ರದ್ದುಪಡಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಬುಧವಾರ ನಡೆಯುತ್ತಿರುವ ಬಾರುಕೋಲು ಚಳವಳಿಯಲ್ಲಿ ಭಾಗವಹಿಸಲು ತಾಲೂಕಿನಿಂದ ತೆರಳುತ್ತಿದ್ದ ರೈತರನ್ನು ಪೊಲೀಸರು ತಡೆದ ಘಟನೆ ನಡೆಯಿತು. ಆನಂತರ ಕಡಿಮೆ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಲು ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಸತೀಶ್, ಉಮಾದೇವಿ, ಶಿರವಾರ ರವಿ,ಕೊರೊನಾ ಲಾಕ್ ಡೌನ್ ಆದಾಗ ರೈತರ ನೆರವಿಗೆ ಬಾರದ ಸರ್ಕಾರ ಈಗ ರೈತರ ವಿರುದ್ಧ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದಿದೆ.
Advertisement
ಪ್ರಜಾಪ್ರಭುತ್ವ ವಿರೋಧಿ ಮಾರ್ಗದ ಮೂಲಕ ಕಾನೂನುಗಳನ್ನು ಜಾರಿಗೆ ತರುವ ಜನವಿರೋಧಿ ಆಡಳಿತವಾಗಿದೆ ಎಂದರು. ಇಡೀ ದೇಶದಲ್ಲಿ ಇವತ್ತು ಬಿಜೆಪಿ ಆಡಳಿತದ ವಿರುದ್ಧ ರೈತರು ತಿರುಗಿಬಿದ್ದಿದ್ದಾರೆ. ಇನ್ನಾದರು ರೈತಪರಕಾಯ್ದೆ ಜಾರಿಗೆ ತರಬೇಕು. ಇಲ್ಲದಿದ್ದರೆ ಬಾರುಕೋಲಿನ ಮೂಲಕ ಬಡಿದೆಚ್ಚರಿಸಲಾಗುವುದು. ರೈತರು ಮಾಡುವುದು ಸದಾ ಶಾಂತಿಯುತ, ಗಾಂಧೀಜಿ ಮಾರ್ಗದ ಹೋರಾಟ. ಇದಕ್ಕೆ ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವಮಾತೇ ಇಲ್ಲ ಎಂದರು.ಬೆಂಗಳೂರಿನಲ್ಲಿ ನಡೆಯುತ್ತಿರುವ ಬಾರುಕೋಲು ಹೋರಾಟಕ್ಕೆ ತಾಲೂಕಿನಿಂದಲು ಚಾಟಿಗಳೊಂದಿಗೆ ಭಾಗವಹಿಸಿದ್ದರು.