ಕೋಲಾರ: ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಚೆನ್ನೈಕಾರಿಡಾರ್ ರಸ್ತೆಯ ಅಭಿವೃದ್ಧಿಗೆ ಕೆರೆಯ ಸ್ವರೂಪವನ್ನೇ ಹಾಳು ಮಾಡುತ್ತಿರುವ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ದೂಳಿನಿಂದ ರಸ್ತೆಯ ಅಕ್ಕಪಕ್ಕದಲ್ಲಿ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ನೀಡುವಂತೆ ರೈತ ಸಂಘ ದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರು ಕೃಷಿ ಭೂಮಿಗೆ ಹಾಗೂ ಇಟ್ಟಿಗೆ ಕಾರ್ಖಾನೆಗೆ ಮಣ್ಣು ಬೇಕಾದರೆ ನೂರೊಂದು ಕಾನೂನು ಹೇಳುವ ಗಣಿ ಹಾಗೂ ಸಣ್ಣ ನೀರಾವರಿ ಅಧಿಕಾರಿಗಳಿಗೆ ಚೆನ್ನೈ ಕಾರಿಡಾರ್ ಗುತ್ತಿಗೆದಾರರ ಕೆರೆ ಹಾಳು ಮಾಡುತ್ತಿರು ವುದು ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ, ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಜಮೀನನ್ನು ಬಲವಂತದಿಂದ ಕಾನೂನಿನ ಭಯ ಹುಟ್ಟಿಸಿ, ವಶಪಡಿಸಿಕೊಂಡು ಪರಿಹಾರ ನೀಡದೇ ಕಚೇರಿಗೆ ಅಲೆದಾಡಿಸುವುದು ಒಂದು ಕಡೆಯಾದರೆ ಮತ್ತೂಂದು ಕಡೆ ಕೆರೆಗಳನ್ನು ಚೆನ್ನೈ ಕಾರಿಡಾರ್ ಹೈವೆ ಅಭಿವೃದ್ಧಿ ಗುತ್ತಿಗೆದಾರರು ಸಂಪೂರ್ಣವಾಗಿ ತಮಗೆ ಇಷ್ಟಬಂದ ರೀತಿ ಮಣ್ಣು ತೆಗೆಯುವ ಮೂಲಕ ಕೆರೆಗಳನ್ನು ಹಾಳು ಮಾಡುತ್ತಿದ್ದರು ಅದನ್ನು ತಡೆಯ ಬೇಕಾದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ, ಸಾಂಕ್ರಾಮಿಕ ರೋಗಗಳು ಹಾಗೂ ಪ್ರಕೃತಿ ವಿಕೋಪದ ಹಾವಳಿಗೆ ಸಿಲುಕಿದ ಬಂಡವಾಳ ಕೈಗೆ ಸಿಗದ ಸೂಕ್ತವಾದ ಮಾರುಕಟ್ಟೆ ಇಲ್ಲದೆ, ಲಕ್ಷಾಂತರ ರೂ. ಬೆಳೆನಾಶವಾಗಿ ಸಂಕಷ್ಟಕ್ಕಿದ್ದ ರೈತರಿಗೆ ಮತ್ತೆ ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ಧಿ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಅಕ್ಕ ಪಕ್ಕದ ತರಕಾರಿ- ಹೂ ಬೆಳೆಗಳು ದೂಳಿಗೆ ಪೂರ್ಣ ನಾಶವಾಗುತ್ತಿದ್ದರೂ ಗುತ್ತಿಗೆದಾರರು ಕನಿಷ್ಠ ಸೌರ್ಜನ್ಯ ಕಾದರೂ ರಸ್ತೆಯಲ್ಲಿ ನೀರನ್ನು ಸಿಂಪರಣೆ ಮಾಡುತ್ತಿಲ್ಲ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗು ತ್ತಿದೆ. ಜಿಲ್ಲಾಧಿಕಾರಿಗಳು ಗುತ್ತಿಗೆದಾರರಿಂದ ನಷ್ಟವಾಗಿ ರುವ ರೈತರಿಗೆ 5 ಲಕ್ಷ ಪ್ರತಿ ಎಕೆರೆಗೆ ಪರಿಹಾರ ಕೊಡಿಸ ಬೇಕೆಂದು ಒತ್ತಾಯಿಸಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾ ಕಾರ್ಯಾ ಧ್ಯಕ್ಷ ವಕ್ಕಲೇರಿ ಹನುಮಯ್ಯ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಾಲೂರು ತಾ. ಅಧ್ಯಕ್ಷ ಯಲ್ಲಣ್ಣ, ಮರಗಲ್ ಮುನಿಯಪ್ಪ, ಮುಳ ಬಾಗಿಲು ತಾ.ಅದ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಮ ಸಾಗರ ವೇಣುಗೋಪಾಲ್, ಸಂದೀಪ್, ಪಾರಂಡಹಳ್ಳಿ ಮಂಜುನಾಥ, ಸುರೇಶ್‌ಬಾಬು, ಮಂಗಸಂದ್ರ ತಿಮ್ಮಣ್ಣ, ಪೂವಣ್ಣ, ನಾರಾಯಣಗೌಡ, ಗೋವಿಂದಪ್ಪ, ಅಶ್ವಥಪ್ಪ, ವೆಂಕಟೇಶಪ್ಪ, ಚಂದ್ರಪ್ಪ, ತೆರ್ನಹಳ್ಳಿ ಆಂಜಿನಪ್ಪ, ಪುತ್ತೇರಿ ರಾಜು, ಗಿರೀಶ್ ಇತರರಿದ್ದರು
ಸರ್ಕಾರಿ ಅದೇಶ ಉಲ್ಲಂಘನೆ : ರಸ್ತೆ ಅಭಿವೃದ್ಧಿಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಣ್ಣ ನೀರಾವರಿ ಇಲಾಖೆ, ಅಧಿಕಾರಿಗಳು ಕೆರೆಯಲ್ಲಿ ಮಣ್ಣು ತೆಗೆಯಲು ಚೆನ್ನೈ ಕಾರಿಡಾರ್ ರಸ್ತೆ ಗುತ್ತಿಗೆದಾರರಿಗೆ ನೀಡಿರುವುದು, 3-4 ಅಡಿ ಜತೆಗೆ ಯಾವುದೇ ರೀತಿ ಕೆರೆಗೆ ಹಾನಿಯಾಗದಂತೆ ಮಳೆ ನೀರು ಸಂಗ್ರಹವಾಗಲು ಅನುಕೂಲವಾಗು ವಂತೆ ಕಾಮಗಾರಿ ನಡೆಸುವ ನಿರ್ಬಂಧದ ಆದೇಶ ನೀಡಿದ್ದಾರೆ. ಆದರೆ, ಗುತ್ತಿಗೆದಾರರು ಆದೇಶಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ 10 ರಿಂದ 30 ಅಡಿವರೆಗೂ ಆಳ ತೆಗೆಯುವ ಮೂಲಕ ಕೆರೆಯ ಸ್ವರೂಪಗಳನ್ನು ಹಾಳು ಮಾಡುದ್ದಾರೆಮದು ರೈತರು ಆರೋಪಿಸಿದರು.
ಗುತ್ತಿಗೆದಾರರು ಎನ್‌ಎಚ್‌ಎಐ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆದು ಕೆರೆಯ ಸ್ವರೂಪವನ್ನು ಹಾಳು ಮಾಡಿರುವ ಹಾಗೂ ರೈತರ ಬೆಳೆ ನಷ್ಟವಾಗಿರುವ ಸ್ಥಳವನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ರಮ ಕೈಗೊಳ್ಳಲಾಗುವುದು.
–ಸಿ.ವಿ ಸ್ನೇಹಾ, ಅಪರ ಜಿಲ್ಲಾಧಿಕಾರಿ