ಮೈಸೂರು: ಪಂಜಾಬ್, ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರತೆರೆಯಬೇಕು. ಕೇಂದ್ರದಿಂದ ಹೆಚ್ಚಿನ ಅನುದಾನಪಡೆಯಲು ರಾಜ್ಯದ ಸಂಸದರ ಪ್ರಧಾನಿ ಭೇಟಿಮಾಡಿ ಮಾಡಿ ಮನವಿ ಮಾಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕನಿಷ್ಠ ಬೆಂಬಲ ಬೆಲೆ ಅಡಿ ಕೃಷಿ ಉತ್ಪನ್ನಗಳ ಖರೀದಿ ಅನುದಾನ ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚುಅನುದಾನ ನೀಡಲಾಗುತ್ತಿದೆ. ಆದರೆ, ಕರ್ನಾಟಕಕ್ಕೆಕಡಿಮೆ ನೀಡುತ್ತಿದ್ದು, ಅದನ್ನು ಹೆಚ್ಚಿಸುವಂತೆ ರಾಜ್ಯಸರ್ಕಾರವನ್ನು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಕೊರೊನಾ ಸಂಕಷ್ಟದಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸಿರುವ ಕಾರಣ ಕೃಷಿ ಜಮೀನು ಉಳ್ಳ ಎಲ್ಲಾ ರೈತರಿಗೂ ಬರಿ ಪಹಣಿ ಪತ್ರ ಆಧರಿಸಿ ಕನಿಷ್ಠಮೂರು ಲಕ್ಷ ಆಧಾರ ರಹಿತ ಬಡ್ಡಿ ಇಲ್ಲದ ಕೃಷಿ ಸಾಲ ನೀಡುವ ಎಲ್ಲ ಬ್ಯಾಂಕುಗಳಲ್ಲಿಜಾರಿಯಾಗಬೇಕು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿತೋರಿಸುವ ಮಾನದಂಡ ಬದಲಾಗಬೇಕು. ಕಬ್ಬಿನ ಎಥನಾಲ್ ಉತ್ಪಾದನಾಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು ಎಂದರು.
ರೈತರಿಗೆ ಪೂರ್ಣ ಹಣ ಪಾವತಿಸಿ: ಕಬ್ಬಿಗೆ ವಿದ್ಯುತ್ ಶಾರ್ಟ್ ಸರ್ಕ್ನೂಟ್, ಬೆಂಕಿಅನಾಹುತವಾದಾಗ ಸುಟ್ಟು ಹೋದ ಕಬ್ಬಿಗೆಯಾವುದೇ ಮಾನದಂಡವಿಲ್ಲದೆ ಕಾರ್ಖಾನೆಗಳುಕಬ್ಬಿನ ಹಣದಲ್ಲಿ ಶೇ.25ರಷ್ಟು ಕಟಾವುಮಾಡುವುದನ್ನು ತಪ್ಪಿಸಬೇಕು. ಎಫ್ಆರ್‌ಪಿಪೂರ್ಣ ಹಣ ರೈತರಿಗೆ ಪಾವತಿ ಆಗಬೇಕು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಿ,ಈ ಬಾರಿಯ ರಾಜ್ಯ ಸರ್ಕಾರದ ರೈತರ ಅಭಿವೃದ್ಧಿಗೆಪೂರಕವಾದ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು.
ನಾಳೆ ಕಬ್ಬು ಬೆಳೆಗಾರರ ಕಾರ್ಯಾಗಾರ: ಒಂದು ಎಕರೆಗೆ 168 ಟನ್ ಕಬ್ಬು ಬೆಳೆದು ವಿಶಿಷ್ಟ ಸಾಧನೆಮಾಡಿರುವ ಮಹಾರಾಷ್ಟ್ರದ ಕೃಷಿ ರತ್ನ ಡಾ.ಸಂಜೀವ್ ಮಾನೆ ಅವರ ಅನುಭವ ತಿಳಿಸಲುಫೆ.22ರಂದು ಕಬ್ಬು ಬೆಳೆಗಾರರ ರೈತರಕಾರ್ಯಾಗಾರ ಮೈಸೂರಿನ ಚೇತನ್ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಗಾರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್ ಉದ್ಘಾಟಿಸುವರು. ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಖಂಡಗಾವಿ ಕಬ್ಬು ಬೇಸಾಯ ಕುರಿತು ಮಾತನಾಡುವರು. ಕಬ್ಬು ಬೆಳೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಆಯಾ ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ತಿಂಗಳುಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ ರೈತರ ಸಭೆ ನಡೆಸಲು ಸರ್ಕಾರ ಕಠಿಣ ಸೂಚನೆ ನೀಡಬೇಕು ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರ್ ಶಂಕರ್ ಬನ್ನಳ್ಳಿಹುಂಡಿ ರಾಜೇಂದ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ದೇಶವೇ ಕಟುಕರ ಕೈಗೆ ಸಿಲುಕಿದೆ. ಅಧಿಕಾರದ ಮೋಹಕ್ಕಾಗಿರಾಜಕೀಯ ಪಕ್ಷಗಳು ಧರ್ಮದ ವಿಷಬೀಜ ಬಿತ್ತುತ್ತಿವೆ. ವಿದ್ಯಾರ್ಥಿಗಳುಯಾರ ಪ್ರಚೋದನೆಗೂ ಒಳಗಾಗದೆಶಾಲೆಗಳಿಗೆ ಹೋಗಬೇಕು. ಜನರಸಮಸ್ಯೆಗಳಿಗೆ ಚಿಂತನೆ ಮಾಡಬೇಕಾದರಾಜಕೀಯ ಪಕ್ಷಗಳು ಜನರಕೋಟ್ಯಂತರ ಹಣ ಖರ್ಚಿನ ಸದನದ ಸಮಯವನ್ನು ಹಾಳು ಮಾಡುತ್ತಿರುವುದ ಖಂಡನೀಯ.
– ಕುರಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ