Advertisement

ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಮನವಿ

10:56 AM Feb 05, 2020 | Suhan S |

ಕುಂದಗೋಳ: ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಮುತ್ತಣ್ಣ ಶಿವಳ್ಳಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಲಮನ್ನಾ ಯೋಜನೆಯಡಿ ಋಣ ಮುಕ್ತಪತ್ರ ನೀಡಿ ಕುಮಾರಸ್ವಾಮಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರಿದೆ. ಈ ಯೋಜನೆಯಿಂದ ತಾಲೂಕಿನಲ್ಲಿ ಶೇ. 40 ರೈತರ ಸಾಲ ಮನ್ನಾ ಆಗಿಯೇ ಇಲ್ಲ. ಈಗ ಬ್ಯಾಂಕ್‌ನ ಅಧಿಕಾರಿಗಳು ರೈತರಿಗೆ ದಂಡದ ಬಡ್ಡಿ ಹಾಕಿ ಸಾಲ ಮರುಪಾವತಿಗೊಳಿಸುವಂತೆ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಋಣಮುಕ್ತ ಪ್ರಮಾಣಪತ್ರ ನೀಡಿದ ಎಲ್ಲ ರೈತರ ಬೆಳೆ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಗ್ರಾಮಲೆಕ್ಕಾಧಿಕಾರಿಗಳು, ಪಿಡಿಒಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸ್ಥಾನಿಕವಾಗಿ ಇರುತ್ತಿಲ್ಲ. ಅಕಾಲಿಕ ಮಳೆ ಸಂತ್ರಸ್ತರಿಗೆ ಇದುವರೆಗೂ ಸೂಕ್ತ ಪರಿಹಾರ ಕೊಟ್ಟಿಲ್ಲ. ತಾಲೂಕಿನಲ್ಲಿ ಇಂತಹ ಅನೇಕ ಸಮಸ್ಯೆಗಳು ಇವೆ. ಕೂಡಲೇ ಇವುಗಳನ್ನುಪರಿಹರಿಸದಿದ್ದರೆ ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮುತ್ತಣ್ಣ ಹೇಳಿದರು.

ಶಂಕರಗೌಡ ದೊಡಮನಿ, ಬಾಬಾಜಾನ್‌ ಮುಲ್ಲಾ, ಮುತ್ತಣ್ಣ ಹಿರೇಮಠ, ಎಂ.ಎಚ್‌. ಕಮಡೊಳ್ಳಿ, ಜಿ.ಬಿ. ಉಳ್ಳಬ್ಬಿ, ಬೀರಪ್ಪ, ಹನುಮಂತಪ್ಪ ಕಡೇಸೂರ, ಕಲಂದರ ಹೊರಕೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next