Advertisement

ವಿಜಯಪುರ: ಹರಿಯುವ ಹಳ್ಳದ ರಭಸಕ್ಕೆ ಕೊಚ್ಚಿಹೋದ ರೈತ, ಹುಡುಕಾಟ ಆರಂಭ

01:21 PM Jul 08, 2021 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಗೆ ತುಂಬಿ ಹರಿಯುವ ಹಳ್ಳದಲ್ಲಿ ನೀರಿನ ರಭಸಕ್ಕೆ ರೈತರೊಬ್ಬರು ಕೊಚ್ಚಿಕೊಂಡು ಹೋದ ಘಟನೆ ಜರುಗಿದೆ.

Advertisement

ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಜಿಲ್ಲೆಯ ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಕುರಬತಹಳ್ಳಿ ಗ್ರಾಮದ ರೈತ ಬಸಣ್ಣ ಸಿದಪ್ಪ ಅoಬಾಗೋಳ (58 ವ) ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.

ಇದನ್ನೂ ಓದಿ:ಕೊಯ್ನಾನಗರ ಎಸ್‌ಡಿಆರ್‌ಎಫ್‌ ಯೋಜನೆ ಪ್ರಸ್ತಾವ ಸಲ್ಲಿಸಿ: ದೇಸಾಯಿ

ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದಾಗ ವಿಪರೀತ ಮಳೆಯಾಗಿದ್ದು, ಮನೆಗೆ ಮರಳುವ ಹಂತದಲ್ಲಿ ಮಾರ್ಗ ಮಧ್ಯದ ಹಳ್ಳ ತುಂಬಿ ಬಂದಿದೆ. ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಮುಂದಾದಾಗ ಬಸಣ್ಣ ನೀರಿನಲ್ಲಿ ಕೊಚ್ಚಿಕೊಂಡು ಹೊಗಿದ್ದಾನೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಬಸಣ್ಣನಿಗಾಗಿ ಹಳ್ಳದಲ್ಲಿ ಶೋಧ ನಡೆಸಿದ್ದಾರೆ.

Advertisement

ಆಲಮೇಲ ತಾಲೂಕಿನ ದೊಡ್ಡ ಹಾಗೂ ಭೀಮಾ ನದಿಯ ಹಳ್ಳಗಳಲ್ಲಿ ಒಂದಾಗಿರುವ  ಕುರಬತ್ತಹಳ್ಳಿ ಹಳ್ಳ ತಾರಾಪೂರ ಮಾರ್ಗವಾಗಿ ಭೀಮಾ ನದಿಗೆ ಸೇರುತ್ತದೆ. ಬಸಣ್ಣನ ಪತ್ತೆಗಾಗಿ ಬೋಟ್ ಮೂಲಕ ಭೀಮಾ ನದಿಯಲ್ಲೂ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುವುದಾಗಿ ಸಿಂದಗಿ ತಹಶೀಲ್ದಾರ ಸಂಜೀವ ಕುಮಾರ ದಾಸರ ತಿಳಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next