Advertisement
ಈ ಮಧ್ಯೆ ಕಾರ್ಡ್‌ಗಾಗಿ ಹೊಸದಾಗಿ ಸಮೀಕ್ಷೆ ನಡೆಸಿ ದಾಖಲೆಗಳನ್ನು ಕೆ-ಕಿಸಾನ್ ಆ್ಯಪ್ ಮೂಲಕ ಅಪ್‌ಲೋಡ್ ನಡೆಸಲು ಇಲಾಖೆ ಮುಂದಾಗಿದ್ದು, ಆ್ಯಪ್ ಪರೀಕ್ಷಾ ಹಂತದಲ್ಲಿದೆ. ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದ ದಾಖಲೆಗಳನ್ನು ಭೂಮಿ ಸಾಫ್ಟ್ವೇರ್‌ಗೆ ಅಪ್‌ಲೋಡ್ ಮಾಡಲಾಗಿದೆ. ಆದರೆ ಇದೀಗ ಅರ್ಜಿ ಸಲ್ಲಿಸಿದವರು ಸೇರಿದಂತೆ ಎಲ್ಲ ರೈತರಿಗೂ ಕಾರ್ಡ್ ಒದಗಿಸಲು ಇಲಾಖೆ ಮುಂದಾಗಿದೆ. ಹೀಗಾಗಿ ಕೆ-ಕಿಸಾನ್ ಆ್ಯಪ್ ಮೂಲಕ ರೈತರ ದಾಖಲೆ ಅಪ್‌ಲೋಡ್ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ರೈತರೇ ಅಪ್‌ಲೋಡ್ ಮಾಡಬೇಕು ಎಂದಾದರೆ ಅದು ಸಾಧ್ಯವಾಗುವುದು ಕಷ್ಟ. ಮೊಬೈಲ್ ಹೊಂದಿರದ ರೈತರೇ ಅತ್ಯಧಿಕವಿದ್ದು, ಗ್ರಾಮೀಣ ಭಾಗದಲ್ಲಿ ಯಶಸ್ವಿಯಾಗುವ ಬಗ್ಗೆ ಪ್ರಶ್ನೆ ಮೂಡಿದೆ.
ಕಾರ್ಡ್‌ಗಾಗಿ ಸಂಗ್ರಹವಾದ ದಾಖಲೆಗಳನ್ನು ಕೃಷಿ ಜಂಟಿ ನಿರ್ದೇಶಕರ ಬಳಿಕ ಮೇಲಧಿಕಾರಿಗಳಿಂದ ಮರು ಪರಿಶೀಲನೆ ನಡೆಯುತ್ತದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಆರಂಭದಲ್ಲಿ ಅರ್ಜಿ ಸಲ್ಲಿಸಿದ್ದ ರೈತರ ದಾಖಲೆಗಳ ಅಪ್‌ಲೋಡ್ ಕೆಲಸ ಮುಗಿದಿತ್ತು. ಆದರೆ ದಾಖಲೆಗಳ ಪರಿಶೀಲನೆ ರಾಜ್ಯ ಮಟ್ಟದಲ್ಲೇ ನಡೆಯುವುದರಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ನೇರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಇದೀಗ ಹೊಸ ಸಮೀಕ್ಷೆ ಮತ್ತು ಎಲ್ಲ ರೈತರಿಗೆ ಕಾರ್ಡ್ ನೀಡಲು ಉದ್ದೇಶಿಸಿರುವುದರಿಂದ ಯೋಜನೆಗೆ ಮತ್ತಷ್ಟು ಸಮಯ ಹಿಡಿಯುವ ಸಾಧ್ಯತೆ ಇದೆ. ಏನಿದು ಕೆ-ಕಿಸಾನ್ ಕಾರ್ಡ್?
2012ರಲ್ಲಿ ಸರಕಾರ ಹೊರತಂದ ಯೋಜನೆ. ಕೆ.ಕಿಸಾನ್ ಕಾರ್ಡ್‌ನಲ್ಲಿ ರೈತರ ಪ್ರಮುಖ ದಾಖಲೆಗಳು ನಮೂದಾಗುತ್ತವೆ. ಹೆಸರು, ವಿಳಾಸ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ದೂರವಾಣಿ ಸಂಖ್ಯೆ, ಜಮೀನು ದಾಖಲೆಗಳ ಮಾಹಿತಿ ಒಳಗೊಂಡಿರುತ್ತದೆ. ಹೀಗಾಗಿ ರೈತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಕ್ಕಾಗಿ ಬೇರೆ ದಾಖಲೆಗಳನ್ನು ಪದೇಪದೇ ನೀಡಬೇಕಾಗಿಲ್ಲ. ಜತೆಗೆ ರೈತರು ಪಡೆದ ಸೌಲಭ್ಯಗಳ ವಿವರವೂ ಕಿ.ಕಿಸಾನ್ ಕಾರ್ಡ್‌ನಲ್ಲಿ ನಮೂದಾಗುತ್ತದೆೆ. ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆಯುವ ಸೌಲಭ್ಯ, ಯಂತ್ರೋಪಕರಣ ಕಾರ್ಡ್ ತೋರಿಸಿ ಪಡೆಯಬಹುದು. ಕೃಷಿ ಕುರಿತಾದ ವಿವಿಧ ಮಾಹಿತಿಗಳೂ ಇದರಿಂದ ಲಭ್ಯವಾಗಲಿದೆ.
Related Articles
– ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿ
Advertisement
ಕೆ-ಕಿಸಾನ್ ಕಾರ್ಡ್ ಅರ್ಜಿ ಸಲ್ಲಿಸಿದವರೂ ಸೇರಿ ಎಲ್ಲ ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಹೊಸದಾಗಿ ಬೆಳೆ ಸಮೀಕ್ಷೆ ನಡೆಯುತ್ತಿದೆ. ಹೊಸ ಕೆ-ಕಿಸಾನ್ ಆ್ಯಪ್ ಪರೀಕ್ಷೆ ಹಂತದಲ್ಲಿದೆ. ಅದರ ಮೂಲಕ ರೈತರೂ ದಾಖಲೆ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. – ಇಮೆÂನುವೆಲ್ ಆ್ಯಂಟೋನಿ, ಜಂಟಿ ಕೃಷಿ ನಿರ್ದೇಶಕ. – ಜಿವೆಂದ್ರ ಶೆಟ್ಟಿ , ಗರ್ಡಾಡಿ