ಮುಳಬಾಗಿಲು: ಕೊರೊನಾ ದುಷ್ಪರಿ ಣಾಮದಿಂದ ಎಲ್ಲಾ ಕ್ಷೇತ್ರಗಳ ಸ್ಥಿತಿ ಚಿಂತಾಜನಕವಾಗಿದ್ದರೂ, ದೇಶದ 130 ಕೋಟಿ ಜನರ ಹೊಟ್ಟೆ ತುಂಬಿಸುವ ಕಾರ್ಯವನ್ನು ಕೃಷಿಕರು ಕೈಬಿಡದೆ ಮುನ್ನಡೆಸು ತ್ತಿರುವ ಕಾರಣ ಸಮಾಜ ಸದೃಢವಾಗಿದೆ ಎಂದು ಬಿಕೆಎಸ್ ಕಾನೂನು ವಿಭಾಗದ ವಕೀಲ ವಿ. ಜಯಪ್ಪ ತಿಳಿಸಿದರು.
ತಾಲೂಕಿನ ತಾಯಲೂರು ಗ್ರಾಪಂ ವ್ಯಾಪ್ತಿ ತಿರುಮನಹಳ್ಳಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ಗ್ರಾಮ ಸಮಿತಿ ಸಭೆಯಲ್ಲಿ ಮಾತನಾಡಿ ದರು. ದೇಶ ವ್ಯಾಪಿ ರೈತರು ಅಸಂಘಟಿತರಾ ಗಿದ್ದು, ರಾಸಾಯನಿಕ ಕೃಷಿ ಅವಲಂಬನೆ ಯಿಂದ ಖರ್ಚುಗಳು ಹೆಚ್ಚುತ್ತಿವೆ. ಇದ ರಿಂದ ಫಲವತ್ತಾದ ಭೂಮಿ ಬಂಜರು ಮಾಡಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದರು.
ಕೃಷಿಯನ್ನು ಲಾಭದಾಯಕ ಮಾಡಿಸಬೇಕು, ಕೃಷಿ, ತೋಟಗಾರಿಕೆ, ಕಂದಾಯ, ನೀರಾವರಿ, ವಿದ್ಯುತ್, ಪಶುಸಂಗೋಪನೆ ಮತ್ತಿತರ ಕೃಷಿ ಅವಲಂಬಿತ ಇಲಾಖೆಗಳು ನೀಡುವ ಸೌಲಭ್ಯಗಳು ನವೀನ ತಾಂತ್ರಿಕ ಪರಿಚಯವನ್ನು ರೈತರಿಗೆ ಗ್ರಾಮಗಳಲ್ಲಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವುದರ ಜತೆಗೆ ಗೋ ಸಂರಕ್ಷಣೆ, ಜಲ ಸಂರಕ್ಷಣೆಗೆ, ವನ ಸಂರಕ್ಷಣೆಗೆ ಬಗ್ಗೆ ಜಾಗೃತಿ ಮೂಡಿಸಿ ವಿಷ ಮುಕ್ತ ಕೃಷಿಯನ್ನು ಮಾಡುವ ಮೂಲಕ ನಮ್ಮ ಪೂರ್ವಿಕರು ಅನುಸರಿಸಿಕೊಂಡು ಬರುತ್ತಿದ್ದ ಕೃಷಿ ಪದ್ಧತಿಯನ್ನು ಮರು ಜೋಡಣೆ ಮಾಡಬೇಕು ಎಂದರು.
ತಿರುಮನಹಳ್ಳಿ ಗ್ರಾ.ಪಂ ಸದಸ್ಯ ಚಂದ್ರ ಶೇಖರ್ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಗ್ರಾಮಸ್ಥರ ಕೈಯಲ್ಲೇ ಇದ್ದು ಸರ್ಕಾರದ ಸೌಲಭ್ಯಗಳು ಈಗ ಮನೆ ಬಾಗಿಲಿಗೆ ನೀಡ ಲಾಗುತ್ತಿದೆ. ಇವುಗಳನ್ನು ಪಡೆಯಲು ಒಗ್ಗಟ್ಟಿನಿಂದ ಒಂದೆಡೆ ಸೇರಿ ಚರ್ಚೆ ಮಾಡುವುದರ ಜತೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಂಡರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದರು.
ದಕ್ಷಿಣ ಪ್ರಾಂತ ಕಾರ್ಯಕಾರಿ ಸದಸ್ಯ ಎ.ಅಪ್ಪಾಜಿಗೌಡ ಭಾರತೀಯ ಕಿಸಾನ್ ಸಂಘದ ಧ್ಯೇಯೋದ್ದೇಶಗಳು, ನೈಸಕ ರ್ಗಿಕ, ಸಾವಯವ, ಗೋ ಆಧಾರಿತ ಕೃಷಿಯ ಬಗ್ಗೆ ವಿವರಿಸಿದರು, ಗ್ರಾ.ಪಂ ಸದಸ್ಯ ಕೆ.ನಾರಾಯಣಪ್ಪ, ತಿರುಮನಹಳ್ಳಿ ಗ್ರಾಮದ ಬಿಕೆಎಸ್ ಗ್ರಾಮ ಸಮಿತಿ ಅಧ್ಯಕ್ಷ ವಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ವಿನೋದ್, ಕಾರ್ಯದರ್ಶಿ ಎಸ್.ವಿಜಯ ಕುಮಾರ್, ಖಜಾಂಚಿ ಶಶಿಕುಮಾರ್, ಸದಸ್ಯರಾಗಿ ಟಿ.ಆರ್. ಬಾಬು, ಎಸ್ .ನಾಗರಾಜ್, ಟಿ.ವಿ. ವಿನೋದ್ ಕುಮಾರ್, ಬಿ.ಮುರಳಿ, ಎಸ್. ಕುಮಾರ್, ಸಿ.ವಿನೋದ್ ಇತರರಿದ್ದರು.