Advertisement

ದೆಹಲಿ ಹೋರಾಟ ಬೆಂಬಲಿಸಿ ರೈತರ ಮೆರವಣಿಗೆ

02:19 PM Dec 04, 2020 | Suhan S |

ವಿಜಯಪುರ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ನಗರದಲ್ಲಿ ಅಖೀಲ ಭಾರತ ರೈತರ ಐಕ್ಯತಾ ದಿನ ಆಚರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ರೈತ ವಿರೋಧಿ  ಕಾಯ್ದೆ ತಿದ್ದುಪಡಿಗಳನ್ನು ಸಾಂಕೇತಿಕವಾಗಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ಆಲ್‌ ಇಂಡಿಯಾ ಕಿಸಾನ್‌ ಖೇತ್‌ ಮಜ್ದೂರ್‌ ಸಂಘಟನೆಗೆ (ಎಐಕೆಕೆಎಂಸ್‌) ಸಂಯೋಜಿತ ರೈತ ಕೃಷಿ ಕಾರ್ಮಿಕಸಂಘಟನೆ (ಆರ್‌ಕೆಎಸ್‌)ನ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ಮುಖಂಡರು, ನ.26ರಿಂದ ನವದೆಹಲಿಯಲ್ಲಿಸೇರಿದ ಲಕ್ಷ ಲಕ್ಷ ರೈತರು ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಕೃಷಿ ಉತ್ಪನ್ನಗಳ ವ್ಯಾಪಾರ ವಾಣಿಜ್ಯ ಕಾಯ್ದೆ(ಎಪಿಎಂಸಿಅನೂರ್ಜಿತಗೊಳಿಸುವ ಕಾಯ್ದೆ) ಮತ್ತು ಕೃಷಿ ಉತ್ಪನ್ನಗಳ ಬೆಲೆ ಮತ್ತು ಕೃಷಿ ಸೇವೆಗಳ ರೈತರ ಒಪ್ಪಂದ ಕಾಯ್ದೆ (ಗುತ್ತಿಗೆ ಕೃಷಿ ಒಪ್ಪಂದ ಕಾಯ್ದೆ)ಜಾರಿಯಿಂದ ರೈತರ ಬದುಕು ದುರ್ಬರ ಸ್ಥಿತಿ ತಲುಪಿದೆ ಎಂದು ಹರಿಹಾಯ್ದರು.

ದೇಶದ ಕಾರ್ಪೊರೇಟ್‌ ಮನೆತನಗಳಮಹದಾಶೆಯಂತೆ ಕೇಂದ್ರದ ಬಿಜೆಪಿ ಸರ್ಕಾರ ರೈತರಿಗೆ ಮರಣ ಶಾಸನ ಬರೆದಿದೆ. ಲಾಕ್‌ಡೌನ್‌ಸಮಯ ದುರುಪಯೊಗ ಪಡಿಸಿಕೊಂಡಿರುವಸರ್ಕಾರ ರೈತರು, ದುಡಿಯುವ ಜನತೆಗೆ ದ್ರೋಹ ಎಸಗಿದೆ. “ಒಂದು ದೇಶ, ಒಂದು ಮಾರುಕಟ್ಟೆ’ಎಂದು ಹೇಳುತ್ತ ಇದೆಲ್ಲವು ರೈತರ ಹಿತಕ್ಕಾಗಿಯೇ ಎಂದು ಬೊಬ್ಬೆ ಇಡುತ್ತಿರುವ ಸರ್ಕಾರದ ದುರುದ್ದೇಶಬಯಲಾಗುತ್ತಿದೆ ಎಂದರು.

ತಿಪರಾಯ ಹತ್ತರಕಿ ರೈತ ವಿರೋಧಿ  ಕಾಯ್ದೆ ತಿದ್ದುಪಡಿಗಳನ್ನು ಸಾಂಕೇತಿಕವಾಗಿ ದಹನ ಮಾಡಿದರು. ಸಂಘಟನೆಯ ಬಿ. ಭಗವಾನರೆಡ್ಡಿ,ಬಾಳು ಜೇವೂರ, ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎಚ್‌.ಟಿ. ಮಲ್ಲಿಕಾರ್ಜುನ, ದುಂಡೇಶ್‌ ಬಿರಾದಾರ ಮಾತನಾಡಿದರು.

Advertisement

ಈ ವೇಳೆ ಕಾಸಿಬಾಯಿ ಜಿ.ಟಿ., ಸುನಿಲ ಸಿದ್ರಾಮಶಟ್ಟಿ, ಆಕಾಶ್‌ ಬಿರಾದಾರ, ಕಾವೇರಿ ರಜಪೂತ, ಯಲ್ಲಪ್ಪ ಹರಗೆ, ಮರೀಬಾ ಮಾನೆ, ಪ್ರಭು ಮಾನೆ, ಪಾಂಡುಮಾನೆ, ತುಕಾರಾಮ ಪಾಂಡ್ರೆ, ಹಣಮಂತರಾಯ ಕಂಠಿ, ಸಿ.ಎಸ್‌. ಕಂಬಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next