ಬಂಗಾರಪೇಟೆ: ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಟೇಬಲ್ ಮೇಲೆ ದೂಳು ಹಿಡಿಯುತ್ತಿರುವ ರೈತರ ಕಡತಗಳಿಗೆ ಮುಕ್ತಿ ಕೊಡುವ ಜೊತೆಗೆ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಸರ್ವೆ ಸೂಪರ್‌ವೈಸರ್ ರೋಹಿಣಿಗೆ ಮನವಿ ನೀಡಲಾಯಿತು.
ಈ ವೇಳೆ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಆರ್‌ಟಿಸಿ ದುರಸ್ತಿಗೂ ಅರ್ಜಿ ಹಾಕಿ ಕೆಲಸಕಾರ್ಯ ಬಿಟ್ಟು ತಹಶೀಲ್ದಾರ್ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ರೈತರನ್ನು ಕಸದಂತೆ ಕಾಣುವ ಜೊತೆಗೆ ಇಲಾಖೆಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಗೆ ಇರುವ ಗೌರವ ಅನ್ನದಾತನಿಗೆ ಇಲ್ಲದಂತಾಗಿದೆ. ಅಷ್ಟರ ಮಟ್ಟಿಗೆ ಇಲಾಖೆ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಜೊತೆ ಚೆಲ್ಲಾಟ: ಸರ್ವೆ ಇಲಾಖೆ ಕಾನೂನು ಪ್ರಕಾರ ಅರ್ಜಿ ಸಲ್ಲಿಸಿದ 30 ದಿನದ ಒಳಗೆ ಅದು ವಿಲೇವಾರಿ ಆಗಬೇಕೆಂಬ ನಿಯಮವಿದೆ. ಆದರೆ, ಸಲ್ಲಿಸಿದ ಅರ್ಜಿ 300 ದಿನವಾದರೂಇಲಾಖೆಯ ಗಣಕಯಂತ್ರದಲ್ಲಿ ಭದ್ರವಾಗಿದೆಯೇ ಹೊರತು,ರೈತರ ಅರ್ಜಿಗೆ ಮುಕ್ತಿ ಸಿಗುತ್ತಿಲ್ಲ. ಸಿಬ್ಬಂದಿ ಕೊರತೆ, ಸರ್ವೆಯರ್‌ಸಮಸ್ಯೆ ಮತ್ತಿತರ ನೂರೊಂದು ನೆಪ ಹೇಳಿ ರೈತರ ಜೀವನದ ಜೊತೆಚೆಲ್ಲಾಟ ಆಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ: ಒಂದು ವಾರದೊಳಗೆ ಸಹಾಯಕ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನಿವಾರಿಸಿ ಟೇಬಲ್ ಮೇಲೆ ದೂಳು ಹಿಡಿಯುತ್ತಿರುವ ರೈತರ ಕಡತಗಳಿಗೆ ಮುಕ್ತಿ ನೀಡಿ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು, ಇಲ್ಲವಾದರೆಆಹೋರಾತ್ರಿ ಧರಣಿ ಮಾಡುವ ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿದರು. ಮನವಿ ಸ್ವೀಕರಿಸಿದ ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ರೋಹಿಣಿ ಮಾತನಾಡಿ, ಸರ್ವೆಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ದಲ್ಲಾಳಿಗಳ ಹಾವಳಿ ಬಗ್ಗೆನಮ್ಮ ಗಮನಕ್ಕೆ ಸಾರ್ವಜನಿಕರು ತಂದಿದ್ದಾರೆ. ಕ್ರಮಕೈಗೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ತಾಲೂಕು ಅಧ್ಯಕ್ಷ ಚಲಪತಿ, ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನ, ಗೌರವಾಧ್ಯಕ್ಷ ಮರಗಲ್ ಮುನಿಯಪ್ಪ, ಬೂದಿಕೋಟೆ ನಾಗಯ್ಯ, ಜಿಲ್ಲಾ ಉಪಾಧ್ಯಕ್ಷಚಾಂದ್‌ಪಾಷ, ಆರೀಪ್, ನವಾಜ್, ಗೌಸ್, ಶ್ರೀನಿವಾಸ್,ಜಾವೀದ್, ಬೀಮಗಾನಹಳ್ಳಿ ನಾಗಯ್ಯ, ಪಾರಂಡಹಳ್ಳಿಮಂಜುನಾಥ, ನಾಗಭೂಷಣ್, ರಾಮಸಾಗರ ಸುರೇಶ್‌ಬಾಬು ಮುಂತಾದವರು ಉಪಸ್ಥಿತರಿದ್ದರು.