Advertisement

11ಕ್ಕೆ ಸಿಎಂ ನಿವಾಸಕ್ಕೆ  ಮುತ್ತಿಗೆ: ಮಹೇಶ

04:03 PM Jul 09, 2022 | Team Udayavani |

ಚಾಮರಾಜನಗರ: ಕರ ನಿರಾಕರಣೆ ಚಳವಳಿ ಅಂಗವಾಗಿ ಗೃಹ ಬಳಕೆ ವಿದ್ಯುತ್‌ ಬಿಲ್‌ ಕಟ್ಟದ ರೈತರಿಂದ ರಾಜ್ಯ ಸರ್ಕಾರ ವಿದ್ಯುತ್‌ ಬಿಲ್‌ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ಕಾರ್ಖಾನೆಗೆ ಪೂರೈಸುವ ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಜು.11ರಂದು ರಾಜ್ಯ ರೈತ ಸಂಘದಿಂದ ಮುಖ್ಯಮಂತ್ರಿಯವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ ಪ್ರಭು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್‌ ತಾರತಮ್ಯ ನೀತಿ ಖಂಡಿಸಿ ರೈತ ನಾಯಕ ಪೊ›.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ವಿದ್ಯುತ್‌ ಕರ ನಿರಾಕರಣೆ ಚಳವಳಿ ಹಮ್ಮಿಕೊಳ್ಳಲಾಗಿತ್ತು. 2017ರಲ್ಲಿ ರಾಜ್ಯ ಸರ್ಕಾರ ಈ ಬಾಕಿ ಮೊತ್ತವನ್ನು ಮನ್ನಾ ಮಾಡಿ, ಹೊಸ ಮೀಟರ್‌ ಅಳವಡಿಸುವಂತೆ ಸೂಚಿಸಿತ್ತು. ಆದರೆ, ಈಗ ವಿದ್ಯುತ್‌ ನಿಗಮಗಳು ಈಗಿನ ಬಿಲ್‌ನೊಂದಿಗೆ ಹಳೆ ಬಾಕಿಯನ್ನೂ ವಸೂಲಿ ಮಾಡುತ್ತಿವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಇನ್ನೂ ಕಬ್ಬಿನ ಬೆಲೆ ನಿಗದಿ ಮಾಡಿಲ್ಲ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆ ಆರಂಭವಾಗಿದೆ. ಕಾರ್ಖಾನೆಗಳು ಹಳೆಯ ಬಾಕಿಯನ್ನು ಇನ್ನೂ ಪಾವತಿ ಮಾಡಿಲ್ಲ. ಕೇಂದ್ರ ಸರ್ಕಾರ ಮೂರು ರೈತ ವಿರೋಧಿ ಕಾನೂನುಗಳನ್ನು ವಾಪಸ್‌ ಪಡೆದರೂ, ರಾಜ್ಯ ಸರ್ಕಾರ ಪಡೆದಿಲ್ಲ. ಇವುಗಳ ವಿರುದ್ಧ ಸಂಘವು ಹೋರಾಟ ಮಾಡಲಿದೆ. 11ರಂದು ನಡೆಯಲಿರುವ ಮುತ್ತಿಗೆ ಕಾರ್ಯಕ್ರಮದಲ್ಲಿ ಹಲವು ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶೈಲೇಂದ್ರ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಶಾಂತಮಲ್ಲಪ್ಪ, ಪದಾಧಿಕಾರಿಗಳಾದ ಮೂಡ್ನಾಕೂಡು ಮಹೇಶ್‌, ಶಿವಕುಮಾರ್‌, ರಾಮರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next