Advertisement

ರೈತರ ಉತ್ಪನ್ನ ಖರೀದಿ: ಸಿಎಂ ಬಳಿ ಚರ್ಚಿಸುವೆ

06:03 PM Apr 13, 2020 | mahesh |

ರಾಮನಗರ: ಲಾಕ್‌ಡೌನ್‌ನಿಂದಾಗಿ ರೈತರ ಉತ್ಪನ್ನ ಸಾಗಾಣಿಕೆ, ಮಾರಾಟ ಸಾಧ್ಯವಾಗುತ್ತಿಲ್ಲ ಎಂದು ರೈತರು ಮತ್ತು ಜನಪ್ರತಿನಿಧಿಗಳು ದೂರಿದ ಹಿನ್ನೆಲೆಯಲ್ಲಿ ಸರ್ಕಾರವೇ ಬೆಂಬಲ ಬೆಲೆ ನೀಡಿ ಖರೀದಿಸುವ ವಿಚಾರವನ್ನು ಸಿಎಂ ಬಳಿ ಚರ್ಚಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಭರವಸೆ ನೀಡಿದರು.

Advertisement

ರೈತರು ತೊಂದರೆಯಲ್ಲಿದ್ದು, ಮಾಹಿತಿ ಪಡೆಯಲು ಶನಿವಾರ ಸಂಜೆ ನಗರಕ್ಕೆ ಭೇಟಿ ನೀಡಿದ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ
ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಾಗಾಣಿಕೆಗೆ ಕೇರಳ ಗಡಿ ಹೊರತು ಪಡಿಸಿ, ರಾಜ್ಯದೊಳಗಿನ ಎಲ್ಲ ಚೆಕ್‌ ಪೋಸ್ಟ್‌ಗಳನ್ನು ಮುಕ್ತವಾಗಿರಿಸಲಾಗಿದೆ. ರೈತ ಸಮುದಾಯಕ್ಕೆ ತೊಂದರೆಯಾಗದಂತೆ ಸರ್ಕಾರ ಆದೇಶ ಮಾಡುತ್ತಿದೆ. ರೈತರು ತಮ್ಮ ಉತ್ಪನ್ನ ಸಾಗಾಣಿಕೆಗೆ ಸಾರಿಗೆ ವ್ಯವಸ್ಥೆ, ಹಾಪ್‌ ಕಾಮ್ಸ್‌ನಿಂದ ಅವುಗಳ ಮಾರಾಟಕ್ಕೆ ಅನುವು ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿದೆ ಎಂದರು.

ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಸಚಿವರ ಗಮನ ಸೆಳೆದು, ಎಪಿಎಂಸಿಗಳಲ್ಲಿ ರೈತರು ಬೆಳೆ ಕೊಳ್ಳುವವರಿಲ್ಲ. ಸರ್ಕಾರವೇ ಉತ್ಪನ್ನ ಕೊಳ್ಳಲು ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಸಚಿವರು, ಸರ್ಕಾರದಿಂದಲೇ ಉತ್ಪನ್ನ ಖರೀದಿಸುವ ಬಗ್ಗೆ ಸಿಎಂ ಬಳಿ ಮಾತನಾಡುವುದಾಗಿ ಭರವಸೆ ನೀಡಿದರು.  ಈ ವೇಳೆ ಅಧಿಕಾರಿಗಳು ಸಚಿವರಿಗೆ ನೀಡಿದ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಡಿ.ಕೆ.ಸುರೇಶ್‌,
ಅಧಿಕಾರಿಗಳು ಸಚಿವರ ಬಳಿ ಸುಳ್ಳು ಮಾಹಿತಿ ಕೊಡಬೇಡಿ ಎಂದು ಗರಂ ಆದರು.

ಎಂಎಲ್‌ಸಿಗಳಾದ ಸಿ.ಎಂ.ಲಿಂಗಪ್ಪ, ಎಸ್‌.ರವಿ, ಅ. ದೇವೇಗೌಡ, ಜಿಪಂ ಅಧ್ಯಕ್ಷ ಬಸಪ್ಪ, ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಜಿಪಂ ಸಿಇಒ ಇಕ್ರಂ, ಎಸ್‌ಪಿ ಅನೂಪ್‌ ಶೆಟ್ಟಿ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರದಿಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next