Advertisement

ಬೆಲೆ ಸಿಗದೆ ಟೊಮ್ಯಾಟೋ ಉಚಿತವಾಗಿ ಹಂಚಿದ ರೈತ!

11:21 PM Jan 24, 2020 | Lakshmi GovindaRaj |

ರಾಯಚೂರು: ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ರೋಸಿದ ರೈತನೊಬ್ಬ ಮಾರುಕಟ್ಟೆಗೆ ತಂದ ಟೊಮ್ಯಾಟೋ ಕೂಲಿ ಕಾರ್ಮಿಕರು, ಹೋಟೆಲ್‌ಗ‌ಳಿಗೆ ಉಚಿತವಾಗಿ ಹಂಚಿದ ಬಳಿಕ ಉಳಿದದ್ದನ್ನು ಬೀದಿಗೆಸೆದು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ನಗರದ ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಗ್ಗೆ ತರಕಾರಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ನಾನಾ ಭಾಗಗಳಿಂದ ತರಕಾರಿ ಆಮದಾಗುತ್ತದೆ. ಆದರೆ, ಸ್ಥಳೀಯ ರೈತರ ಬೆಳೆಯನ್ನು ಕೇಳುವವರೇ ಇಲ್ಲದ ಸ್ಥಿತಿ ಇದೆ. ಕೆಜಿ ಟೊಮ್ಯಾ ಟೋಗೆ 2 ರೂ.ನಂತೆ ವರ್ತಕರು ದರ ನಿಗದಿ ಮಾಡಿದ್ದಾರೆ. ಆದರೆ, ಸಾವಿರಾರು ರೂ. ಖರ್ಚು ಮಾಡಿದ್ದು, ಕೆಜಿಗೆ ಕನಿಷ್ಠ 3 ರೂ. ಕೊಡುವಂತೆ ರೈತ ಅಂಗಲಾಚಿದ್ದಾನೆ. ಆದರೂ ವರ್ತಕರು ಮಣೆ ಹಾಕಿಲ್ಲ. ಇದರಿಂದ ಸಿಟ್ಟಿಗೆದ್ದ ರೈತ, ನೀವು ಬೇಕಾಬಿಟ್ಟಿ ದರಕ್ಕೆ ನೀಡುವುದಕ್ಕಿಂತ ರಸ್ತೆಗೆಸೆಯು ವುದೇ ಲೇಸು ಎಂದು ಈ ರೀತಿ ಮಾಡಿದ್ದಾನೆ.

ಒಂದು ಬುಟ್ಟಿಗೆ 24 ಕೆಜಿ ತರಕಾರಿ ಹಿಡಿಯಲಿದ್ದು, ಕನಿಷ್ಠ 75ರಿಂದ 100 ರೂ. ಸಿಕ್ಕರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಇಲ್ಲಿ ಕೇವಲ 50 ರೂ. ನೀಡುವುದರಿಂದ ರೈತರು ಮಾರುಕಟ್ಟೆ ತಂದ ವಾಹನದ ಬಾಡಿಗೆ ಕೂಡ ಕಟ್ಟಲಾಗುವುದಿಲ್ಲ. ಇದರಿಂದ ತಾನು ತಂದ ಟೊಮ್ಯಾಟೋವನ್ನು ಅಕ್ಕಪಕ್ಕದ ಜನರಿಗೆ, ಕೂಲಿ ಕಾರ್ಮಿಕರಿಗೆ, ಹೋಟೆಲ್‌ ಮಾಲೀಕರಿಗೆ ಉಚಿತವಾಗಿ ಹಂಚಿದ್ದಾನೆ. ಬಳಿಕ ಮೂರ್ನಾಲ್ಕು ಕ್ವಿಂಟಲ್‌ ಉಳಿದಿದ್ದು, ಅದನ್ನು ಮಾರುಕಟ್ಟೆ ಎದುರೇ ರಸ್ತೆ ಪಕ್ಕದಲ್ಲೇ ಸುರಿದಿದ್ದಾನೆ.

ಒಂದು ಎಕರೆ ಟೊಮ್ಯಾಟೋ ಬೆಳೆಯಲು ಕನಿಷ್ಠ 30-40 ಸಾವಿರ ರೂ. ಖರ್ಚು ಮಾಡು ತ್ತಾರೆ. ಹಗಲಿರುಳೆನ್ನದೇ ನೀರು ಕಟ್ಟಬೇಕಿದೆ. ಈ ಬೆಳೆಗೂ ಮುದುರು, ಬೂದು ರೋಗ ಕಾಟ ವಿದ್ದು, ಕಾಲಕಾಲಕ್ಕೆ ರಾಸಾಯನಿಕ ಸಿಂಪಡಿಸ ಬೇಕಿದೆ. ಇಲ್ಲವಾದರೆ ಬೆಳೆ ಸಂಪೂರ್ಣ ನಾಶವಾಗಲಿದೆ. ಆದರೆ, ಮಾರುಕಟ್ಟೆಯಲ್ಲಿ ಕೆಜಿಗೆ 8ರಿಂದ 10 ರೂ. ದರವಿದ್ದರೂ ರೈತರಿಗೆ ಮಾತ್ರ ಅರ್ಧದಷ್ಟು ಕೂಡ ಸಿಗುತ್ತಿಲ್ಲ ಎಂಬುದು ರೈತರ ಆಕ್ರೋಶದ ನುಡಿ.

Advertisement

Udayavani is now on Telegram. Click here to join our channel and stay updated with the latest news.

Next