Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಜನರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನಿಚ್ಚಳಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ರೈತರ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿತ್ಯ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ನಿನ್ನೆ ಮೂರು ಜನ ರೈತರು ಸಾವಿಗೀಡಾಗಿದ್ದಾರೆ, ಇಂದು ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಸ್ಯೆಗೆ ಆತ್ಮಹತ್ಯೆ
ಪರಿಹಾರವಲ್ಲ. ಆತ್ಮಸ್ಥೈರ್ಯದಿಂದ ಬದುಕುವ ಆಲೋಚನೆ ಮಾಡಿ. ನಿರಂತರ ಆತ್ಮಹತ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ರೈತರ ಹಿತ ಅಸಾಧ್ಯ ಎಂದು ಹೇಳಿದರು.
ಕೆ.ಆರ್.ಪೇಟೆ: “ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ನನ್ನಿಂದ ಸಹಾಯವಾಗಿದೆಯೇ ಹೊರತು
ಕುಮಾರಸ್ವಾಮಿಯಿಂದ ನನಗೇನೂ ಅನುಕೂಲವಾಗಿಲ್ಲ’ ಎಂದು ಶಾಸಕ ಚೆಲುವರಾಯಸ್ವಾಮಿ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಮಂಡ್ಯ ಜಿಲ್ಲೆಯಲ್ಲಿ ಎಸ್.ಡಿ.ಜಯರಾಂ ನಂತರ ಜೆಡಿಎಸ್ ಪಕ್ಷವನ್ನು ಕಟ್ಟಿ ಮುನ್ನಡೆಸಿದ್ದು ಚೆಲುವರಾಯಸ್ವಾಮಿಯೇ ಹೊರತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ 20 ತಿಂಗಳ ಕಾಲ ಎಚ್‌ಡಿಕೆ ಸಿಎಂ ಆಗಿ ಆಡಳಿತ ನಡೆಸಲು ನನ್ನ ಪಾತ್ರವೂ ನಿರ್ಣಾಯಕ ವಾಗಿದೆ’ ಎಂದು ಹೇಳಿದರು. “ನಾನೂ ಸೇರಿದಂತೆ ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಸಹ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ, ನರೇಂದ್ರಸ್ವಾಮಿ, ಅಂಬರೀಶ್ ಅವರನ್ನು ಒಳಗೊಂಡಂತೆ ಐದು ಜನರಿದ್ದೇವೆ ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಗೆ 4ರಿಂದ 5 ಸ್ಥಾನಗಳು ಶತಸಿದ್ಧ’ ಎಂದರು.