Advertisement

ಬಹುದಿನಗಳ ರೈತರ ಬೇಡಿಕೆ ಈಡೇರಿಕೆ: ಶಾಸಕ ಕತ್ತಿ

08:19 AM Jul 02, 2019 | Team Udayavani |

ಹುಕ್ಕೇರಿ: ಬೇಸಿಗೆಯಲ್ಲಿ ನೀರಿನ‌ ಸಮಸ್ಯೆ ಎದುರಿಸುತ್ತಿರುವ ಹಿರಣ್ಯಕೇಶಿ ನದಿಯ ದಡದಲ್ಲಿ ಬರುವ ಗ್ರಾಮಗ‌ಳ ಹತ್ತಿರ ನಿರ್ಮಿಸುತ್ತಿರುವ ಬ್ರಿಜ್‌ ಕಮ್‌ ಬ್ಯಾರೇಜ್‌ಗಳಿಂದ ಹಾಗೂ ಕರೆಗಳಗೆ ನೀರು ತುಂಬಿಸುವ ಯೋಜನೆಗಳು ರೈತರಿಗೆ ವರದಾನವಾಗಲಿದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

Advertisement

ತಾಲೂಕಿನ ಸುಲ್ತಾನಪುರ ಬಳಿ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ 20 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ರಿಜ್‌ ಕಮ್‌ ಬ್ಯಾರೇಜ್‌ ಲೋಕಾರ್ಪಣೆ ಹಾಗೂ 2ನೇ ಹಂತದ 11 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, ರೈತರ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆ ಮಳೆಗಾಲದಲ್ಲಿ ನೀರಿನಿಂದ ಮುಳಗಿ ರಸ್ತೆ ಸಂಪರ್ಕಕ್ಕೆ ಜನರಿಗೆ ತೊಂದರೆಯಾಗುತ್ತಿತ್ತು. ಸದ್ಯ ಈ ಕಾಮಗಾರಿಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ತಾಲೂಕಿನಲ್ಲಿ ಕಳೆದ ವರ್ಷ 22 ಕೆರೆಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸಲಾಗಿತ್ತು. ಈ ವರ್ಷ ಹೆಚ್ಚವರಿ 11 ಕೆರೆಗಳಾದ ಕಣಗಲಾ, ಬಾಡವಾಡಿ, ಆಲೂರ ಶಿಡ್ಲಹೊಂಡ, ನೇರ್ಲಿ, ಎಲಿಮುನ್ನೋಳಿ, ಯಾದಗೂಡ, ಬೆಳವಿ, ಶೇಲಾಪುರ, ಶಿರಹಟ್ಟಿ, ಕೆಂಚನಟ್ಟಿ, ಕರಗಾಂವ ಸೇರಿದಂತೆ 33 ಕೆರೆಗಳಿದ್ದು, ಅದರಲ್ಲಿ ಹುಕ್ಕೇರಿ ತಾಲೂಕಿನಲ್ಲಿ 27 ಹಾಗೂ ಚಿಕ್ಕೋಡಿ ತಾಲೂಕಿನ 6 ಕೆರೆ ಸೇರಿದಂತೆ ಎಲ್ಲ ಕರೆಗಳಿಗೆ ಅವಧಿಯೊಳಗೆ ಪ್ರಾಯೋಗಿಕವಾಗಿ ನೀರು ತುಂಬಿಸಗುವುದು ಎಂದರು.

ತಾಪಂ ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ ಮಾತನಾಡಿದರು. ಈ ವೇಳೆ ಮಾಜಿ ಸಚಿವ ಶಶಿಕಾಂತ ನಾಯಿಕ, ವಿದ್ಯುತ್‌ ಸಹಕಾರಿ ಸಂಘದ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಪ್ಪಾಸಾಹೇಬ ಶಿರ‌ಕೋಳಿ, ಶಿವನಗೌಡ ಮದವಾಲ. ಶ್ರೀಶೈಲ್ ಹಿರೇಮಠ, ಬಂಡು ಹತ್ತನೂರೆ, ಅನುಸೂಯಾ ಮಾಳಗೆ, ಮಹೇಶ ಕುಂಬಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next