Advertisement

ಸಾಲಬಾಧೆ: ನೇಣು ಹಾಕಿಕೊಂಡು ರೈತ ಆತ್ಮಹತ್ಯೆ 

12:30 AM Mar 04, 2019 | |

ಸಾಂಬ್ರಾ: ಸಾಲಬಾಧೆ ತಾಳದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಅತಿವಾಡ ಗ್ರಾಮದ ಹೊಲದಲ್ಲಿ ಶನಿವಾರ ನಡೆದಿದೆ. ಗ್ರಾಮದ ರೈತ ಸುರೇಶ ಅರ್ಜುನ ಸಾತೇರಿ ಕಣಬರಕರ (55) ಮೃತ ರೈತ. ಅರ್ಜುನ ತನ್ನ ಹೆಸರಿನಲ್ಲಿದ್ದ ಜಮೀನಿನ ಮೇಲೆ ಸ್ಥಳೀಯ ಸಹಕಾರ ಸಂಘದಿಂದ 35 ಸಾವಿರ ರೂ. ಸಾಲ ಸೇರಿ ಖಾಸಗಿ ವ್ಯಕ್ತಿಯೋರ್ವರಿಗೆ ಜಮೀನು ಅಡವಿಟ್ಟು ಸಾವಿರಾರೂ ರೂ. ಸಾಲ ಪಡೆದಿದ್ದಾಗಿ ತಿಳಿದುಬಂದಿದೆ. ಕೃಷಿ ಹಾಗೂ ಸಂಸಾರ ನಿರ್ವಹಣೆಗೆ 1 ಲಕ್ಷ ರೂ. ಸಾಲ ಮಾಡಿದ್ದನೆಂದು ಹೇಳಲಾಗಿದೆ.

Advertisement

ಇದರಿಂದ ಬೇಸತ್ತು ಸಾಲ ಬಾಧೆ ತಾಳದೆ ಅತಿವಾಡ ಗ್ರಾಮದ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನಿಗೆ ತಾಯಿ. ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next