Advertisement

ನ್ಯಾನೋ ತಂತ್ರಜ್ಞಾನದತ್ತ ಅನ್ನದಾತ 

05:28 PM Jun 19, 2018 | |

ರೋಣ: ಇಂದಿನ ಆಧುನಿಕ ಕಾಲದಲ್ಲಿ ಎಲ್ಲ ರಂಗಗಳಲ್ಲಿ ನ್ಯಾನೋ ತಂತ್ರಜ್ಞಾನ ಬಳಕೆ ಮಾಡುವುದು ಸಾಮಾನ್ಯ. ಹಳ್ಳಿಗಳಲ್ಲಿಯೂ ರೈತರು ನ್ಯಾನೋ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರದಲ್ಲಿ ಹೆಚ್ಚಿಗೆ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಈ ಭಾಗದಲ್ಲಿ ಸೈಕಲ್‌ ವೆಂಡರ್‌ ಬಳಸಿ ಎಡೆ ಹೊಡೆಯುವ ಕಾರ್ಯ ಜೋರಾಗಿ ನಡೆದಿದೆ.

Advertisement

ಸೈಕಲ್‌ ಯಂತ್ರದ ಮೂಲಕ ಹೆಸರು ಬೆಳೆಗಳ ಬದಿಯಲ್ಲಿ ಬೆಳೆದಿರುವ ಕಳೆ ತೆಗೆಯಲು ಎಡೆ ಹೊಡೆಯಲಾಗುತ್ತಿದೆ. ಎತ್ತುಗಳನ್ನು ಸಾಕಿರುವ ರೈತರು ಅವುಗಳ ಸಹಾಯದಿಂದ ಎಡೆ ಹೊಡೆಯುತ್ತಿದ್ದಾರೆ. ಆದರೆ ಎತ್ತುಗಳು ಸಾಕದ ರೈತರು ನ್ಯಾನೋ ಯಂತ್ರ ಬಳಕೆ ಮಾಡಿ ಕಳೆ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಸಮಯ ಹಾಗೂ ಶ್ರಮ ಕಡಿಮೆಯಾಗುತ್ತದೆ. ಹಣವನ್ನೂ ಉಳಿತಾಯ ಮಾಡಬಹುದು.

ಒಂದು ಎಕರೆ ಪ್ರದೇಶಕ್ಕೆ ಎತ್ತುಗಳನ್ನು ಬಳಸಿ ಎಡೆ ಹೊಡೆಯಲು ನಾಲ್ಕರಿಂದ ಐದೂ°ರು ರೂ.ಗಳ ವರೆಗೆ ಖರ್ಚು
ತಗಲುತ್ತದೆ. ಆದರೆ ಸೈಕಲ್‌ ಯಂತ್ರ ಬಳಸಿ ಮನೆಯ ಒಬ್ಬರು ಈ ಕೆಲಸ ಮಾಡಬಹುದಾಗಿದೆ. ಇದರಿಂದ ಸಮಯವೂ ಉಳಿತಾಯ ಆಗುವುದರೊಂದಿಗೆ ಹಣವು ಉಳಿತಾಯವಾಗುತ್ತದೆ.

ಯಂತ್ರದ ತಯಾರಿ ಹೇಗೆ?
ಈ ಯಂತ್ರ ತಯಾರಿಸಲು ಒಂದು ಸೈಕಲ್‌ ಗಾಲಿ, ಮುಂದಿನ ಹೆಡಲ್‌ ಸಾಕು. ಇದಕ್ಕೆ ಎರಡು ಕಬ್ಬಿಣದ ಸಲಾಖೆ ಜೋಡಿಸಿ, ಅದಕ್ಕೆ ಒಂದು ಸಣ್ಣ ಚೂರಿ ಕುಡವನ್ನು ಅಳವಡಿಸಿದರೆ ಸಾಕು ಸೈಕಲ್‌ ವೆಂಡರ್‌ ತಯಾರಾಗುತ್ತದೆ. ಹೆಚ್ಚು ಅಂದರೆ ಎಲ್ಲ ಸೇರಿ 5ರಿಂದ 6 ನೂರು ವೆಚ್ಚವಾಗಬಹುದು. ಒಂದು ಬಾರಿ ತಯಾರಿಸಿದರೆ ಪ್ರತಿ ಬೆಳೆಗೂ ಕಸ ತೆಗೆಯಲು ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ರೀತಿಯಾಗಿ ಸೈಕಲ್‌ ಎಡೆ ಕುಂಟಿಯಿಂದ ಸಾಲುಗಳ ಮಧ್ಯದಲ್ಲಿ ಬೆಳೆದಿರುವ ಕಳೆ ತೆಗೆಯಲು ತುಂಬಾ ಅನುಕೂಲವಾಗುವುದು. ಕೃಷಿ ಇಲಾಖೆಯಲ್ಲಿಯೂ ಈ ಸೈಕಲ್‌ ವೆಂಡರ್‌ ಪಡೆಯಬಹದು. ಇಲಾಖೆ ವತಿಯಿಂದ ಸಾಹಾಯಧನದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ.
ಸಿದ್ದೇಶ ಕೊಡಿಹಳ್ಳಿ,
ಕೃಷಿ ಇಲಾಖೆ ಸಹಾಯ ನಿರ್ದೇಶಕ 

Advertisement

ಎತ್ತುಗಳಿಂದ ಎಡೆ ಹೊಡೆಸಬೇಕು ಎಂದರೆ ಎತ್ತುಗಳನ್ನು ಹೊಂದಿದ ರೈತರೆಲ್ಲ ಬಿತ್ತನೆ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಅವರಿಗೆ ಕೊಡುವ ಬಾಡಿಗೆಯೂ ಹೆಚ್ಚು. ಅದಕ್ಕಾಗಿ ನಾನೇ ಖುದ್ದಾಗಿ ಈ ಸೈಕಲ್‌ ಯಂತ್ರ ಬಳಕೆ ಮಾಡಿದ್ದು, ಹೆಸರು ಹೊಲದಲ್ಲಿ ಎಡೆ ಹೊಡೆಯುತ್ತಿದ್ದೇನೆ.
ಪರುತಗೌಡ ರಾಯನಗೌಡ್ರ,
ಮಾಡಲಗೇರಿ ರೈತ 

ಯಚ್ಚರಗೌಡ ಗೋವಿಂದಗೌಡ್ರ 

Advertisement

Udayavani is now on Telegram. Click here to join our channel and stay updated with the latest news.

Next