Advertisement
ಅವರು ಸೋಮವಾರ ತಾಲೂಕಿನ ಕೂತಗೋಡು ಗ್ರಾಪಂನ ಬೋಳೂರು ಸತೀಶ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಮೃತ ಸತೀಶ್ ಅವರ ಮನೆಗೆ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಭೇಟಿ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಲೆನಾಡಿನಲ್ಲಿ ಒಂದು ಅಥವಾ ಎರಡು ಎಕರೆ ತೋಟವುಳ್ಳ ರೈತರ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸರಕಾರವು ಜಾಯಿಂಟ್ಫಾರ್ಮಿಂಗ್ ಎಂಬ ಹೊಸ ಯೋಜನೆ ಪ್ರಾರಂಭ ಮಾಡಬೇಕಿದೆ. ಸಣ್ಣ ಸಣ್ಣ ಹಿಡುವಳಿದಾರರನ್ನು ಒಟ್ಟಾಗಿ ಸೇರಿಸಿ ಸ್ವ-ಸಹಾಯ ಗುಂಪಿನಡಿ ವ್ಯವಸಾಯ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಿದೆ. ಈ ಯೋಜನೆಯಲ್ಲಿ ರೈತರಿಗೆ ಆದಾಯ ಬರುವಂತೆ ಕೇಂದ್ರ ಹಾಗೂ ರಾಜ್ಯ
ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ರೈತರ ಬಡ್ಡಿಮನ್ನಾ ಯೋಜನೆಯ ಅವಧಿ ವಿಸ್ತರಿಸಬೇಕು. ಆರ್ಥಿಕ ಸಂಕಷ್ಟದಲ್ಲಿದ್ದು ಆತ್ಮಹತ್ಯೆ ಮಾಡಿಕೊಂಡ ರೈತ ಸತೀಶ್ ಕುಟುಂಬಕ್ಕೆ ಸರಕಾರ ತಕ್ಷಣ ಐದು ಲಕ್ಷ ರೂ.ಪರಿಹಾರ ನೀಡಬೇಕು ಎಂದು
ಒತ್ತಾಯಿಸಿದರು.