Advertisement

ಬೆಲೆ ಇಲ್ಲದ್ದಕ್ಕೆ ಬೆಳೆ ನಾಶಪಡಿಸಿದ ರೈತ

08:43 PM Mar 24, 2021 | Team Udayavani |

ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣಕ್ಕೆ ರೈತರೊಬ್ಬರು ಎರಡು ಎಕರೆಪ್ರದೇಶದಲ್ಲಿ ಬೆಳೆದಿದ್ದ ಎಲೆಕೋಸನ್ನು ಟ್ರ್ಯಾಕ್ಟರ್‌ಹೊಡೆದು ನಾಶಪಡಿಸಿದ ಘಟನೆ ಮಂಗಳವಾರ ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.

Advertisement

ಹಿರೇಗೌಜ ಗ್ರಾಮದ ರೈತ ಬಸವರಾಜು ಕಳೆದ ಎರಡು ವರ್ಷಗಳಿಂದ ತಮ್ಮ ಎರಡು ಎಕರೆ ಜಮೀನಿನಲ್ಲಿಎಲೆಕೋಸು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಸೂಕ್ತಬೆಲೆ ಇಲ್ಲದಿರುವುದರಿಂದ ಖರ್ಚು ಮಾಡಿದಹಣವೂ ಕೈ ಸೇರಿರಲಿಲ್ಲ. ಪ್ರತಿ ಎಕರೆಗೆ 35ರಿಂದ 40 ಸಾವಿರ ರೂ. ಖರ್ಚು ಮಾಡಿದ್ದು ಉತ್ತಮ ಬೆಲೆ ಇಲ್ಲದ ಕಾರಣ ಬೇಸತ್ತು ಟ್ರ್ಯಾಕ್ಟರ್‌ ಹೊಡೆದು ನಾಶ ಪಡಿಸಿದ್ದಾರೆ.

ತಾಲೂಕಿನ ಹಿರೇಗೌಜ ಗ್ರಾಮದ ವ್ಯಾಪ್ತಿಯಲ್ಲಿ ರೈತರು ಸತತ ಬರದಿಂದ ನಲುಗಿದ್ದು,ಈ ಬಾರಿ ಸಾಧಾರಣ ಮಳೆಯಾಗಿದ್ದರಿಂದ ತರಕಾರಿಬೆಳೆಯಲು ಮುಂದಾಗಿದ್ದರು. ಉತ್ತಮ ಫಸಲುಬಂದಿದ್ದು, ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದರು.ಬಸವರಾಜ್‌ ಸೇರಿದಂತೆ ಅನೇಕರು ಎಲೆಕೋಸುಬೆಳೆದಿದ್ದು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವುದರಿಂದ ಬೆಳೆ ನಾಶಪಡಿಸುವ ಮೂಲಕ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next