Advertisement
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ರೈತ ಇಂದು ತನ್ನ ಭೂಮಿಯ ದಾಖಲೆ ಸರಿಪಡಿಸಿಕೊಳ್ಳಲು ನಿತ್ಯ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕೊರೊನಾ ಮಹಾಮಾರಿಯ ಲಾಕ್‌ಡೌನ್ ಸಂದರ್ಭದಲ್ಲಿ ಭಯಭೀತರಾಗಿ ರೈತರು ಮನೆಯಲ್ಲಿ ಕುಳಿತಾಗ ಸುಗ್ರಿವಾಜ್ಞೆ ಮೂಲಕ ರೈತ ವಿರೋಧಿ ಕಾನೂನು ಜಾರಿಗೊಳಿಸಿ ಕೃಷಿ ವಲಯವನ್ನು ಬಹುರಾಷ್ಟ್ರೀಯ ಹಾಗೂ ಕಾಪೊìರೇಟ್ ಕಂಪನಿಗಳಿಗೆ ಮಾರಿಕೊಳ್ಳುವ ಹುನ್ನಾರವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಶೇಷ ಯೋಜನೆ ರೂಪಿಸಿ ದಾಖಲಾತಿಗಳನ್ನು ಮರು ಸೃಷ್ಟಿಸಲು ಮುಂದಾಗಬೇಕು. ಬೆಳೆ ವಿಮೆ ವಿತರಣೆ, ಕೆರೆ ಹೂಳು ಎತ್ತುವುದು ಸೇರಿದಂತೆ ರೈತರ ಬೇಡಿಕೆಗಳ ಚರ್ಚೆಗೆ ಸಭೆ ಏರ್ಪಡಿಸಿ ಪರಿಹಾರ ಸೂಚಿಸಬೇಕು. ತಪ್ಪಿದಲ್ಲಿ ಕ್ಷೇತ್ರದ ರೈತರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪಟ್ಟಣದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ| ವಿ.ಕೃ. ಗೋಕಾಕ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಶುಕ್ರವಾರ ಪೇಟೆ, ಭರಮಲಿಂಗೇಶ್ವರ ಸರ್ಕಲ್, ಮುಖ್ಯ ಮಾರುಕಟ್ಟೆ ಮೂಲಕ ಸಂಚರಿಸಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಎದುರುಗಡೆ ಆಗಮಿಸಿತು. ನಂತರ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸೂಚನೆ ಮೇರೆಗೆ ನಿರಂತರ ಧರಣಿ ಸತ್ಯಾಗ್ರಹ ಹಿಂಪಡೆಯಲಾಯಿತು.
ರಾಜ್ಯ ಕಾರ್ಯದರ್ಶಿ ಮಾಲತೇಶ ಪೂಜಾರ, ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ, ರಾಜ್ಯ ಪದಾಧಿಕಾರಿಗಳಾದ ರಾಘವೇಂದ್ರ ನಾಯಕ್, ಹಾಸೀಂ ಜಿಗಳೂರ, ಶೇಖರ ಅಂಗಡಿ, ಜಿಲ್ಲಾ ಉಪಾದ್ಯಕ್ಷ ನೂರಅಹ್ಮದ್ ಮುಲ್ಲಾ, ತಾಲೂಕು ಘಟಕ ಅಧ್ಯಕ್ಷ ಚನ್ನಪ್ಪ ಮರಡೂರ, ಪದಾಧಿಕಾರಿಗಳಾದ ಜಾಕೀರ್ ಹುಸೇನ್, ಬಸವರಾಜ ತಳವಾರ, ಜಗದೀಶ ಬಳ್ಳಾರಿ, ಎಂ.ಎನ್.ನಾಯಕ್, ರಾಜೂ ತರ್ಲಘಟ್ಟ, ಮುತ್ತು ಗುಡಗೇರಿ, ಮಹಾದೇವಪ್ಪ ಮಾಳಮ್ಮನವರ, ಬಸಲಿಂಗ ನರಗುಂದ, ಶಿವಾನಂದ ಕರಿಗಾರ, ಶಿವಪುತ್ರಪ್ಪ ಸಪ್ಪಗಾಯಿ, ಪಕ್ಕೀರಪ್ಪ ಜೋಗೇರ, ನಾಗಪ್ಪ ಹಡಪದ, ರವಿ ದೊಡ್ಡಮನಿ, ಖುತಬಸಾಬ್ ಕುಂದೂರ, ಬಸವನಗೌಡ ಅರಳಿಹಳ್ಳಿ, ಅರಳಿಮರದ, ಶಿವಾನಂದ ವಾಲೇಕಾರ, ರಾಘವೇಂದ್ರ ಕುರಬರ ಇದ್ದರು.