ಮುಳಬಾಗಿಲು: ತಾಲೂಕಿನ ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿ/ಸಿಬ್ಬಂದಿ ಸರ್ಕಾರಿ ಜಮೀನುಗಳಸಂರಕ್ಷಣೆ ಮಾಡದೇ ಭೂ ಮಾಫಿಯಾ ಜತೆ ಶಾಮೀಲಾಗಿ ನಕಲಿ ದಾಖಲೆಗಳ ಸೃಷ್ಟಿಸಿದ್ದು, ಸರ್ಕಾರಿ ಜಮೀನು ಅಕ್ರಮ ಪರಭಾರೆಯಾಗುತ್ತಿದೆ. ಇದರ ವಿರುದ್ಧ ಕ್ರಮವಹಿಸಬೇಕು ಎಂದು ರೈತ ಸಂಘದರಾಜ್ಯ ಉಪಾಧ್ಯಕ್ಷ ನಾರಾಯಣಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ರೈತರು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದರು,ಅಂತೆಯೇ ಸರ್ಕಾರಗಳು ಉಳುವ ರೈತನ ದುಡಿಮೆಯನ್ನು ನೋಡಿ ಕ್ರಮೇಣಆತನ ಶ್ರಮಕ್ಕೆ ಪ್ರತಿ ಫಲವಾಗಿ ಕಂದಾಯಇಲಾಖೆ ಮೂಲಕ ಭೂ ಮಂಜೂರಾತಿ ಮಾಡಿ ರೈತರಿಗೆ ಜೀವನ ಕಲ್ಪಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸ್ವಾರ್ಥಕ್ಕಾಗಿಸರ್ಕಾರಿ ಗೋಮಾಳ ಜಮೀನುಗಳುಉಳುವ ರೈತನಿಗಿಂತಲೂ ಕೋಟ್ಯಾಧಿಪತಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.
ನಕಲಿ ದಾಖಲೆಗಳ ಸೃಷ್ಟಿಯಿಂದ ಆವಣಿ ಹೋಬಳಿಯ ರಾ.ಹೆ.75ರ ಅಂಚಿನಲ್ಲಿರುವ ದೇವರಾಯ ಸಮುದ್ರಸ.ನಂ. 115 ರ ಸರ್ಕಾರಿ ಗೋಮಾಳಭೂಮಿ ಬಲಾಡ್ಯರ ಪಾಲಾಗಿದೆ. ಲ್ಯಾಂಕೋ ಪಕ್ಕದಲ್ಲಿರುವ ಸ.ನಂ 653,180, 103 ಅಲ್ಲದೇ ಸರ್ಕಾರಿ ಕಟ್ಟಡಗಳನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಮಂಜೂರಾಗಿ ಕಾಯ್ದಿರಿಸಲಾಗಿದ್ದಜಮೀನನ್ನೇ ಮಹಾಲಕ್ಷ್ಮೀ ಟೇಡರ್‌ಮಾಲೀಕರ ಪಾಲಾಗಿದೆ. ಜಮ್ಮನಹಳ್ಳಿಸ.ನಂ. 103 ರಲ್ಲಿ 36 ಎಕರೆ ಜಮೀನನ್ನು ಮುಟ್ಟುಗೋಲಿಗೆ ಆದೇಶವಿದ್ದರೂಇದುವರೆಗೂ ವಶಕ್ಕೆ ಪಡೆದಿಲ್ಲ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ಯಲುವಹಳ್ಳಿಪ್ರಭಾಕರ್, ಜಿಲ್ಲಾಧ್ಯಕ್ಷ ಐತಾಂಡಹಳ್ಳಿಮಂಜುನಾಥ್, ಹಸಿರು ಸೇನೆ ತಾಲೂಕುಅಧ್ಯಕ್ಷ ವೇಣು, ಲಾಯರ್ ಮಣಿ, ಜಿಲ್ಲಾಕಾರ್ಯಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ,ಅಂಬ್ಲಿಕಲ್ ಮಂಜುನಾಥ್,ಕುರುಬರಹಳ್ಳಿ ರಾಮಕೃಷ್ಣಪ್ಪ,ಪುರುಷೋತ್ತಮ್, ರಾಮಮೂರ್ತಿ, ಸುರೇಂದ್ರ, ಜಗನ್ನ, ಶ್ರೀಕಾಂತ್, ಪದ್ಮಘಟ್ಟಧರ್ಮ, ವೇಣು, ನವೀನ್, ಕೇಶವ,ಪುತ್ತೇರಿ ರಾಜು, ವಡ್ಡಹಳ್ಳಿ ಸತೀಶ್,ಪ್ರಕಾಶ್, ಶ್ರೀನಿವಾಸ್, ಅಣ್ಣಿಹಳ್ಳಿನಾಗರಾಜ್, ಗಿರೀಶ್, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಾಲೂರು ತಾಲೂಕುಅಧ್ಯಕ್ಷ ಯಲ್ಲಪ್ಪ, ಶ್ರೀನಿವಾಸಪುರತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಇತರರಿದ್ದರು.