ಬಂಗಾರಪೇಟೆ: ತಾಲೂಕಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಕೆರೆ, ರಾಜಕಾಲುವೆ, ತೆರವುಗೊಳಿಸಲು ವಿಫಲವಾಗಿರುವ ತಾಲೂಕು ಆಡಳಿತದ ವಿರುದ್ಧ ಜೂ.14ರ ಮಂಗಳವಾರ ಬಂಗಾರಪೇಟೆ-ಕೆಜಿಎಫ್ ರಾಜ್ಯ ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಹೇಳಿದರು.
ಪಟ್ಟಣದ ಅರಣ್ಯ ಉದ್ಯಾನವನದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ತಿಗಳನ್ನು ಉಳಿಸುವಂತೆ ದಾಖಲೆಗಳ ಸಮೇತ ತಾಲೂಕು ಆಡಳಿತಕ್ಕೆ ಮನವಿ ನೀಡಿ ತಿಂಗಳು ಕಳೆದರೂ ರಾಜಕೀಯ ಒತ್ತಡ ಹಾಗು ಭೂ ಮಾμಯಾ ದಂಧೆಕೋರರ ಒತ್ತಡಕ್ಕೆ ಮಣಿದು ಕೆರೆ, ರಾಜಕಾಲುವೆಗಳನ್ನು ಉಳಿಸಲು ಫಲವಾಗಿ ಪ್ರತಿ ವರ್ಷ ಮಳೆ ಬಂದಾಗ ಬಡವರ ಬದುಕು ಬೀದಿಗೆ ಬೀಳುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ವೆಯರ್ ನೆಪದಲ್ಲಿ ಒತ್ತುವರಿ ತೆರವುಗೊಳಿಸಲು ಮೀನಮೇಷ ಎಣಿಸುತ್ತಿದ್ದಾರೆ. ತಾಲೂಕಾದ್ಯಂತ ಸರ್ಕಾರಿ ಆಸ್ತಿಗಳು ದಿನೇದಿನೆ ಕಾಣೆಯಾಗಿವೆ. ಉಳಿಸಬೇಕಾದ ಕಂದಾಯ ಸರ್ವೆ ಅಧಿಕಾರಿಗಳೇ ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿ ಹೊಸ ನಂಬರ್ ನೀಡುವ ಮುಖಾಂತರ ಸರ್ಕಾರಿ ಆಸ್ತಿಗಳ ಮರಣ ಶಾಸನ ಬರೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಗಲ್ ಮುನಿಯಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಹಾಗೂ ಅಭಿವೃದ್ಧಿಗೆ ತಿಂಗಳಾನುಗಟ್ಟಲೇ ಅಂಗೈಗಲ ಸರ್ಕಾರಿ ಭೂಮಿ ಸಿಗುವುದಿಲ್ಲ. ಆದರೆ, ರಾತ್ರೋರಾತ್ರಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಂಜೂರು ಮಾಡಲು ಭೂಮಿ ಸಿಗುತ್ತದೆಯೇ ಎಂದು ಅಧಿಕಾರಿಗಳನ್ನು ಸಭೆಯಲ್ಲಿ ಪ್ರಶ್ನೆ ಮಾಡಿದರು.
Related Articles
ತಾಲೂಕು ಕಚೇರಿ ದಲ್ಲಾಳಿಗಳ ಕಚೇರಿಯಾಗಿ ಮಾರ್ಪಟ್ಟು ಪ್ರತಿ ಕೆಲಸಕ್ಕೂ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಿದೆ. ಸರ್ಕಾರಿ ಆಸ್ತಿಗಳನ್ನು ಉಳಿಸುವಂತೆ ಜೂ. 14ರಂದು ರಾಜ್ಯ ಹೆದ್ದಾರಿ ಬಂಗಾರಪೇಟೆ-ಕೆಜಿಎಫ್ ಮುಖ್ಯ ರಸ್ತೆಯ ಆರ್‌ಆರ್ ಕಲ್ಯಾಣ ಮಂಟಪದ ಮುಂದೆ ರಸ್ತೆ ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಪ್ರಧಾನ ಕಾರ್ಯದರ್ಶಿ ಮುನ್ನಾ, ಕೆಜಿಎಫ್ ತಾಲೂಕು ಅಧ್ಯಕ್ಷ ವೇಣು, ಸುರೇಶ್‌ರೆಡ್ಡಿ, ಸುರೇಶ್ ಗೌಡ, ವೆಂಕಟರಾಮಪ್ಪ, ಬೂದಿಕೋಟೆ ನಾಗಯ್ಯ, ಮುನಿರಾಜು, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಪ್ರಭಾಕರ್, ಮುದುವಾಡಿ ಚಂದ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಇತರರಿದ್ದರು.
ಅಧಿಕಾರಿಗಳಿಂದ ಹಿಂದೇಟ : ಸ್ಥಳೀಯ ಶಾಸಕರು ಅಭಿವೃದ್ಧಿಪಡಿಸಿರುವ ಎಸ್ ಎನ್ ಸಿಟಿ ಲೇಔಟ್‌ನಲ್ಲಿ ಸರ್ಕಾರಿ ರಸ್ತೆ, ಗೋಮಾಳ, ಕೆರೆ ಜಮೀನು ಒತ್ತುವರಿಯಾಗಿದೆ. ಜತೆಗೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ 35 ಗುಂಟೆ ಗುಂಡು ತೋಪು ದೇವಸ್ಥಾನದ ನೆಪದಲ್ಲಿ ಒತ್ತುವರಿ ಮಾಡಿಕೊಂಡು ಹೆಬ್ಟಾಗಿಲು ನಿರ್ಮಿಸಿದ್ದು, ಎಲ್ಲಾ ದಾಖಲೆಗಳು ಅಧಿಕಾರಿಗಳ ಬಳಿ ಇದ್ದರೂ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವುದು ಏಕೆ?, ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯವೇ ಎಂದು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.