ಬಸವಕಲ್ಯಾಣ: ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹೈರಾಣು ಆಗಿರುವ ರೈತರು ಈ ವರ್ಷವಾದರೂ ಉತ್ತಮ ಮಳೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಹೊಲ ಹದಮಾಡಿ ಮಳೆಗಾಗಿ ಆಕಾಶದತ್ತ ಮುಖಮಾಡಿ ಕುಳಿತ್ತಿದ್ದಾರೆ.
Advertisement
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಸವಕಲ್ಯಾಣ ತಾಲೂಕಿನ ಒಟ್ಟು 73.247 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ರೈತರು ಬಿತ್ತನೆಗಾಗಿ ಸಿದ್ಧತೆ ಮಾಡಿಕೊಂಡು ಮಳೆ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement
ಸೋಯಾ ಬೀಜಕ್ಕೆ ಬೇಡಿಕೆ ಹೆಚ್ಚು: ತಾಲೂಕಿನ ಒಟ್ಟು 73.247 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಬಿತ್ತನೆ ಮಾಡಲಾಗುತ್ತಿದ್ದು, ಉಳಿದ ಪ್ರದೇಶದಲ್ಲಿ ಹೆಸರು, ತೊಗರಿ, ಉದ್ದು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅತಿಸಣ್ಣ ಮತ್ತು ಸಣ್ಣ ರೈತರಿಗೆ ಪ್ರತಿ ಕೆ.ಜಿಗೆ 25 ರೂ. ರಿಯಾಯಿತಿ ಹಾಗೂ ಪ.ಜಾ.-ಪ.ಪಂ. ರೈತರಿಗೆ ಪ್ರತಿ ಕೆಜಿಗೆ 37.50 ರೂ. ನಷ್ಟು ರಿಯಾಯಿತಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದು ಕೊಳ್ಳಲು ಮೊದಲು ನೋಂದಣಿ ಮಾಡಿಕೊಳ್ಳಬೇಕು. ಮತ್ತು ಅಗತ್ಯ ದಾಖಲೆಗಳಾದ ಹೋಲ್ಡಿಂಗ್, ಆಧಾರ್ ಕಾರ್ಡ್ ನೀಡಬೇಕು.
ರೈತ ಸಂಪರ್ಕ ಕೇಂದ್ರದ ಮಾಹಿತಿ: ಕೋಹಿನೂರ: 9964243135, ಮಂಠಾಳ: 9663753448, ಮುಡಬಿ: 8277930535, ರಾಜೇಶ್ವರ: 9686398777, ಬಸವಕಲ್ಯಾಣ: 9590571466, ಹುಲಸೂರ: 8792926557.
ತಾಲೂಕಿನ ರೈತರ ಅಗತ್ಯಕ್ಕೆ ತಕ್ಕಂತೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಹೀಗಾಗಿ ಬಿತ್ತನೆಗೆ ಸಂಬಂಧ ಪಟ್ಟಂತೆ ರೈತರು ಆಯಾ ರೈತ ಸಂಪರ್ಕ ಕ್ಷೆಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು.•ವೀರಶೆಟ್ಟಿ ರಾಠೊಡ,
ಸಹಾಯಕ ಕೃಷಿ ನಿರ್ದೇಶಕ, ಬಸವಕಲ್ಯಾಣ