ರಾಮದುರ್ಗ: ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಕೃಷಿಕ ಸಮಾಜ, ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಆಶ್ರಯದಲ್ಲಿ ಡಿ.23ರಂದು ಬೆಳಗ್ಗೆ ರಾಷ್ಟ್ರೀಯ ರೈತ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ವೈ.ಎಚ್. ಪಾಟೀಲ ಹೇಳಿದರು.
ಪಟ್ಟಣದ ಪ್ರಸ್‌ಕ್ಲಬ್‌ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ| ಚೌಧರಿ ಚರಣ್‌ಸಿಂಗ್ ಅವರ ಸವಿನೆನಪಿಗಾಗಿ ಕೇಂದ್ರ ಸರಕಾರ ದೇಶಾದ್ಯಂತ ಡಿ.23ರಂದು ರೈತ ದಿನ ಆಚರಿಸುತ್ತಿದೆ. ಅವರು ಸಂಸದ, ಮಾಜಿ ಪ್ರಧಾನಿ, ರೈತ ನಾಯಕರಾಗಿ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.
ಮುಳ್ಳೂರಿನ ಶ್ರೀ ಚಂದ್ರಶೇಖರ ಶಿವಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಮಹಾದೇವಪ್ಪ ಯಾದವಾಡ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷೆ ಶಕುಂತಲಾ ವಡ್ಡರ, ಜಿಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಜಹೂರ ಹಾಜಿ, ರಮೇಶ ದೇಶಪಾಂಡೆ, ಮಾರುತಿ ತುಪ್ಪದ, ಕೃಷ್ಣಾ ಲಮಾಣಿ, ಶಿವಕ್ಕ ಬೆಳವಡಿ, ಕಾರ್ಮಿಕ ಮುಖಂಡ ವಿ.ಪಿ. ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.
ಉಪನ್ಯಾಸಕರಾಗಿ ಕೃಷಿ ಪಂಡಿತ ಪ್ರಶಸ್ತಿ ಪಡೆದ ಸಣ್ಣಯಮನಪ್ಪ ರಾಜಾಪೂರೆ ಮತ್ತು ಶಿವಾನಂದ ಈರಯ್ಯ ಮಠಪತಿ ಹಾಗೂ ಕೆ.ವಿ.ಕೆ ಮತ್ತಿಕೊಪ್ಪ, ತೋಟಗಾರಿಕಾ ವಿಭಾಗದ ವಿಜ್ಞಾನಿ ಪ್ರವೀಣ ಯಡಹಳ್ಳಿ ಉಪನ್ಯಾಸ ನೀಡುವರು ಎಂದು ತಿಳಿಸಿದ ಅವರು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ, ಕೃಷಿಕ ಸಮಾಜದ ಕಾರ್ಯದರ್ಶಿ ಆರ್.ಎಚ್. ತೋಳಗಟ್ಟಿ, ಬಿ.ಎನ್.ದಳವಾಯಿ, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಗೋವಿಂದರೆಡ್ಡಿ ಜಾಯನ್ನವರ ಇತರರು ಉಪಸ್ಥಿತರಿದ್ದರು.