Advertisement

ವಿವಿಧ ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ

05:28 PM Jan 12, 2021 | Team Udayavani |

ನಾಯಕನಹಟ್ಟಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ತಳಕು ಗ್ರಾಮದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರೈತ ಮುಖಂಡ ಬೇಡರೆಡ್ಡಿ ಹಳ್ಳಿ ಬಸವ ರೆಡ್ಡಿ ಮಾತನಾಡಿ, ಬೆಸ್ಕಾಂನ ತಳಕು ಉಪವಿಭಾಗ ಆರಂಭವಾಗಿ ಒಂದು ವರ್ಷವಾದರೂ ಮೂಲ ಸೌಲಭ್ಯಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಿಲ್ಲ.

Advertisement

ವಿದ್ಯುತ್‌ ಪರಿವರ್ತಕಗಳನ್ನು ಉಪವಿಭಾಗದ ಕೇಂದ್ರವಾದ ತಳಕು ಗ್ರಾಮದಲ್ಲಿ ಶೇಖರಿಸಬೇಕು. ಪರಿವರ್ತಕಗಳು ಸುಟ್ಟಾಗ ಇಲಾಖೆ ಬಳಿ ಯಾವುದೇ ಸಾಗಾಣಿಕೆ ವಾಹನವಿಲ್ಲ. ಹೀಗಾಗಿ ರೈತರು ತಮ್ಮಲ್ಲಿಯೇ ಹಣ ಹೊಂದಾಣಿಕೆ ಮಾಡಿಕೊಂಡು ಬಾಡಿಗೆ ಮೂಲಕ ಸರಕು ಸಾಗಾಣಿಕೆ ವಾಹನದಲ್ಲಿ ಸಾಗಿಸಬೇಕಾಗಿದೆ ಎಂದು ಆರೋಪಿಸಿದರು. ಪರಿವರ್ತಕ ಹಾನಿಯಾದ 48 ಗಂಟೆಯಲ್ಲಿ ಬದಲಾವಣೆ ಮಾಡಬೇಕು ಎಂದು ಬೆಸ್ಕಾಂ ನಿಯಮಿದೆ. ಆದರೆ ಇಲಾಖೆ ನಿಯಮವನ್ನು ಪಾಲಿಸುತ್ತಿಲ್ಲ.

ಬೆಸ್ಕಾಂ ಸ್ವಂತ ವಾಹನವನ್ನು ಹೊಂದಬೇಕು. ಪರಿವರ್ತಕ ಸುಟ್ಟ ಸ್ಥಳಕ್ಕೆ ಇಲಾಖೆಯ ಸಾಗಣಿಕೆ ಮಾಡಬೇಕು. ಹಿರೇಹಳ್ಳಿ ಗ್ರಾಮಕ್ಕೆ ವಿದ್ಯುತ್‌ ಬಿಲ್‌ ಪಾವತಿಗೆ ಸುಲಭವಾಗುವಂತೆ ಕ್ಯಾಶ್‌ ಕೌಂಟರ್‌ ಸ್ಥಾಪಿಸಬೇಕು. ಅಕ್ರಮ-ಸಕ್ರಮ ಯೋಜನೆಯಲ್ಲಿ ಹಲವಾರು ರೈತರು ನಾಲ್ಕು ವರ್ಷಗಳ ಹಿಂದೆ ಬೆಸ್ಕಾಂಗೆ ಹಣ ಪಾವತಿಸಿದ್ದಾರೆ. ಆದರೆ ಇಲ್ಲಿಯವರೆಗೂ ವಿದ್ಯುತ್‌ ಕಂಬ ಹಾಗೂ ಪರಿವರ್ತಕ ಒದಗಿಸಿಲ್ಲ. ತಳಕು-ಹಿರೇಹಳ್ಳಿ ಮಧ್ಯದಲ್ಲಿ ವಿದ್ಯುತ್‌ ಸಮಸ್ಯೆಗಳಿದ್ದು, ಇದನ್ನು ಸರಿಪಡಿಸಬೇಕು.

ಇದನ್ನೂ ಓದಿ: ಕಾಫಿಬೆಳೆ ಹಾನಿ ಸಮೀಕ್ಷೆಗೆ ತಂಡ ರಚನೆ

ಗ್ರಾಮದಿಂದ ದೂರವಿರುವ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಸಿ ರೈತರು ವ್ಯವಸಾಯದಲ್ಲಿ ತೊಡಗಿದ್ದಾರೆ. ತೋಟದ ಮನೆಗಳಿಗೆ ನಿರಂತರ ಜ್ಯೋತಿ ವ್ಯವಸ್ಥೆಯಿಲ್ಲ. ಇಂತಹ ತೋಟದ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್‌ ಒದಗಿಸಬೇಕು ಎಂದು ಒತ್ತಾಯಿಸಿದರು.

Advertisement

ಬೆಸ್ಕಾ ಇಇ ಮಹಮ್ಮದ್‌ ಹಾಗೂ ಎಇಇ ಮಮತಾ ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಆರ್‌.ಬಿ. ನಿಜಲಿಂಗಪ್ಪ, ಕೆ.ಪಿ. ಭೂತಯ್ಯ, ನುಲೇನೂರು ಶಂಕರಪ್ಪ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸುರೇಶ್‌ ಬಾಬು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next