Advertisement

ಕಬ್ಬು ಬಿಲ್‌ ಪಾವತಿಗೆ ರೈತರ ಮನವಿ

05:36 PM Jun 21, 2022 | Shwetha M |

ವಿಜಯಪುರ: ಬಸವೇಶ್ವರ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬಾಕಿ ಉಳಿದಿರುವ ಕಬ್ಬಿನ ಬಿಲ್‌ ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ರೈತರು ಆಹಾರ ಇಲಾಖೆ ಅಧಿ ಕಾರಿಗಳಿಗೆ ಮನವಿ ಮಾಡಿದರು.

Advertisement

ಕಬ್ಬು ಬೆಳೆಗಾರ ರೈತರು ಹಾಗೂ ಭಾರತೀಯ ಕಿಸಾನ್‌ ಸಂಘದ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಸಿದ್ರಾಮ ಮಾಡಿಹಾಳ ಅವರಿಗೆ ಕಬ್ಬು ಬೆಳೆಗಾರರ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಭಾರತೀಯ ಕಿಸಾನ್‌ ಸಂಘದ ರಾಜ್ಯ ಸಮಿತಿ ಸದಸ್ಯ ಗುರುನಾಥ ಬಗಲಿ ಮಾತನಾಡಿ, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಕೊಟ್ಟು 5-6 ತಿಂಗಳ ಕಳೆದರೂ ಈವರೆಗೆ ರೈತರಿಗೆ ಕಬ್ಬು ಸಾಗಿಸದಿಸದ್ದಕ್ಕೆ ಹಣ ಪಾವತಿಸಿಲ್ಲ. ರೈತರು ಪ್ರಸ್ತುತ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದು, ಮುಂಗಾರು ಬಿತ್ತನೆ ಮತ್ತು ರಸಗೊಬ್ಬರ ಕೊಂಡುಕೊಳ್ಳಲು ರೈತರ ಹತ್ತಿರ ಹಣ ಇಲ್ಲದಂತಾಗಿದೆ. ಎಲ್ಲ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಲು ವ್ಯವಸ್ಥೆ ಮಾಡಲು ಒತ್ತಾಯಿಸಲಾಯಿತು.

ರಮೇಶ ವಾಲೀಕಾರ, ಶಿವನಿಂಗಪ್ಪ ಖಾನಾಪುರ, ಮಹೇಶ ಅಳ್ಳೊಳ್ಳಿ, ಭೀಮಾಶಂಕರ ತಳವಾರ, ಪರವತಿ ಖಡೆಖಡೆ, ಚಂದ್ರಕಾಂತ ಖಡೆಖಡೆ, ಹನುಮಂತ ತಳವಾರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next