Advertisement
ನಗರದ ಗನ್‌ಹೌಸ್ ಬಳಿ ಇರುವ ಕುವೆಂಪು ವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಾಸನದ ರೈತ ಮುಖಂಡ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಭಾಗದಿಂದ ಹೊರಟ ರೈತರಿಗೆ ಬೀಳ್ಕೊಡುಗೆ ನೀಡಲಾಯಿತು. ಮೈಸೂರಿನಿಂದ ಹೊರಟ ರೈತರು ಚಾಮರಾಜನಗರದ ಅಮೃತಭೂಮಿಯಲ್ಲಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಮಾಧಿಗೆ ನಮಸ್ಕರಿಸಿ ದೆಹಲಿ ಕಡೆಗೆ ತೆರಳಿದರು. ರೈತರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ, ಆತ್ಮಸ್ಥೆçರ್ಯ ತುಂಬಿ, ದಿನಸಿ, ಅವಶ್ಯಕ ವಸ್ತುಗಳನ್ನು ನೀಡಿ ಕಳುಹಿಸಿಕೊಡಲಾಯಿತು.
Related Articles
Advertisement
ನಾಲ್ಕು ಟೆಂಪೋದಲ್ಲಿ 100 ಮಂದಿ ಪಯಣ
100 ಮಂದಿ ರೈತರು ನಾಲ್ಕು ಟೆಂಪೋಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದೇವೆ. ಟೆಂಪೋದಲ್ಲಿ ಮಲಗಲು ಹಾಸಿಗೆ, ಸೇರಿದಂತೆ ಅವಶ್ಯ ವಸ್ತುಗಳನ್ನು
ಶೇಖರಿಸಿಕೊಂಡಿದ್ದೇವೆ. ಐದು ದಿನಗಳ ಕಾಲ ಪ್ರಯಾಣಿಸಿ ಜ.25ಕ್ಕೆ ದೆಹಲಿ ತಲುಪಲಿದ್ದೇವೆ. ಇವೆರಡು ಟೆಂಪೋದೊಂದಿಗೆ ಮೂರು ಕಾರು ಸಹ ದೆಹಲಿಗೆ ತೆರಳಲಿದೆ. 2ನೇ ಹಂತದಲ್ಲಿ ರಾಜ್ಯದ ವಿವಿಧ ಭಾಗದ 300 ರೈತರು ಜ.23ಕ್ಕೆ ಹೊರಟು ರೈಲಿನ ಮೂಲಕ ದೆಹಲಿಗೆ ಆಗಮಿಸಲಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಬೆಂಬಲಿಸಿ ಬೆಂಗಳೂರಿನಲ್ಲಿ ನಡೆಯಲಿರುವ ರ್ಯಾಲಿ ಪ್ರಯುಕ್ತ ಐಕ್ಯ ಹೋರಾಟದಿಂದ ಬೈಕ್ ರ್ಯಾಲಿ ಪರೇಡ್ ನಡೆಸಲಾಗುವುದು ಎಂದು ರೈತ ಮುಖಂಡ ಅರಳಾಪುರ ಮಂಜೇಗೌಡ ತಿಳಿಸಿದರು.
ಅಗತ್ಯ ವಸ್ತುಗಳ ವಿತರಣೆ
ಬೀಳ್ಕೊಡುಗೆ ವೇಳೆ ರೈತರಿಗೆ 50 ಲೀಟರ್ ಡೀಸೆಲ್, 50 ಕೆ.ಜಿ. ಅಕ್ಕಿ, ತೆಂಗಿನಕಾಯಿ ಮತ್ತು ತರಕಾರಿ 25 ಕೆ.ಜಿ.ಗೂ ಅಧಿಕ, 5 ಸಾವಿರ ರೂ. ನಗದು ಹಾಗೂ ಅಕ್ಷರ ದಾಸೋಹ ಸಂಸ್ಥೆಯ ರಾಜೇಂದ್ರ ಅವರಿಂದ ನೂರು ಮಂದಿಗೆ ಆಗುವಷ್ಟು ಸೋಪು, ಬ್ರಶ್ ಇತ್ಯಾದಿ ವಸ್ತುಗಳನ್ನು ನೀಡಲಾಯಿತು.