Advertisement

ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಿ

02:58 PM Dec 15, 2020 | Suhan S |

ಕೋಲಾರ: ನಿವಾರ್‌ ಚಂಡಮಾರುತದ ಹಾವಳಿಗೆ ತುತ್ತಾಗಿರುವ ಬೆಳೆಗಳಿಗೆ ಪ್ರತಿ ಎಕರೆಗೆ 2 ಲಕ್ಷ ರೂ.ಪರಿಹಾರ ನೀಡುವ ಜತೆಗೆ ಉಚಿತವಾಗಿ ಬಿತ್ತನೆ ಆಲೂಗಡ್ಡೆ, ಔಷಧಿ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಅಂಗಮಾರಿ ಟೊಮೆಟೋ ಮತ್ತು ಕ್ಯಾಪ್ಸಿಕಾಂ ಗಿಡಗಳ ಸಮೇತ ಸೋಮವಾರ ತೋಟಗಾರಿಕೆ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಒಂದುಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾಯಿದೆ ಮತ್ತೂಂದು ಕಡೆಅತಿವೃಷ್ಠಿ, ಅನಾವೃಷ್ಠಿ ಇವುಗಳ ಮಧ್ಯೆ ಚಂಡಮಾರುತಗಳ ಹಾವಳಿಗಳಿಂದ ರೈತರು ಕಷ್ಟಪಟ್ಟು ಖಾಸಗಿ ಸಾಲ ಮಾಡಿ ಬೆಳೆದಂತಹಬೆಳೆಗಳುಕಣ್ಣ ಮುಂದೆಯೇ ನಾಶವಾಗುತ್ತಿವೆ ಎಂದು ತಿಳಿಸಿದರು.

ಅಧಿಕಾರಿಗಳು ಮುಖ ಮಾಡಿಲ್ಲ: ರಾಜ್ಯ ಸರ್ಕಾರದ ಕೃಷಿ ಹಾಗೂ ತೋಟಗಾರಿಕೆಸಚಿವರು ಪತ್ರಿಕಾ ಮಾಧ್ಯಮಕ್ಕೆ ಹೇಳಿಕೆ ನೀಡಲು ಸೀಮಿತವಾಗಿದ್ದಾರೆ. ಆಯಾಜಿಲ್ಲೆಯ ರೈತರ ಸಮಸ್ಯೆ ಆಲಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ. ಇತ್ತೀಚೆಗೆ ಕೋವಿಡ್ ದಿಂದ ತಪ್ಪಿಸಿಕೊಂಡು ಬೆಳೆದಿದ್ದ ಸಾವಿರಾರು ಹೆಕ್ಟೇರ್‌ ಟೊಮೆಟೋ,ಆಲೂಗಡ್ಡೆ, ಕ್ಯಾಪ್ಸಿಕಂ ಮತ್ತಿತರ ವಾಣಿಜ್ಯ ಬೆಳೆಗಳು ಇತ್ತೀಚೆಗೆ 9 ದಿನ ಸುರಿದ ನಿವಾರ್‌ ಜಡಿ ಮಳೆಗೆ ಅಂಗಮಾರಿ ಮತ್ತಿತರ ರೋಗ ಬಂದು ಸಂಪೂರ್ಣವಾಗಿ ಬೆಳೆಗಳು ನಾಶವಾಗಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ರೈತರ ತೋಟಗಳಕಡೆ ಮುಖ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ, ಈಗಾಗಲೇ ಸರ್ಕಾರಕ್ಕೆ ಔಷಧಿಗಳಿಗಾಗಿ ಪ್ರಸ್ತಾವನೆ ಕಳಿಸಿದ್ದೇವೆ. ರೈತ ಸಂಘದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ರೈತರಪರ ನಿಲ್ಲುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿವಿ.ನಳಿನಿ,ತಾಲೂಕಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂಚಲ, ವಿನೋದ್‌,ಸುನಿಲ್‌, ಶಿವು, ಅನಿಲ್‌, ಚಂದ್ರಪ್ಪ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next