Advertisement

ಬೆಲೆ ಏರಿಕೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

03:57 PM May 17, 2022 | Team Udayavani |

ಬಂಗಾರಪೇಟೆ: 3 ವರ್ಷಗಳಿಂದ ಕೊರೊನಾ ಹಾಗೂ ಪ್ರಕೃತಿ ಕೋಪಗಳಿಂದ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ದೊರೆಯದೆ, ಕೈಗೆ ಕೆಲಸವಿಲ್ಲದೆ, ಜೀವನ ನಿರ್ವಹಣೆ ಕಷ್ಟವಾಗಿ ರುವ ಸಮಯದಲ್ಲಿ ರೈತ, ಕೂಲಿಕಾರ್ಮಿಕರ ಪರ ನಿಲ್ಲಬೇಕಾದ ಸರ್ಕಾರಗಳು ಅಗತ್ಯ ವಸ್ತು ಗಳಾದ ಅಡಿಗೆ ಅನಿಲ, ಪೆಟ್ರೋಲ್‌, ಡೀಸಲ್‌ ಬೆಲೆ ಏರಿಕೆ ಮಾಡಿ ಬಡವರಿಗೆ ಮಾರಕವಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ರೈಲ್ವೆ ಜಂಕ್ಷನ್‌ನಲ್ಲಿ ರೈತ ಸಂಘದಿಂದ ತಾತ್ಕಾಲಿಕವಾಗಿ ತಯಾರು ಮಾಡಿರುವ ಸೌಧೆಯಲ್ಲಿ ಹಪ್ಪಳ ಮಾಡುವ ಮುಖಾಂತರಹೋರಾಟ ಮಾಡಿ ತಹಶೀಲ್ದಾರ್‌ ರಶ್ಮಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಬಡವರ ಅನ್ನವನ್ನು ಕಸಿದುಕೊಳ್ಳುತ್ತಿರುವ ಬೆಲೆ ಏರಿಕೆನಿಯಂತ್ರಣಕ್ಕೆ ಕಾನೂನು ರಚಿಸಿ ಪೆಟ್ರೋಲ್‌-ಡೀಸಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಮೂಲಕ ಕೋಟ್ಯಂತರ ಬಡವರ ರಕ್ಷಣೆಗೆನಿಲ್ಲಬೇಕೆಂದು ಆಗ್ರಹಿಸಿದರು.

24 ಗಂಟೆಯಲ್ಲಿ ಅಡಿಗೆ ಅನಿಲ ನಿರತರವಾಗಿ ಏರಿಕೆಯಾಗುತ್ತಿರುವ ಕಾರಣ ಗ್ಯಾಸ್‌ ಸಿಲಿಂಡರ್‌ನ್ನು ಕೈಬಿಟ್ಟು ಮತ್ತೆ ಹಳೇ ಕಾಲದ ಸೌಧೆ ಒಲೆಗಳಿಗೆ ಗ್ರಾಮೀಣ ಜನ ಮರಳುತ್ತಿದ್ದಾರೆ. ಇದರಿಂದಕಾಡು ನಾಶವಾಗಿ ಪರಿಸರ ನಾಶ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ವಸ್ತು ಬೆಲೆ ಇಳಿಸಿ ಜನಪರ ನಿಲ್ಲಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ, ದೇಶದ ಶೇ.70ರಷ್ಟು ಜನರು ಕೃಷಿ ಮಾಡುವ ರೈತರಾಗಿದ್ದಾರೆ.ಅವರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜ,ರಸಗೊಬ್ಬರ ಪೂರೈಸುವಲ್ಲಿ ಸರ್ಕಾರ ವಿಫ‌ಲವಾಗಿದೆ. ಮುಂಗಾರು ಪ್ರಾರಂಭವಾದಾಗ ಕೃಷಿ ಮಂತ್ರಿಗಳು ಕೃಷಿ ಕ್ಷೇತ್ರಕ್ಕೆ ಅವಶ್ಯಕತೆ ಇರುವ ಬಿತ್ತನೆ ಬೀಜ ರಸಗೊಬ್ಬರಗಳ ಅಭಾವ ಇಲ್ಲ ಎನ್ನುತ್ತಾರೆ. ರೈತರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜ ರಸಗೊಬ್ಬರಕ್ಕಾಗಿ ರಾಜ್ಯದಲ್ಲಿ ಪ್ರತಿ ವರ್ಷ ಗೋಲಿಬಾರ್‌, ಲಾಠಿಚಾರ್ಜ್‌, ನಡೆಯುತ್ತಿರುವ ಉದಾಹರಣೆಗಳಿವೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್‌-2ತಹಶೀಲ್ದಾರ್‌ ರಶ್ಮಿ, ರೈತರ ಸಮಸ್ಯೆಗಳ ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರಸರ್ಕಾರಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.

Advertisement

ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್‌, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಬಾಬಾಜಾನ್‌, ನವಾಜ್‌, ಹಾರೀಪ್‌, ಶೋಬ್‌, ತಾಲೂಕು ಅಧ್ಯಕ್ಷ ಮರಗಲ್‌ ಮುನಿಯಪ್ಪ, ಐತಾಂಡಹಳ್ಳಿ ಮುನ್ನ, ಮಾಲೂರು ಯಲ್ಲಣ್ಣ, ರಾಜಣ್ಣ,ಜಾವೀದ್‌, ಕೆಜಿಎಫ್ ವೇಣುಗೋಪಾಲ್‌,ಸುರೇಂದ್ರರೆಡ್ಡಿ, ಸುರೇಂದ್ರಗೌಡ, ಸುರೇಶ್‌ಬಾಬು, ಹರೀಶ್‌, ಮಂಗಸಂದ್ರ ತಿಮ್ಮಣ್ಣ,ಈಕಂಬಳ್ಳಿ ಮಂಜುನಾಥ, ಪುತ್ತೇರಿ ರಾಜು,ಯಲುವಳ್ಳಿ ಪ್ರಭಾಕರ್‌, ಗಿರೀಶ್‌, ವಕ್ಕಲೇರಿಹನುಮಯ್ಯ, ತೆರ್ನಹಳ್ಳಿ ಆಂಜಿನಪ್ಪ ಇತರರಿದ್ದರು.

ಬಿತ್ತನೆ ಬೀಜ ಕೃತಕ ಅಭಾವ ಸೃಷ್ಟಿ :  ಸರ್ಕಾರದಿಂದ ಪೂರೈಕೆಯಾಗುವ ಬಿತ್ತನೆಬೀಜ ರಸಗೊಬ್ಬರಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದ ಖಾಸಗಿ ಅಂಗಡಿಗಳ ಪಾಲಾಗಿ ಖಾಸಗಿ ಅಂಗಡಿ ಮಾಲೀಕರು ಕೃತಕ ಅಭಾವವನ್ನು ಸೃಷ್ಟಿ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ರೈತರು ನಕಲಿ

ಬಿತ್ತನೆ ಬೀಜದ ಸುಳಿಯಲ್ಲಿ ಸಿಲುಕಿದ್ದಾರೆ. ಅನ್ನದಾತನ ಬದುಕುವ ಬೀದಿಗೆ ಬೀಳುವಂತಾಗಿದೆ ಎಂದು ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next