಲ್ಲಿ ಸಿಪಿಎಂಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕಿ ಎಂ.ರೂಪಕಲಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.