Advertisement

ಏ.14ರಿಂದ “ಹಳ್ಳಿಯಿಂದ ದೆಹಲಿಗೆ ನದಿ ಜೋಡಣೆ ಚಲೋ’

03:34 PM Mar 23, 2021 | Team Udayavani |

ಅರಸೀಕೆರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇ ಡ್ಕರ್‌ರ 130ನೇ ಜಯಂತಿ ಹಾಗೂ ಗುರು ಬಸ ವಣ್ಣನ ಸ್ಮರಣೆಯಿಂದ ಭಾರತಸಮೃದ್ಧಿ ಯಾಗಲಿ, ಬೆಳೆಯಲಿ ಎಂಬಆಶಯದಲ್ಲಿ ರೈತಸಂಘದಿಂದ ಏ.14 ರಿಂದ 22ರವರೆಗೆ “ಹಳ್ಳಿಯಿಂದ ದೆಹಲಿಗೆ ನದಿ ಜೋಡಣೆಚಲೋ’ ಎಂಬ ಘೋಷಣೆಯಡಿ ತಾಲೂಕಿನಕನಕಂಚೇನಹಳ್ಳಿ ಗ್ರಾಮದಿಂದ ಬೃಹತ್‌ರಥಯಾತ್ರೆ ಪ್ರಾರಂಭವಾಗಲಿದೆ ಎಂದು ರಾಜ್ಯರೈತ ಸಂಘದ ಸಂಚಾಲಕ ಪಟೇಲ್‌ ಪ್ರಸನ್ನ ಕುಮಾರ್‌ ತಿಳಿಸಿದರು.

Advertisement

ಕೃಷಿಗೆ ಮಳೆ ನೀರು ಬಳಕೆ: ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಪ್ರತಿವರ್ಷ ಪ್ರಕೃತಿ ವಿಕೋಪಗಳಿಂದ ಅತಿವೃಷ್ಟಿಹಾಗೂ ಅನಾವೃಷ್ಟಿ ಸಂಭವಿಸಿ ರೈತರು ಕಷ್ಟಪಟ್ಟುಬೆಳೆದ ಬೆಳೆ ಕೈಸೇರು ತ್ತಿಲ್ಲ. ಹೀಗಾಗಿ ಉತ್ತರಭಾಗದ ಜೀವನದಿಗಳನ್ನು ದಕ್ಷಿಣ ಭಾಗದನದಿಗಳಿಗೆ ಜೋಡಣೆ ಮಾಡುವುದ ರಿಂದಸಮುದ್ರ ಪಾಲಾಗುತ್ತಿರುವ ಮಳೆ ನೀರನ್ನು ಕೃಷಿಚಟುವಟಿಕೆಗೆ ರೈತರು ಬಳಸಬಹುದುಎಂದರು.

ಸಹಕರಿಸಿ: ಕೇಂದ್ರದ ಗಮನ ಸೆಳೆಯಲು ನವದೆಹಲಿ ನದಿ ಜೋಡಣೆ ಚಲೋ ರಥಯಾತ್ರೆಯನ್ನು ಡಾ.ಬಿ.ಆರ್‌. ಅಂಬೇಡ್ಕರ್‌ಜಯಂತಿ, ಗುರು ಬಸ ವಣ್ಣನ ಸ್ಮರಣೆಯೊಂದಿಗೆ ಏ.14ರ ಬೆಳಗ್ಗೆ ತಾಲೂ ಕಿನ ಕನಕಂಚೇನಹಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕರಥಯಾತ್ರೆ ಪ್ರಾರಂಭಿಸಲಾಗುತ್ತಿದೆ. ರಾಜ್ಯದವಿವಿಧ ತಾಲೂಕಿನ ರೈತ ಬಂಧುಗಳು,ಅಭಿಮಾನಿ ಗಳು ಮಾರ್ಗ ಮಧ್ಯೆ ರಥಯಾತ್ರೆಗೆಭವ್ಯ ಸ್ವಾಗತ ಕೋರಲಿದ್ದಾರೆ. ಈ ರಥಯಾತ್ರೆನೇತೃತ್ವವನ್ನು ರಾಜ್ಯ ಗೌರವ ಅಧ್ಯಕ್ಷ ಜವನಹಳ್ಳಿನಿಂಗಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆಲಕ್ಕಮ್ಮ, ಕಾರ್ಯದರ್ಶಿ ಬಸವರಾಜ್‌, ಸಂಘಟನಾ ಕಾರ್ಯದರ್ಶಿ ಗುತ್ತಿನ ಕೆರೆ ಪ್ರಕಾಶ್‌,ಬಸವರಾಜು, ನಂಜುಂಡಪ್ಪ, ಅಮ್ಮನಹಟ್ಟಿ ರತ್ನವಹಿಸಲಿದ್ದಾರೆ. ಹೀಗಾಗಿ ರಾಜ್ಯದ ಪ್ರಗತಿಪರಸಂಘಟನೆಗಳು, ಮಹಿಳಾ ಸಂಘ ಸಂಸ್ಥೆಗಳಒಕ್ಕೂಟಗಳು, ರಾಜ್ಯದ ರೈತ ಬಂಧುಗಳು ರಥಯಾತ್ರೆ ಪ್ರಾರಂಭದ ಕಾರ್ಯಕ್ರಮಕ್ಕೆ ಆಗಮಿಸಿಸಹಕರಿಸಬೇಕೆಂದು ರಾಜ್ಯದ ರೈತರ ಪರವಾಗಿ ವಿನಂತಿಸುತ್ತಿದ್ದೇನೆಂದರು.

ರಥಯಾತ್ರೆ ಮಾರ್ಗಸೂಚಿ :

ತಾಲೂಕಿನ ಕನಕೆಂಚೇನಹಳ್ಳಿಯಲ್ಲಿ ಏ.14ರ ಬೆಳಗ್ಗೆಪ್ರಾರಂಭಗೊಂಡು ಅರಸೀಕೆರೆ ಮಾರ್ಗವಾಗಿ ಕಡೂರು, ಭದ್ರಾವತಿಯಲ್ಲಿ ವಾಸ್ತವ್ಯ. ಏ.15ರ ಬೆಳಗ್ಗೆ ಶಿವಮೊಗ್ಗ, ಹರಿಹರ,ಹುಬ್ಬಳ್ಳಿ ಸಿದ್ದಾರೂಢ ಮಠದಲ್ಲಿ ವಾಸ್ತವ್ಯ. 16ರ ಬೆಳಗ್ಗೆ ಬೆಳಗಾವಿ,ಚಿಕ್ಕೋಡಿ, ಮಹಾರಾಷ್ಟ್ರ ಮೀರಜ್‌, ಸಾಂಗ್ಲಿ, ಅಂಬೇಡ್ಕರ್‌ ಜನ್ಮಸ್ಥಳವಾದ ಸತಾರಕ್ಕೆ ತೆರಳಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿವಾಸ್ತವ್ಯ. ಏ.17ರ ಬೆಳಗ್ಗೆ 8 ಮೆರವಣೆಗೆ ನಂತರ ಪುಣೆ,ಅಹ್ಮದ್‌ನಗರದಲ್ಲಿ ವಾಸ್ತವ್ಯ. ಏ.18ರ ಬೆಳಗ್ಗೆ ಕೊಪ್ಪರ್‌ ದಾವ್‌(ಶಿರಡಿ ಸಾಯಿ ಬಾಬ) ನಂತರ ಮಧ್ಯಪ್ರದೇಶ ಮಣಾ¾ಡುನಲ್ಲಿವಾಸ್ತವ್ಯ. ಏ.19ರ ಬೆಳಗ್ಗೆ ಇಂದೂರ್‌ನಲ್ಲಿ ವಾಸ್ತವ್ಯ. ಏ.20 ಬೆಳಗ್ಗೆಉತ್ತರ ಪ್ರದೇಶದ ಆಗ್ರಾದಲ್ಲಿ ವಾಸ್ತವ್ಯ. ಏ. 21ರ ಬೆಳಗ್ಗೆ 8ಕ್ಕೆ ನವದೆಹಲಿ ತಲುಪಿ ಬೃಹತ್‌ ಮೆರವಣೆಗೆ ನಂತರ ವಾಸ್ತವ್ಯ. ಏ. 22ರಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿಮನವಿ ಸಲ್ಲಿಸಲಾಗುತ್ತದೆ. ನಂತರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. ಕೋವಿಡ್ ಹಿನ್ನೆಲೆ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ರೈತ ಬಾಂಧವರೆಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next