Advertisement

ಬರಗಾಲಕ್ಕಿಂತ ಪ್ರವಾಹದ ವೇಳೆಯೇ ರೈತರ ಆತ್ಮಹತ್ಯೆ ಜಾಸ್ತಿ!

01:20 AM Sep 12, 2020 | mahesh |

ಹೊಸದಿಲ್ಲಿ: ನೀರಿನ ಲಭ್ಯತೆ ಕಡಿಮೆಯಿರುವ ಕಾಲಕ್ಕಿಂತ, ಅತಿಯಾದ ಮಳೆ ಅಥವಾ ಪ್ರವಾಹದ ಸಂದರ್ಭದಲ್ಲೇ ರೈತರ ಆತ್ಮಹತ್ಯೆ ಪ್ರಮಾಣ ಜಾಸ್ತಿ! ಹೀಗೊಂದು ಅಧ್ಯಯನ ವರದಿ ಯನ್ನು ಅಂತಾರಾಷ್ಟ್ರೀಯ ಅಧ್ಯಯನ ತಂಡವೊಂದು ನೀಡಿದೆ. ಬೇರೆ ಬೇರೆ ಗ್ರಾಮೀಣ ಭಾಗಗಳು ಸೇರಿ ಒಟ್ಟಾರೆ 85 ಲಕ್ಷ ಮಂದಿ ವಾಸವಿರುವ ಜಾಗಗಳಲ್ಲಿ, 2001ರಿಂದ 2013ರವರೆಗೆ ಸಂಭವಿಸಿದ ಸಾವಿಗೆ ಕಾರಣ ಪರಿಶೀಲಿಸಿ, ಈ ನಿರ್ಧಾರಕ್ಕೆ ಬರಲಾಗಿದೆ.

Advertisement

5000ಕ್ಕಿಂತ ಕಡಿಮೆ ಮಂದಿ ವಾಸಿಸುವ ಪ್ರದೇಶಗಳನ್ನು ಯಾದೃಚ್ಛಿಕವಾಗಿ (ರ್‍ಯಾಂಡಮ್‌) ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಅಲ್ಲಿ ಶೇ.25ಕ್ಕಿಂತ ಹೆಚ್ಚು ಪುರುಷರು ಕೃಷಿಯಲ್ಲಿ ನಿರತವಾಗಿದ್ದಾರೆಯೇ ಎಂದು ಗಮನಿಸಲಾಗಿದೆ. ಇಲ್ಲಿ ನಡೆದ 9456 ಆತ್ಮಹತ್ಯೆ ಪ್ರಕರಣಗಳನ್ನು ವಿವರವಾಗಿ ಪರಿಶೀಲಿಸಲಾಗಿದೆ. ಮಾಮೂಲಿ ಸಂದರ್ಭಗಳಿಗೆ ಹೋಲಿಸಿದರೆ ಪ್ರವಾಹ ಬಂದ ಕಾಲದಲ್ಲಿ ಆತ್ಮಹತ್ಯೆ ಪ್ರಕರಣಗಳು ಶೇ.18.7ರಷ್ಟು ಏರಿವೆ. ಬರಗಾಲದ ಸಂದರ್ಭದಲ್ಲಿ ಮರಣ ಪ್ರಮಾಣ ಶೇ.3.6ರಷ್ಟು ಮಾತ್ರ ಎಂದು ಕಂಡುಬಂದಿದೆ. ಇಲ್ಲೆಲ್ಲ ಮಾಮೂಲಿ­ಯಾಗಿ ವಿಷ ಸೇವಿಸಿ (ಶೇ.40), ನೇಣುಬಿಗಿದುಕೊಂಡು (ಶೇ.37), ಬೆಂಕಿಹಚ್ಚಿಕೊಂಡು (ಶೇ.10) ಸಾವನ್ನಪ್ಪಿದ ಪ್ರಕರಣಗಳು ಪತ್ತೆಯಾಗಿವೆ. ಈ ಅಧ್ಯಯನದ ನೇತೃತ್ವವನ್ನು ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯದ ಎಪಿಡೆಮಿಯಾಲಜಿ ವಿಭಾಗ ವಹಿಸಿತ್ತು. ಭಾರತದ ಗಾಂಧಿನಗರದ ಐಐಟಿ, ಕೆನಡಾದ ಮೆಕ್‌ಗಿಲ್‌ ವಿಶ್ವವಿದ್ಯಾಲಯ ಭಾಗವಹಿಸಿದ್ದವು. ಎಂಡಿಎಸ್‌ (ಮಿಲಿಯನ್‌ ಡೆತ್ಸ್ ಸ್ಟಡಿ) ನೀಡಿದ ಮಾಹಿತಿಯನ್ನು ಬಳಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next