ಕೋಲಾರ: ಜನ ಸಾಮಾನ್ಯರಿಗೆ ಹೊರೆಯಾಗುತ್ತಿರುವ ತೈಲಬೆಲೆ ಏರಿಕೆಗೆ ಕಡಿವಾಣ ಹಾಕಿ ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯ ಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಗಣರಾಜ್ಯೋತ್ಸವ ಪರ್ಯಾಯವಾಗಿ ರೈತ ಗಣರಾಜ್ಯೋತ್ಸವ ಎತ್ತಿನ ಬಂಡಿಗಳ ರ್ಯಾಲಿ ನಡೆಸಲಾಯಿತು.
ನಗರದ ಗಾಂಧಿ ಪ್ರತಿಮೆಯಿಂದ ಎತ್ತಿನ ಬಂಡಿ ಹಾಗೂ ನೇಗಿಲುಗಳ ಮೂಲಕ ಹೊಸ ಬಸ್ ನಿಲ್ದಾಣ ದವರೆಗೂ ರ್ಯಾಲಿ ನಡೆಸಿ ಪಿಎಸ್‌ಐ ಅಣ್ಣಯ್ಯ ಮುಖಾಂ ತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ರ್ಯಾಲಿಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೇಂದ್ರ ಸರ್ಕಾರ ಜನಾಭಿಪ್ರಾಯವಿಲ್ಲದೆಏಕಾಏಕಿ ರೈತ, ದಲಿತ, ಕಾರ್ಮಿಕ, ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಬಡ ಕುಟುಂಬಗಳನ್ನು ಬೀದಿ ಪಾಲು ಮಾಡಿದೆ ಎಂದು ಟೀಕಿಸಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಗಣರಾಜ್ಯೋತ್ಸವದಂದು ವಿಶೇಷ ಟ್ರ್ಯಾಕ್ಟರ್ ಪರೇಡ್‌ಗೆ ಬೆಂಬಲವಾಗಿ ವಿಶೇಷ ರೈತ ಪರೇಡ್ ನಡೆಸುವ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿ ಕೃಷಿ ಕಾಯಿದೆಗಳ ಬಗ್ಗೆ ಕೂಲಂಕುಶವಾಗಿಪರಿಶೀಲನೆ ಮಾಡಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ:ಮೆಂತ್ಯೆ ಸೊಪ್ಪಿನ ವೈವಿಧ್ಯಮಯ ಅಡುಗೆಗಳು
ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‌ಗೌಡ, ತೆರ್ನ ಹಳ್ಳಿ ಆಂಜನಪ್ಪ, ಮುಳಬಾಗಿಲು ತಾ.ಅಧ್ಯಕ್ಷ ಫಾರೂಕ್ ಪಾಷಾ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಂದ್‌ಪಾಷ, ಹಸಿರುಸೇನೆ ತಾಲೂಕು ಅಧ್ಯಕ್ಷ ಚಲಪತಿ, ನಳಿನಿ, ಸುನಿತಾ, ಲಕ್ಷ್ಮೀ, ಇದ್ದರು.