Advertisement

ರೈತನ ಮನೆಗೆ ಅಧಿಕಾರಿಗಳನ್ನು ಕಳುಹಿಸಿ ದಬ್ಬಾಳಿಕೆ: ತಹಶೀಲ್ದಾರ್ ಮೇಲೆ ಆರೋಪ ಮಾಡಿದ ರೈತ

03:57 PM Dec 07, 2021 | Team Udayavani |

ಆಲೂರು : ತಹಶೀಲ್ದಾರ್ ಶಿರೀನ್ ತಾಜ್ ಅಧಿಕಾರಿಗಳ ಮೂಲಕ ರೈತನ ಮೇಲೆ ವಿನಾಕಾರಣ ದಬ್ಬಾಳಿಕೆ ನಡೆಸಿ ಕಿರುಕುಳ ನೀಡುತ್ತಿರುವ ಘಟನೆ ಆಲೂರು ತಾಲ್ಲೂಕಿನಲ್ಲಿ ನಡೆದಿದೆ.

Advertisement

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊತನಹಳ್ಳಿಪುರ ಗ್ರಾಮದ ಜವರೇಗೌಡರ ಮಗ ದೇವರಾಜೇಗೌಡ  ಎಂಬುವವರು ಗ್ರಾಮದ ಸ.ನಂ 54 ರಲ್ಲಿ 9 ಎಕರೆ 5 ಗುಂಟೆ ಪೈಕಿ 50-15 ಅಡಿ ಜಾಗದಲ್ಲಿ 1982 ರಲ್ಲಿ ಸರ್ಕಾರದಿಂದ ನೀಡಿದ ಜನತಾ ಮನೆ ಮಾಡಿ ಅದಕ್ಕೆ ಬೈರಾಪುರ ಗ್ರಾಮ ಪಂಚಾಯಿತಿಯಲ್ಲಿ ಅದಕ್ಕೆ ತಗಲುವ ಕಂದಾಯ ವಗೈರೆಗಳನ್ನು ಕಟ್ಟಿಕೊಂಡು ಬಂದಿರುತ್ತಾರೆ ಅದರೆ ಇತ್ತೀಚಿಗೆ ವ್ಯಕ್ತಿಯೊಬ್ಬ ಮೌಖಿಕವಾಗಿ ದೂರು ನೀಡಿದ್ದಾರೆ ಎನ್ನುವ ಕಾರಣ ನೀಡಿ ತಹಶೀಲ್ದಾರ್ ಶಿರೀನ್ ತಾಜ್ ಅವರು ಕಂದಾಯ ಇಲಾಖೆ  ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳನ್ನು ರೈತ ದೇವರಾಜೇಗೌಡ ಮನೆ ಹತ್ತಿರ ಕಳುಹಿಸಿ ಕಿರುಕುಳ  ನೀಡುತ್ತಿದ್ದಾರೆ ಎಂದು ರೈತ ದೇವರಾಜೇಗೌಡ ಎಂದು ತನ್ನ ಅಳಲು ತೋಡಿಕೊಂಡರು.

ರೈತ ದೇವರಾಜೇಗೌಡ ಮಾತನಾಡಿ ಗ್ರಾಮದ ಸ.ನಂ 54 ರ 9 ಎಕರೆ 5 ಗುಂಟೆ ಜಮೀನಿನಲ್ಲಿ ಗ್ರಾಮಸ್ಥರೆಲ್ಲರೂ ಅವರಿಗೆ ಬೇಕಾದಷ್ಟು ಹಂಚಿಕೊಂಡು ಜೀವನ ನಡೆಸುತ್ತಿದ್ದಾರೆ ಅವರಂತೆ ನನಗೂ ಕೂಡ 1982 ರಲ್ಲಿ ಗ್ರಾಮಸ್ಥರು ಜಮೀನು ಹಂಚಿಕೊಟ್ಟಿದ್ದರು ಅದರಲ್ಲಿ ಸರ್ಕಾರದಿಂದ ನೀಡಿರುವ ಜನತಾಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು ಅದರೆ ಇತ್ತೀಚಿನ ಮಳೆಯಿಂದ ಮನೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಮನೆಯನ್ನು ದುರಸ್ತಿ ಮಾಡಲಾಗುತ್ತಿದೆ ತಾಲ್ಲೂಕು ತಹಶೀಲ್ದಾರ್ ಅವರು ಅಧಿಕಾರಿಗಳನ್ನು ರಾತ್ರೋರಾತ್ರಿ ಮನೆ ಹತ್ತಿರ ಕಳುಹಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನಲ್ಲಿ ಕೆರೆಕಟ್ಟೆಗಳು ಒತ್ತುವರಿಯಾಗಿವೆ,ಕಾಡಾನೆ ಸಮಸ್ಯೆಯಿದೆ,ಅಕಾಲಿಕ ಮಳೆಯಿಂದ ಮನೆಯನ್ನು ಕಳೆದುಕೊಂಡಿದ್ದಾರೆ,ಕಛೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ತಹಶೀಲ್ದಾರ್ ಶಿರೀನ್ ತಾಜ್ ಅವರು  ಅವುಗಳನ್ನು ಸರಿಪಡಿಸುವುದನ್ನು ಬಿಟ್ಟು ಗ್ರಾಮಗಳಲ್ಲಿ ಸಹಬಾಳ್ವೆ ನೆಮ್ಮದಿಯಿಂದ ಜೀವನ ನಡೆಸುತ್ತಿರುವ ರೈತರನ್ನು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟುತ್ತಿದ್ದಾರೆ ಹೇಮಾವತಿ ಪುನರ್ವಸತಿಯಿಂದ ಜಮೀನು ಕಳೆದು ಕೊಂಡ ರೈತರಿಗೆ ಬ್ಯಾಬ ಪಾರೆಷ್ಟ್ ನಲ್ಲಿ ಜಮೀನು ನೀಡಿ ನಾಲ್ಕು ದಶಕಗಳೇ ಕಳೆದಿವೆ ಅವರಿಗೆ ಸರಿಯಾದ ರಸ್ತೆ ಇಲ್ಲದೇ ಅವರು ನರಕಯಾತನೆ ಅನುಭವಿಸುತ್ತಿದ್ದಾರೆ ಅವರಿಗೆ ಮೊದಲು ರಸ್ತೆ ಶಾಶ್ವತ ಪರಿಹಾರ  ಕಂಡುಹಿಡಿಯಲಿ ಅದು ಬಿಟ್ಟು ರೈತರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ ಇವರ ವರ್ತನೆ ಇದೇರೀತಿ ಮುಂದುವರಿದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಸಂಸದರಿಗೆ ದೂರು ನೀಡಬೇಕಾಗುತ್ತೆ ಗ್ರಾಮದ ಮುಖಂಡ ಮಂಜೇಗೌಡ ಎಚ್ಚರಿಸಿದರು.

ಈ ಬಗ್ಗೆ ತಹಶಿಲ್ದಾರರ್ ಶಿರೀನ್ ತಾಜ್ ಮಾತನಾಡಿ ಯಾರೋ ಒಬ್ಬರು ಲಿಖಿತ ರೂಪದಲ್ಲಿ ದೂರು ನೀಡಿಲ್ಲ ಮೌಖಿಕವಾಗಿ ದೂರು ನೀಡಿದ್ದಾರೆ ಅದರಂತೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಪಡೆಯಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next