ರಾಮನಗರ:ಕೃಷಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕಳೆದ 200 ದಿನದಿಂದ ದೆಹಲಿಯಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.ಆದರೆ, ಸರ್ಕಾರ ರೈತರನ್ನು ಕಡೆಗಣಿಸುವ ಮತ್ತು ಧಮನಕಾರಿ ನೀತಿ ಮುಂದುವರಿಸುತ್ತಿದೆ ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಪಧಾದಿಕಾರಿಗಳು ಆರೋಪಿಸಿದ್ದಾರೆ.
ನಗರದಲ್ಲಿ ಜಿಲ್ಲಾ ಕಚೇರಿಗಳ ಸಂಕಿರ್ಣದಮುಂಭಾಗ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದವಿರುದ್ಧ ಹರಿಹಾಯ್ದರು.ರೈತರನ್ನು ದಿವಾಳಿ ಎಬ್ಬಿಸುವ ಹುನ್ನಾರ: ರಾಜ್ಯ ರೈತಸಂಘದ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ,ಸರ್ಕಾರಕ್ಕೆ ರೈತರ «ನಿ ಆ Ì ಲಿಸುತ್ತಿಲ್ಲ. ರೈತರನ್ನು ಕೃಷಿಯಿಂದ ಮುಕ್ತ ಮಾಡಿ, ಅವರನ್ನು ದಿವಾಳಿ ಎಬ್ಬಿಸುವಹುನ್ನಾರ ನಡೆಸುತ್ತಿದ್ದಾರೆ.
ಮೂರು ಕಾಯ್ದೆಗಳನ್ನುಹಿಂಪಡೆಯುವಂತೆ ಹೋರಾಟ ನಡೆಸಿದ್ದರೂ ಕೇಂದ್ರಸರ್ಕಾರ ರೈತರಿಗೆ ಸ್ಪಂದಿಸಿಲ್ಲ. ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ ಎಂದು ರೈತರೊಡನೆ ಚರ್ಚಿಸಲೂ ಇಲ್ಲ.ರೈತರು, ಕಾರ್ಮಿಕರು, ಬಡವರು ಅರ್ಥಿಕವಾಗಿ ಚೇತರಿಸಿಕೊಳ್ಳಲು ಸರ್ಕಾರದ ನೀತಿಗಳು ಅವಕಾಶ ನೀಡುತ್ತಿಲ್ಲ. ಧನಿಕರು ಮತ್ತಷ್ಟು ಧನಿಕರಾಗುತ್ತಿದ್ದಾರೆ ಎಂದುಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳೊಂದಿಗೆ ರೈತರ ಸಭೆ ನಡೆಸಿ: ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಬೈರೇಗೌಡ ಮಾತನಾಡಿ,ಜಿÇಯ ೆÉ ಲ್ಲಿ ರೈತರ ಸಮಸ್ಯೆ ಪರಿಹಾರಕ್ಕಾಗಿ ವಿವಿಧಇಲಾಖೆಗಳ ಮುಖ್ಯಸ್ಥರ ಜೊತೆ ಸಭೆ ಏರ್ಪಡಿಸುವಂತೆಡೀಸಿಗೆ ಮನವಿ ಮಾಡಿದರು. ಕೋವಿಡ್‌ನಿಂದ ಕೃಷಿಕರು ನಷ್ಟ ಅನುಭವಿಸಿದ್ದಾರೆ. ರೈತರಿಗೆಈಬಾರಿ ಬಿತ್ತನೆಗೆ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಬೇಕು. ಕೃಷಿ ಯಂತ್ರಗಳನ್ನು ಉಚಿತವಾಗಿ ಬಳಸಲುಅವಕಾಶಕೊಡಬೇಕು ಎಂದು ಆಗ್ರಹಿಸಿದರು.