Advertisement

ಬೆಸ್ಕಾಂ ಕಾರ್ಯವೈಖರಿಗೆ ರೈತರ ಆಕ್ರೋಶ

06:35 PM Feb 16, 2021 | Team Udayavani |

ಹೊಳಲ್ಕೆರೆ: ನೀರಾವರಿ ಅಧಾರಿತ ಕೃಷಿ ಹಾಗೂ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ನೀರು ಬೇಕು. ಆದರೆ ಕೊಳವೆಬಾವಿಗಳಿಗೆ ಬೆಸ್ಕಾಂ ಸಮರ್ಪಕ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ನಡೆಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಸಮರ್ಪಕ ವಿದ್ಯುತ್‌ಸೌಲಭ್ಯವಿಲ್ಲದೆ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ.ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಹೋರಾಟನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಇಲಾಖೆ ದಿನಕ್ಕೆ 7 ಗಂಟೆ ಬದಲಿಗೆ 1 ಗಂಟೆ ವಿದ್ಯುತ್‌ ನೀಡುತ್ತಿದೆ. ಇದರಿಂದ ತೋಟಗಾರಿಕೆ ಬೆಳೆ ನೀರಿಲ್ಲದೆ ಒಣಗುವ ಸ್ಥಿತಿ ತಲುಪಿದೆ. ಜತೆಗೆ ರಾತ್ರಿ ಹೊತ್ತು ವಿದ್ಯುತ್‌ ನೀಡುವ ಕ್ರಮ ಸರಿಯಲ್ಲ. ರಾತ್ರಿ ಹೊತ್ತು ದೂರದ ತೋಟಗಳಲ್ಲಿ ಒಬ್ಬರೇ ನೀರು ಕಟ್ಟಲು ಸಾಧ್ಯವಿಲ್ಲ. ವನ್ಯಮೃಗ ಹಾಗೂ ವಿಷ ಜಂತುಗಳಿಗೆ ರೈತರು ಬಲಿಯಾಗುತ್ತಿದ್ದಾರೆ.

ಹಾಗಾಗಿ ನಿತ್ಯ 5 ಗಂಟೆ ವಿದ್ಯುತ್‌ ಸೌಲಭ್ಯ ಕಲ್ಪಿಸಿ ಕೊಡುವ ತನಕ ಬೆಸ್ಕಾಂ ಕಚೇರಿ ಆವರಣ ಬಿಟ್ಟು ಯಾವ ರೈತರೂ ಮನೆಗಳಿಗೆ ಹೋಗುವುದಿಲ್ಲ ಎಂದು ಘೋಷಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾಧ್ಯಕ್ಷ ಚಿಕ್ಕಬ್ಬಿಗೆರೆ ನಾಗರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಎಸ್‌. ಬಯಲಪ್ಪ,ಹೊಳಲ್ಕೆರೆ ತಾಲೂಕು ಅಧ್ಯಕ್ಷ ಅಪ್ಪರಸನಹಳ್ಳಿ ಎಂ.ಬಸವರಾಜಪ್ಪ, ನಗರಾಧ್ಯಕ್ಷ ಲೋಕೇಶ್‌, ಕಾರ್ಯದರ್ಶಿಅಜಯ್‌, ಕೋಟ್ರೆ ಶಂಕರಪ್ಪ ಸೇರಿದಂತೆ ಹೊಸದುರ್ಗ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ ರೈತ ಸಂಘದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಪಟ್ಟಣದ ಚಿತ್ರದುರ್ಗ ಪೆಟ್ರೋಲ್‌ ಬಂಕ್‌ನಿಂದ ಬೆಸ್ಕಾಂ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕೆರೆಗಳಿಗೆ ನೀರು ತುಂಬಿಸುವ ಕೆಲಸದಿಂದ ತಾಲೂಕಿನಲ್ಲಿರುವ ವಿದ್ಯುತ್‌ ಸಮಸ್ಯೆಗೆಮುಕ್ತಿ ಸಿಗುವುದಿಲ್ಲ. ಅದರ ಬದಲಿಗೆ ಇನ್ನಷ್ಟು ಭೀಕರ ಪರಿಸ್ಥಿತಿ ಎದುರಿಸಬೇಕಾಗಿ ಬರಬಹುದು. ತಕ್ಷಣ ತಾಲೂಕಿನ ವಿದ್ಯುತ್‌ಸಾಮರ್ಥ್ಯವನ್ನು ದ್ವಿಗುಣಗೊಳಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಮಾದರಿಯ ಸಿದ್ಧತೆಗಳನ್ನು ಸರಕಾರ ಕೈಗೊಳ್ಳಬೇಕು. –ಈಚಘಟ್ಟದ ಸಿದ್ಧವೀರಪ್ಪ, ರೈತ ಸಂಘದ ಕಾರ್ಯಾಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next