Advertisement

ಅನ್ನದಾತರನ್ನು ಪ್ರತಿ ನಿತ್ಯವೂ ಸ್ಮರಿಸುವಂತಾಗಲಿ

02:30 PM Dec 24, 2020 | Suhan S |

ಚಿಕ್ಕಬಳ್ಳಾಪುರ: ನಾವು ಒಂದು ದಿನ ಮಾತ್ರ ರೈತರನ್ನು ನೆನೆದರೆ ಸಾಲದು, ಪ್ರತಿ ದಿನ ಅವರನ್ನು ಸ್ಮರಿಸಬೇಕು. ಆಗ ಮಾತ್ರ ರೈತ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿಇಲಾಖೆ, ಕೃಷಿಕ ಸಮಾಜ ಹಾಗೂ ಚಿಂತಾಮಣಿಯ ಕೃಷಿವಿಜ್ಞಾನಕೇಂದ್ರದಸಹಯೋಗದಲ್ಲಿಬುಧವಾರಆಯೋಜಿಸಿದ್ದರಾಷ್ಟ್ರೀಯ ರೈತ ದಿನಾಚರಣೆ ಮತ್ತು ಕಿಸಾನ್‌ಗೊàಷ್ಠಿ, ರೈತಗುಂಪುಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿತ್ಯವೂ ಹೊಟ್ಟೆಗೆ ಅನ್ನ ಕೊಡುವ ಮೂಲಕ ರೈತ ಜಗತ್ತನ್ನು ಬೆಳಗುತ್ತಿದ್ದಾನೆ. ರೈತ ಇಲ್ಲದಿದ್ದರೆ ದೇಶವೇ ಇಲ್ಲ. ಅಂತಹ ಶ್ರಮಿಕ ರೈತನಿಗೆ ಗೌರವ ಕೊಡಬೇಕಿದೆ. ಕೃಷಿ ಯೋಜನೆಗಳ ಬಗ್ಗೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು.ರೈತರು ವಿವಿಧ ಸವಲತ್ತು ಪಡೆದು ಸಬಲರಾಗಬೇಕೆಂದರು.

ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ಮಂಜುನಾಥ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿ ಅಗತ್ಯ. ಗ್ರಾಮೀಣ ಭಾಗದ ರೈತರು ತಮ್ಮ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮಾಡಿಕೊಂಡಾಗ ಮತ್ತಷ್ಟು ಲಾಭ ಗಳಿಸಬಹುದು ಎಂದುಕಿವಿಮಾತು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್‌.ರೂಪಾ, ಉಪ ಕೃಷಿ ನಿರ್ದೇಶಕ ಎಚ್‌.ಎಲ್‌.ಚಂದ್ರಶೇಖರ್‌, ಸಹಾಯಕ ಕೃಷಿನಿರ್ದೇಶಕ ಎ.ಕೇಶವರೆಡ್ಡಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಂಜನ್‌ಕುಮಾರ್‌, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ರೈತ ಸಂಘದ ಮುಖಂಡರು ಇದ್ದರು.

Advertisement

ಕೊತ್ತೂರು ಗ್ರಾಮದಲ್ಲಿ ರೈತ ದಿನಾಚರಣೆ :

ಚಿಕ್ಕಬಳ್ಳಾಪುರ: ಜಿಲ್ಲೆಯ ಆನೆಮಡುಗು ಕೊತ್ತೂರು ಗ್ರಾಮದಲ್ಲಿ ರಾಜ್ಯ ಮಾನವ ಹಕ್ಕುಗಳ ಜನಪರ ಒಕ್ಕೂಟದ ಜಿಲ್ಲಾ ಶಾಖೆ ವಿಶಿಷ್ಟವಾಗಿ ರೈತ ದಿನಾಚರಣೆ ಆಚರಿಸಿತು. ಒಕ್ಕೂಟದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನರ್ಮದಾರೆಡ್ಡಿ ಅವರ ನೇತೃತ್ವದಲ್ಲಿಎ-ಕೊತ್ತೂರುಆನೆಮಡುಗು ಗ್ರಾಮದಲ್ಲಿಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಅಲ್ಲದೇ, ಪ್ರಗತಿಪರ ರೈತ ಮಕ್ಕಳಿಗೆ ನೆನಪಿನಕಾಣಿಕೆ ನೀಡಲಾಯಿತು.

ಮುಖ್ಯ ಅತಿಥಿ, ಜಿಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್‌ ಮಾತನಾಡಿ,ಕೇಂದ್ರ-ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವಮನೋಭಾವ ಬೆಳೆಸಿಕೊಳ್ಳಬೇಕೆಂದರು. ಮಾನವ ಹಕ್ಕುಗಳ ಜನಪರ ಒಕ್ಕೂಟದ ಜಿಲ್ಲಾಧ್ಯಕ್ಷ ಹನುಮಂತಪ್ಪ , ಮಾನವಹಕ್ಕುಗಳ ಜನಪರ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆನರ್ಮದಾರೆಡ್ಡಿ, ಮಾತನಾಡಿದರು. ಪ್ರಗತಿಪರ ರೈತರಾದ ನರ ಸಿಂಹಪ್ಪ, ನಾರಾಯಣಸ್ವಾಮಿ, ಚಿಕ್ಕನಾರಾಯಣಸ್ವಾಮಿ, ಚಿಕ್ಕನರಸಿಂಹಮೂರ್ತಿ, ದೊಡ್ಡ ಮಲ್ಲಪ್ಪ, ಪಿಳ್ಳಯ್ಯಪ್ಪ, ಅನುಸೂ ಯಮ್ಮ ಅವರನ್ನು ಸನ್ಮಾನಿಸ ಲಾಯಿತು. ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕೋಶಾಧ್ಯಕ್ಷಕುಂಬಿ ನರಸಿಂಹಮೂರ್ತಿ, ಸದಸ್ಯ ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next