Advertisement

ರೈತರ ದಿನ ಪ್ರತಿ ಹಳ್ಳಿ ಯಲ್ಲೂ ಆಚರಣೆಯಾಗಲಿ

01:58 PM Dec 27, 2020 | Suhan S |

ಬಾಗಲಕೋಟೆ: ರೈತ ದಿನಾಚರಣೆ ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಆಚರಣೆ ಆಗಬೇಕು ಎಂದುಜಂಟಿ ಕೃಷಿ ನಿರ್ದೇಶಕಿ ಡಾ|ಚೇತನಾ ಪಾಟೀಲ ಹೇಳಿದರು.

Advertisement

ನವನಗರದ ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ, ಭಾರತೀಯಸ್ಟೇಟ್‌ ಬ್ಯಾಂಕ್‌, ಜಿಲ್ಲಾ ಮಾರಾಟ ಕೇಂದ್ರ, ಕೃಷಿಕಸಮಾಜ ಮತ್ತು ಐಎಟಿ ಸಹಯೋಗದಲ್ಲಿ ಕೃಷಿವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಹಮ್ಮಿಕೊಂಡರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕಮದಲ್ಲಿ ಮಾತನಾಡಿದರು.

ಮೊಬೈಲ್‌ ಆಪ್‌ ಮೂಲಕ ರೈತರು ಬೆಳೆ ಸಮೀಕ್ಷೆಮಾಡಬಹುದು. ರೈತ ಸಂಪರ್ಕ ಕೇಂದ್ರಗಳಲ್ಲಿರೈತರ ವಿವರವನ್ನು ಫ್ರುಟ್ಸ್‌ ತಂತ್ರಾಂಶದಲ್ಲಿಅಳವಡಿಸಲು (ಸರ್ವೆ ನಂ., ಆಧಾರ ನಂಬರ್‌,ಮೊಬೈಲ್‌ ನಂಬರ್‌) ನೀಡಬೇಕು. ಮಿಶ್ರ ಬೆಳೆ,ಬೀಜ ಸಂಸ್ಕರಣೆ, ರೈತ ಉತ್ಪಾದಕರ ಸಂಸ್ಥೆಯ ಬಗ್ಗೆ ತಿಳಿಸಿದರು.

ಜಿಲ್ಲಾ ಮಾರಾಟ ಕೇಂದ್ರ (ಎಸ್‌ಬಿಐ) ಮುಖ್ಯವ್ಯವಸ್ಥಾಪಕ ಮಹೇಂದ್ರ ದಾಮಾ ಮಾತನಾಡಿ,ಹಣಕಾಸು ಸೇರ್ಪಡೆ ಮತ್ತು ಸೂಕ್ಷ್ಮ ಮಾರುಕಟ್ಟೆ,ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ನರೇಗಾ, ಸ್ವ-ನಿಧಿ,ರೈತ ಉತ್ಪಾದಕರ ಸಂಸ್ಥೆ ಮತ್ತು ನೆಟ್‌ವರ್ಕ್‌ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮುಖ್ಯವ್ಯವಸ್ಥಾಪಕ ರಾಜಶೇಖರ ಪಾಪನಾಳ,ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದರಾಜಶೇಖರ ಹಾಗೂ ಕೆನರಾ ಬ್ಯಾಂಕಿನ ಎಸ್‌.ಎನ್‌. ಚಿಕ್ಕಲಕಿ ಹಣಕಾಸು ಸೇರ್ಪಡೆ ಮತ್ತುಸೂಕ್ಷ್ಮ ಮಾರುಕಟ್ಟೆಯ ಉದ್ದೇಶ, ಸಣ್ಣ ಕೈಗಾರಿಕೆ,ಆರ್ಥಿಕ ಸಾಕ್ಷರತೆ, ಶೂನ್ಯ ಬಂಡವಾಳ ಖಾತೆ,ರೂಪೆ ಕ್ರೆಡಿಟ್‌ ಕಾರ್ಡ್‌, ಪಿಎಂ ಜೀವನ ಜ್ಯೋತಿ, ಪಿಎಂ ಸುರಕ್ಷಾ ಭೀಮಾ ಯೋಜನೆ, ಪಿಂಚಣಿ ಬಗ್ಗೆ ಕಾಯðಮದಲ್ಲಿ ರೈತರಿಗೆ ಮಾಹಿತಿ ನೀಡಿದರು.

Advertisement

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಮೌನೇಶ್ವರಿ ಕಮ್ಮಾರ, ಕೃಷಿ ಸಂಶೋಧನಾ ಕೇಂದ್ರಬಾಗಲಕೋಟೆಯ ಕ್ಷೇತ್ರ ಅಧೀಕ್ಷಕ ಡಾ|ಅರುಣ ಸತರಡ್ಡಿ, ಪ್ರಗತಿಪರ ರೈತರಾದ ಮಲ್ಲಣ್ಣ ಜಿಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ವಿಜ್ಞಾನಿಗಳೊಂದಿಗೆ ರೈತರ ಸಂವಾದಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಬಾಗಲಕೋಟೆ, ಹುನಗುಂದ, ಬಾದಾಮಿ ತಾಲೂಕಿನ 50 ಕ್ಕೂ ಹೆಚ್ಚು ಪ್ರಗತಿ ಪರ ರೈತರು, ಕೃಷಿ ವಿಶ್ವವಿದ್ಯಾಲಯದ ಅಂತಿಮವರ್ಷದ ವಿದ್ಯಾರ್ಥಿಗಳು, ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next