Advertisement

ರೈತ ಹೋರಾಟಕ್ಕೆ ಮಹಿಳಾ ಶಕ್ತಿ ವೇದಿಕೆ ಸಾಥ್‌

01:47 PM Feb 16, 2021 | Team Udayavani |

ಕನಕಪುರ: ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ವತಂತ್ರ ನಂತರದ ಚಳುವಳಿಯಲ್ಲಿ ಐತಿಹಾಸಿಕ ಮಹತ್ವ ಪಡೆದು ಕೊಂಡಿರುವುದು ಆಶಾದಾಯಕ ಎಂದು ಮಹಿಳಾ ಶಕ್ತಿ ವೇದಿಕೆ ನಾಗರತ್ನ ತಿಳಿಸಿದರು.

Advertisement

ನಗರದ ರೋಟರಿ ಭವನದಲ್ಲಿ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ 85ನೇ ವರ್ಷದ ನೆನೆಪಿನ ಪ್ರಯುಕ್ತ ರೈತ ಸಂಘ ಹಾಗೂ ಹಸಿರು ಸೇನೆ, ಮಹಿಳಾ ಶಕ್ತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ರೈತ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈವರೆಗೂ ಸಚಿವರುಗಳಿಗೆ ಮನವಿ ಕೊಡುವುದಷ್ಟೇ ಪ್ರತಿಭಟನೆಯಾಗಿತ್ತು. ಅದರ ಸ್ವರೂಪ ಸ್ವತಂತ್ರ ಪೂರ್ವದ ಹೋರಾಟಗಳಂತೆ ಬದಲಾಗಿದೆ. ಪಂಜಾಬ್‌, ಹರಿಯಾಣದ 540 ರೈತ ಸಂಘಟನೆಯ ರೈತರು, ಚಳಿ ಲೆಕ್ಕಿಸದೇ, ಹಗಲು-ರಾತ್ರಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಆದರೆ, ರೈತರ ಹೋರಾಟ ಹತ್ತಿಕ್ಕಲು, ರೈತರಿಗೆ ದೇಶದ್ರೋಹಿ ಎಂಬ ಪಟ್ಟ ಕಟ್ಟುತ್ತಿದ್ದಾರೆ ಎಂದರು.

ವಿಚಾರವಾದಿ ಪಾರ್ವತೀಶ್‌ ಬಿಳಿದಾಳೆ ಮಾತನಾಡಿ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಸರ್ಕಾರ ನೀಡಿದ್ದ ಆಶ್ವಾಸನೆ ಈಡೇರಿದಿಯೇ? ರೈತ ಬಿತ್ತನೆ ಮಾಡಿದರೆ ಯಾವುದಾದರೂ ಒಂದು ಬೆಳೆ ತೆಗೆಯಬಹುದು. ಆದರೆ, ಸರ್ಕಾರ ರೈತರಿಗೆ ಬಿತ್ತಿರುವಕನಸುಗಳಲ್ಲಿ ಯಾವುದಾದರೂ ಈಡೇರಿದೇಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಚನ್ನಬಸಪ್ಪ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ, ಮಾನವ ಸರಪಳಿ ನಿರ್ಮಿಸಿ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಚೀಲೂರು ಮುನಿರಾಜು, ಜಿಲ್ಲಾಧ್ಯಕ್ಷ ಮಲ್ಲಯ್ಯ, ಉಪಾಧ್ಯಕ್ಷ ರಾಮು, ಶಶಿಕುಮಾರ್‌, ರಾಜ್ಯ ಉಪಾಧ್ಯಕ್ಷ ರಾಮಸ್ವಾಮಿ, ಬಿಎಸ್‌ಪಿ ನೀಲಿ ರಮೆಶ್‌, ಸ್ವ.ಕ.ರ.ವೇ. ಜಿಲ್ಲಾಧ್ಯಕ್ಷ ಭಾಸ್ಕರ್‌, ಕನ್ನಡ ಸೇನೆ ಜಯಸಿಂಹ, ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಕೋಟೆ ಕುಮಾರ್‌, ಕೆಎಸ್‌ಎಸ್‌ಡಿ ಜಿಲ್ಲಾ ಖಜಾಂಚಿ ರುದ್ರೇಸ್‌, ನಮನ ಚಂದ್ರು, ಜಯರಾಮೇಗೌಡ, ರೈತ ಸಂಘದ ಸಂಪತ್‌ ಕುಮಾರ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next