ಸಕಲೇಶಪುರ: ರೈತರ ಹಿಡುವಳಿ ಜಮೀನುಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಕ್ರಮವಾಗಿ ಪ್ರವೇಶಿಸಿ ಏಕಾಏಕಿ ಗಿಡಗಳನ್ನು ಧ್ವಂಸ ಮಾಡುತ್ತಿರುವುದನ್ನುಕರ್ನಾಟಕ ಬೆಳೆಗಾರರ ಒಕ್ಕೂಟ ಉಗ್ರವಾಗಿ ಖಂಡಿಸುತ್ತದೆಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ತಾಲೂಕಿನ ಹಾನುಬಾಳು ಹೋಬಳಿ ಅಚ್ಚನಹಳ್ಳಿ ಗ್ರಾಮದಸುಭಾಷ್ ಮತ್ತು ಸಂತೋಷ್ ಎಂಬುವರ ಸ್ವಂತ ಹಿಡುವಳಿ ಜಮೀನು ಆದ ಸರ್ವೆ ನಂಬರ್ 157/2 ರಲ್ಲಿಕಾಫಿ ಗಿಡವನ್ನು ಹಾಕಲು 2000 ಬುಟ್ಟಿಗಳನ್ನು ತಂದು ಶೇಖರಿಸಿಟ್ಟ ಜಾಗದಲ್ಲಿ ಅರಣ್ಯ ಇಲಾಖೆಯ ವಾಚರ್ ಗಳು ಏಕಾಏಕಿ ಬಂದು ಮಚ್ಚಿನಿಂದ ಕೊಚ್ಚಿ ಧ್ವಂಸ ಮಾಡಿದ್ದಾರೆ. ಹಾಗೂ ಸ್ವಂತ ಹಿಡುವಳಿ ಜಮೀನುಗಳಲ್ಲಿಕೆಲಸ ಮಾಡಬಾರದೆಂದು ಗ್ರಾಮದ ರೈತರಿಗೆ ದಿನನಿತ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ದೇವಾಲದಕೆರೆ ಗ್ರಾಪಂ ಮಾಜಿ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡಿ, 53 ಹಾಗೂ 57 ಮತ್ತು 94 ಗಳಲ್ಲಿ, ಅರ್ಜಿ ಹಾಕಿರುವ ಹಲವರಿಗೆ ಭೂಮಿಮಂಜೂರಾಗಿ ಪಹಣಿಯಲ್ಲಿ ದಾಖಲಾಗಿದ್ದರು. ಹಲವುಭೂಮಿಗಳಿಗೆ ತಾಲೂಕು ಆಡಳಿತ ಪೋಡಿ ಮಾಡಿಕೊಟ್ಟಿರುವುದಿಲ್ಲ. ಇದರಿಂದ ಹಲವು ಗೊಂದಲಗಳು ಉಂಟಾಗುತ್ತಿದೆ. ಅರಣ್ಯ ಇಲಾಖೆಯ ಕೆಲವು ವಾಚರ್‌ಗಳು ಈ ಹಿಂದೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಇಂತಹವರನ್ನು ವಾಚರ್‌ಗಳಾಗಿ ನೇಮಕ ಮಾಡುವುದು ಎಷ್ಟು ಸರಿ?ಕೂಡಲೇ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪಗಳಿರುವ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ವಜಾ ಮಾಡಲು ಕ್ರಮಕೈಗೊಂಡು ಉತ್ತಮ ಚಾರಿತ್ರ್ಯ ಇರುವವರನ್ನು ವಾಚರ್‌ಗಳಾಗಿನೇಮಕಾತಿ ಮಾಡಲು ಕ್ರಮಕೈಗೊಳ್ಳಬೇಕು.ಹಿಡುವಳಿ ಜಾಗಕ್ಕೆ ನುಗ್ಗಿ ರೈತರ ಕಾμ ಗಿಡಗಳನ್ನುನಾಶಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧಕ್ರಮಕೈಗೊಳ್ಳಬೇಕು. ಈಗಾಗಲೆ ಈ ಘಟನೆ ಕುರಿತುಮಾಜಿ ಪ್ರಧಾನಿ ಎಚ್.ಡಿ ದೇವೆಗೌಡರು ಸೇರಿದಂತೆ ಹಲವು ಮುಖಂಡರ ಗಮನಕ್ಕೆ ತರಲಾಗಿದೆ.
ಬೆಳೆಗಾರರಾದ ಸಂತೋಷ್ ಹಾಗೂ ಸುಭಾಷ್‌ರವರಿಗೆಉಂಟಾಗಿರುವ ನಷ್ಟವನ್ನು ಅರಣ್ಯ ಇಲಾಖೆಯವರು ತುಂಬಿ ಕೊಡಬೇಕು. ಇಲ್ಲದಿದ್ದಲ್ಲಿ ಅಚ್ಚನಹಳ್ಳಿಗ್ರಾಮಾಭಿವೃದ್ಧಿ ಸಮಿತಿ ಹಾಗೂ ಬೆಳೆಗಾರರ ಸಂಘಟನೆಗಳನೆರವಿನಿಂದ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘದ ಕಾರ್ಯದರ್ಶಿ ರಾಜೀವ್, ಬೆಳೆಗಾರಾದ ಹೆಬ್ಬಸಾಲೆ ಪ್ರಕಾಶ್, ಸುಭಾಷ್ ಮತ್ತಿತರರು ಹಾಜರಿದ್ದರು.
ಜೆಸಿಬಿಯಿಂದ ಕಂದಕ ಸೃಷ್ಟಿ : ರೈತರಿಗೆ ಯಾವುದೇ ತರಹದ ನೋಟಿಸ್ ಸಹ ನೀಡದೆಗ್ರಾಮದ ಸುಮಾರು ಹಿಡುವಳಿ ಜಮೀನುಗಳಿಗೆಹೋಗುವ ರಸ್ತೆಯನ್ನು ಜೆಸಿಬಿಯಿಂದ ಕಂದಕನಿರ್ಮಾಣ ಮಾಡಿ ಹಿಡುವಳಿ ಜಮೀನಿಗೆ ಹೋಗಲುತೊಂದರೆ ಮಾಡಿದ್ದಾರೆ, ರೈತರು ಜಮೀನುಗಳಿಗೆಹೋಗಲು ಹೆಲಿಕಾಪ್ಟರ್ ಬಳಸಬೇಕೆ? ಇದೇ ರೀತಿಬೇಲೂರು ತಾಲೂಕಿನ ರೈತರೋರ್ವರ ಜಮೀನಿಗೆ ನುಗ್ಗಿದ ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು 10 ಎಕರೆ ಕಾಫಿ ತೋಟ ನಾಶ ಮಾಡಿದ್ದಾರೆ. ಅರಣ್ಯಇಲಾಖೆಯವರು ರೈತರ ಮೇಲೆ ಈ ರೀತಿ ದಬ್ಟಾಳಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.