Advertisement

ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ರೈತರು ಭಾಗಿ

06:25 AM Jan 11, 2019 | Team Udayavani |

ಆಳಂದ: ವಿಜಯಪುರ ಸಮೀಪದ ಕಗ್ಗೋಡ ಶ್ರೀರಾಮನಗೌಡ ಬಾ ಪುಗೌಡ ಪಾಟೀಲ (ಯತ್ನಾಳ), ಗೋರಕ್ಷ ಆವರಣದಲ್ಲಿ ಡಿ. 24ರಿಂದ 31ರ ವರೆಗೆ ಭಾರತ ವಿಕಾಸ ಸಂಗಮ, ವಿಜಯಪುರ ಶ್ರೀ ಸಿದ್ಧೇಶ್ವರ ಸಂಸ್ಥೆ, ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಬಾಗಲಕೋಟ ಆಶ್ರಯದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವ-5ರಲ್ಲಿ ತಾಲೂಕಿನ ಅನೇಕ ರೈತರು ಭೇಟಿ ನೀಡಿ ಕೃಷಿ, ತಂತ್ರಜ್ಞಾನ, ವಿಜ್ಞಾನ ಹೀಗೆ ಅನೇಕ ರೀತಿಯ ಮಾಹಿತಿ ಕಲೆಹಾಕಿದರು.

Advertisement

ಕ್ಷೇತ್ರ ಶಾಸಕ ಸುಭಾಷ ಗುತ್ತೇದಾರ ಆಯೋಜಿತ ಆಯ್ದ ರೈತರ ಪ್ರವಾಸಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರತಿನಿಧಿ ಹಾಗೂ ಕೃಷಿ ಪಂಡಿತ ಆದಿನಾಥ ಹೀರಾ, ಶ್ರೀಮಂತ ನಾಮಣೆ ತಡಕಲ್‌ ನೇತೃತ್ವದಲ್ಲಿ ಸುಮಾರು 30ಕ್ಕೂ ಹೆಚ್ಚು ರೈತರು ಉತ್ಸವದಲ್ಲಿ ಆಯೋಜಿಸಿದ್ದ ಕೃಷಿ ಸಂಗಮದಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಮಾಹಿತಿ ಕಲೆಹಾಕಿದರು.

ಕೃಷಿ ಸಂಗಮವು ರೈತ, ರೈತ ಮಹಿಳೆ, ಗೋವು, ಸಾವಯವ ಕೃಷಿ, ನೀರು ಪ್ರಕೃತಿಗೆ ಮೀಸಲು ಭಾರತೀಯ ಕೃಷಿ ಪದ್ಧತಿ, ಗೋವು ಸಂವರ್ಧನೆ, ಕಡಿಮೆ ಬಂಡವಾಳದಿಂದ ಹೆಚ್ಚಿನ ಸ್ವಾಸ್ಥ್ಯವರ್ಧಕ ಇಳುವರಿ, ಆರ್ಥಿಕ ಸ್ವಾವಲಂಬನೆ ಪಡೆಯುವ ತಂತ್ರಗಳ ಆವಿಷ್ಕಾರ ಮಾಹಿತಿ, ಕೃಷಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳ ಕುರಿತು ವ್ಯವಹಾರಿಕ ರೂಪದ ಪ್ರಾತ್ಯಕ್ಷಿಕೆ ಅನುಭವ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next