Advertisement

ವಿಮೆ-ಅಧಿಕಾರಿಗಳ ವಿರುದ್ಧ ರೈತಾಕ್ರೋಶ

11:38 AM Nov 17, 2019 | Team Udayavani |

ಸವದತ್ತಿ: ಬೆಳೆವಿಮೆ ಹಣಕ್ಕಾಗಿ ಒಂದು ತಿಂಗಳು ಕಾಲ ನಡೆಸಿದ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ತಾಲೂಕಾಡಳಿತ, ಸ್ಥಳೀಯ ತಹಶೀಲ್ದಾರ್‌ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿತು.

Advertisement

ಆದರೆ, ಅಧಿಕಾರಿಗಳ ಉಡಾಫೆ ಉತ್ತರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಉತ್ತಮ ಫಸಲು ಬಂದ ಜಮೀನುಗಳಿಗೆ ವಿಮೆ ಮೊತ್ತ ಜಮಾ ಆಗುತ್ತದೆ. ಆದರೆ ಬೆಳೆಹಾನಿಯಾಗಿರುವ ಜಮೀನುಗಳಿಗೆ ವಿಮೆ ಹಣ ಜಮೆಯಾಗುವುದಿಲ್ಲವೇಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಅದಕ್ಕೆ ಅಧಿಕಾರಿಗಳಉಡಾಫೆ ಉತ್ತರಕ್ಕೆ ಆಕ್ರೋಶಗೊಂಡ ರೈತರು, ಅಧಿಕಾರಿಗಳು ಮತ್ತು ವಿಮೆ ಕಂಪನಿ ಪ್ರತಿನಿಧಿ ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಹತ್ತು ವರ್ಷ ಕಳೆದರೂ ವಿಮೆಯ ಹಣ ಬಂದಿಲ್ಲ. ವಿಮಾ ಕಂಪನಿಯ ಪ್ರತಿನಿಧಿಯವರಿಗೆ ಈ ಕುರಿತು ಕೇಳಿದರೆ ನೀವು ವಿಮಾ ಹಣವನ್ನು ಸರಕಾರಕ್ಕೆ ತುಂಬಿದ್ದೀರಿ ಹೊರತು ನಮಗಿಲ್ಲ ಎಂದು ಬೇಜವಾಬ್ದಾರಿತನದ ಉತ್ತರ ನೀಡುತ್ತಾರೆ. ತಾಲೂಕಾಡಳಿತದಿಂದ ರೈತರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನೀಡುವವರ್ಯಾರೆಂದು? ತಮ್ಮ ಆಕ್ರೋಶ ಹೊರಹಾಕಿದರು.

ಶಾಸಕ ಆನಂದ ಮಾಮನಿ ಮಾತನಾಡಿ, ರೈತರ ಕುರಿತಾಗಿ ನಡೆಯುತ್ತಿರುವ ಅನ್ಯಾಯವನ್ನು ನಾವು ಸಹಿಸುವುದಿಲ್ಲ. ತಲಾಟಿಯಿಂದ ತಾಲೂಕಾಧಿಕಾರಿವರೆಗೆ ಯಾರೇ ಇರಲಿ, ರೈತರಿಗೆ ಅನ್ಯಾಯ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು. ರೈತರಿಗೆ ಸಿಗಬೇಕಾದ ಬೆಳೆವಿಮೆ ಮತ್ತುಇತರೆ ಸೌಲಭ್ಯಗಳು ಸಿಕ್ಕಿದ್ದರೆ ಇಂತಹ ಪರಿಸ್ಥಿತಿಗೆ ರೈತರು ತಲುಪುತ್ತಿರಲಿಲ್ಲ. ವಿಮೆ ಕಂಪನಿಯವರು ಸರ್ವೇಗೆ ಬಾರದೇ ರೈತರೊಂದಿಗೆ ಅನುಚಿತವಾಗಿನಡೆದುಕೊಳ್ಳುತ್ತಾರೆ. ಅವರೇನು ತಮ್ಮ ಮನೆಗಳಿಂದಕೊಡುವುದಿಲ್ಲ.

ಎಲ್ಲದಕ್ಕೂ ಒಂದು ಮಿತಿಯಿದೆ.ಅದರ ಸಮಯ ಕಳೆದುಕೊಂಡರೇ ಈಗಿರುವ ಪರಿಸ್ಥಿತಿಯೇ ಬದಲಾಗುತ್ತದೆ. ರೈತರೆಲ್ಲ ಬೆಳೆವಿಮೆ ಸಲುವಾಗಿ ಗುಂಪು-ಗುಂಪಾಗಿ ಪ್ರತಿಭಟನೆ ಮೇಲೆ ಪ್ರತಿಭಟನೆ ನಡೆಸಿದರು. ನಾವು ಕೂಡ ಅವರ ಬೇಡಿಕೆಗೆ ಬೆಂಬಲಿಸಿದೇವು. ಈ ಕುರಿತು ಜಿಲ್ಲಾಧಿ ಕಾರಿಗೆ ಮರುಪರಿಶೀಲಿಸಲು ತಿಳಿಸಲಾಗಿದೆ ಎಂದರು.

ಆನಂದ ಚೋಪ್ರಾ ಮಾತನಾಡಿ, ಧಾರವಾಡದಲ್ಲಿನ ವಿಮೆ ವ್ಯವಸ್ಥೆ ರೀತಿಯಲ್ಲಿಯೇ ಇಲ್ಲಿಯೂ ಪರಿಹಾರಕಲ್ಪಿಸುವ ವ್ಯವಸ್ಥೆಯಾಗಬೇಕು. ಅದನ್ನು ಬಿಟ್ಟು ಮತ್ತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಮಯ ಹಾಳು ಮಾಡುವುದು ಬೇಡ. ನೇರವಾಗಿ ರೈತರ ಖಾತೆಗೆ ಹಣ ನೀಡಿ ಎಂದರು.

Advertisement

ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿದರು. ತಹಶೀಲ್ದಾರ್‌ ಶಂಕರ ಗೌಡಿ, ಕೃಷಿ ಸಹಾಯಕ ನಿರ್ದೇಶಕ ಮಾರಡ್ಡಿ, ಎಪಿಎಂಸಿ ಅಧ್ಯಕ್ಷ ಜಗದೀಶ ಹನಶಿ, ವಿಮಾ ಕಂಪನಿ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next