Advertisement
ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ವೆಂಕನಗೌಡ ರಾಮನಗೌಡ ಸಾಲಿಗೌಡ್ರ ೪೦ ಎಂಬ ರೈತ ನೀರಿನ ರಬಸಕ್ಕೆ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಬಾಗಲಕೋಟೆ-ಗದಗ ಸಂಪರ್ಕ ಕಲ್ಪಿಸುವ ಹಳೆ ಸೇತುವೆ ಮೂಲಕ ದಿನಂಪ್ರತಿ ನದಿ ದಾಟಿ ತನ್ನ ಮಿನಿಗೆ ತೆರಳಿ ಕಾಯಕ ಮುಗಿಸಿ ಮರಳುತ್ತಿದ್ದ ವೆಂಕನಗೌಡ ಇಂದು ನದಿ ದಾಟುವ ಸಮಯದಲ್ಲಿ ಕಾಲು ಜಾರಿ ಕೊಚ್ಚಿ ಹೋಗಿದ್ದಾನೆ.
ಸ್ಥಳಕ್ಕೆ ಬಾದಾಮಿ ತಹಸಿಲ್ದಾರ ಸುಹಾಸ ಇಂಗಳೆ ತಮ್ಮ ಅಧಿಕಾರಿಗಳೊಂದಿಗೆ ಆಗಮಿಸಿದ್ದು ಜಿಲ್ಲೆಯ ಅಗ್ನಿ ಶಾಮಕ ದಳ ಅಧಿಕಾಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹ ಆಗಮಿಸಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಿಯರ ಸಹಾಯ ಪಡೆದು ಬೋಟ್ ಬಳಸಿಕೊಂಡು ವ್ಯಕ್ತಯ ಪತ್ತೆಗಾಗಿ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.
Related Articles
Advertisement
ಕೊಚ್ಚಿಹೋದ ವ್ಯಕ್ತಿ ಸಾಮಾನ್ಯನಲ್ಲ ಈ ಹಿಂದೆ ಇದೆ ನದಿಯಲ್ಲಿ ಕೊಚ್ಚಿ ಹೋಗಿದ್ದ ಸುಮಾರು ಜನರನ್ನ ಸಾಕಷ್ಟುಬಾರಿ ರಕ್ಷಿಸಿದ್ದಾನೆ, ನೀರಲ್ಲಿ ಮುಳುಗಿ ಸತ್ತ ಹೆಣಗಳನ್ನ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಅದೃಷ್ಟ ವಶಾತ್ ಈ ನದಿಯ ದಡದಲ್ಲಿ ಜೀವ ರಕ್ಷಕನಾಗಿದ್ದ ವೆಂಕನಗೌಡ ಸಾಲಿಗೌಡ್ರ ಇಂದು ಅದೆ ನದಿಯಲ್ಲಿ ಕೊಚ್ಚಿಹೋಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ.
ನೀರಿನ ಮಟ್ಟ: ಮಳೆ ಪ್ರಾರಂಭವಾದಾಗಿನಿಂದ ಪ್ರತಿದಿನ ೫೦೦೦ ಕ್ಯೊಸೆಕ್ ನೀರು ಸತತ ಹರಿಯುತ್ತಿರುವುದರಿಂದ ಹಳೆ ಸೇತುವೆ ಸೇರಿದಂತೆ ಜಮಿನುಗಳು ಸಹ ಜಲಾವೃತಗೊಂಡಿವೆ. ಹರಿಯುತ್ತಿರುವ ನೀರು ಹೆಚ್ಚು ಕಡಿಮೆ ಯಾಗುತ್ತಿರುವುದರಿಂದ ಸದ್ಯ ನದಿ ಪಕ್ಕದಲ್ಲಿರುವ ರೈತರಿಗೆ ಭಯದ ವಾತಾವರಣ ನಿರ್ಮಾನವಾಗಿದೆ.
ಗದಗ ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಮುದಕಣ್ಣ ಹೆರಕಲ್, ಪ್ರವೀಣ ಮೇಟಿ, ಆನಂದ ನರಗುಂದ, ಕಂದಾಯ ನೀರಿಕ್ಷಕ ಎ.ಡಿ. ಸಾರವಾಡ, ಗ್ರಾಮಲೆಕ್ಕಾಧಿಕಾರಿ ಎಸ್ ಜೆ ದ್ಯಾಪೂರ, ಎಎಸ್‌ಐ ಎ ಎಲ್ ಗೊರವರ, ಸೇರಿದಂತೆ ಸಿಬ್ಬಂದಿ ಇದ್ದರು.