ಏನೇನು ಕೃಷಿ: ಭತ್ತ, ಅಡಿಕೆ ಕರಿಮೆಣಸು
ವಯಸ್ಸು: 58
ಕೃಷಿ ಪ್ರದೇಶ: 3 ಎಕ್ರೆ
Advertisement
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತ್ವದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
Related Articles
ಸಮೀಪದಲ್ಲೇ ನಂದಿನಿ ನದಿಯಿದ್ದರೂ ಉಪ್ಪು ನೀರಿನ ಸಮಸ್ಯೆಯೂ ಇವರ ಜಮೀನಿಗೆ ಬಲವಾಗಿ ಕಾಡುತ್ತಿದೆ. ಹೀಗಾಗಿ ದಯಾನಂದ ಶೆಟ್ಟಿ ಅವರು ತಮ್ಮ ಕೃಷಿಗೆ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ. ಹಟ್ಟಿ ಗೊಬ್ಬರದ ಜತೆಗೆ ಸುಡುಮಣ್ಣು ಬಳಸಿ ಗೊಬ್ಬರವನ್ನು ತಯಾರಿಸುತ್ತಾರೆ.
ಬೆಳೆಗಳಿಗೆ ಬೇಕಾದ ಸಾವಯವ ಗೊಬ್ಬರವನ್ನು ತನ್ನಲ್ಲಿಯೇ ತಯಾರಿಸಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಿಕೊಂಡಿರುತ್ತಾರೆ. ಇದರಿಂದ ಗೊಬ್ಬರಕ್ಕೆ ಹಣ ವೆಚ್ಚವಾಗುವುದು ಉಳಿತಾಯವಾಗುತ್ತದೆ.
Advertisement
ಮಂಗಳ ಅಡಿಕೆದಯಾನಂದ ಶೆಟ್ಟಿ ಅವರ ತೋಟದಲ್ಲಿ ಮಂಗಳ ಅಡಿಕೆ ನೆಟ್ಟಿದ್ದು ಫಲ ನೀಡಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತಿದೆಯಾದರೂ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಸಾವಯವ ಮಾದರಿಯಲ್ಲಿ ಕೃಷಿ ನಡೆಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ. ಅವರ ಸಾಧನೆಯ ಹಿಂದೆ ಪತ್ನಿಯವರ ಸಹಕಾರ ಇದೆ. ಅಲ್ಲದೆ ತಮ್ಮ ಗದ್ದೆಯಲ್ಲಿ ಕೆಲವರಿಗೆ ಕೆಲಸ ನೀಡಿದ ತೃಪ್ತಿಯೂ ಇವರಿಗಿದೆ. ತೋಟದ ಮದ್ಯದಲ್ಲಿ ಮನೆ ರಚನೆ ಮಾಡಿ ಅವರು ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಅವರ ಸಾಧನೆಗೆ ಅನೇಕ ಸಂಘ-ಸಂಸ್ಥೆಯವರು ಅವರನ್ನು ಗುರುತಿಸಿ ಗೌರವಿಸಿದ್ದಾರೆ.ಅವರ ಸಾಧನೆ ಹಿಂದೆ ಬಹಳಷ್ಟು ಶ್ರಮವಿದೆ. ಮಧ್ಯಮ ವರ್ಗದಲ್ಲಿ ಬೆಳೆದು ಇಂದು ಕೃಷಿಯ ಜತೆ ಪೂರಕವಾದ ಇತರ ಉಪ ಕೆಲಸಗಳನ್ನು ನಿರ್ವಹಿಸುತ್ತಾ ಸಂತೃಪ್ತ ಜೀವನ ಸಾಗಿಸುತ್ತಿರುವ ದಯಾನಂದ ಶೆಟ್ಟಿ ಆದರ್ಶರಾಗಿದ್ದಾರೆ. ಜಿಲ್ಲಾ ಮಟ್ಟದ ಕೃಷಿಕ
ಸಾಲು ನಾಟಿಯ ಮೂಲಕ ಭತ್ತದ ಕೃಷಿ ಮಾಡುವ ಇವರು ಈ ವಿಧಾನದಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂಬುದನ್ನು ಅರಿತುಕೊಂಡಿದ್ದಾರೆ. ತಮ್ಮ ಮೂರು ಎಕ್ರೆ ಭೂಮಿಯಲ್ಲಿ ಬಹುಪಾಲು ಭತ್ತ ನಾಟಿ ಮಾಡಿ 2016-17ರಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಕೃಷಿ ಪ್ರಶಸ್ತಿ ಪಡೆದ ಸಾಧನೆ ಇವರದು. ಈಗ ನೇಜಿ ನಾಟಿ ಮಾಡುವ ಯಂತ್ರವನ್ನು ಖರೀದಿಸಿ ಇತರ ಕೃಷಿಕರಿಗೂ ಇದರ ಸದುಪಯೋಗ ನೀಡಿ ಕೃಷಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ನೆರವಾಗಿದ್ದಾರೆ. ಅಲ್ಲದೆ ಕೃಷಿ ಇಲಾಖೆಯು ಆಯೋಜಿಸುವ ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕೃಷಿ ಅನುಭವವನ್ನೂ ಇತರರಿಗೆ ತಿಳಿಸಿ ಮಾರ್ಗದರ್ಶನ ಮಾಡುತ್ತಾರೆ.
ಮೊಬೈಲ್ ಸಂಖ್ಯೆ: 9343342582 ಸರಿಯಾದ ಮಾಹಿತಿ ಅಗತ್ಯ
ಭತ್ತದ ಕೆಲಸ ಹುಡುಕಿಕೊಂಡು ಹೋಗಿದ್ದೆ. ಆದರೆ ದೈವೇಚ್ಛೆಯಂತೆ ಊರಿಗೆ ಮರಳಿ ಬಂದು ಕೃಷಿಯಲ್ಲಿ ತೊಡಗಿಸಿಕೊಂಡೆ. ಕುಟುಂಬದ ಪ್ರೋತ್ಸಾಹವೂ ಸಿಕ್ಕಿತು. ಇರುವ ಮೂರು ಎಕ್ರೆಯಲ್ಲಿ ಸಾವಯವ ಗೊಬ್ಬರದ ಬಳಕೆಯೊಂದಿಗೆ ಸಾಲು ನಾಟಿ ಮಾಡುತ್ತೇನೆ. ಇದರಲ್ಲಿ ಹೆಚ್ಚು ಇಳುವರಿಯೂ ಸಿಗುತ್ತದೆ. ಮುಖ್ಯವಾಗಿ ರೈತರು ಬೆಳೆ ಬೆಳೆಯುವ ಮೊದಲು ಸರಿಯಾದ ಮಾಹಿತಿಯನ್ನು ಪಡೆಯಬೇಕು. ಈ ರೀತಿಯಲ್ಲಿ ನಡೆಸಿದರೆ ಕೃಷಿಯು ಅತ್ಯಂತ ಲಾಭದಾಯಕವಾಗಲು ಸಾಧ್ಯ. ಕೃಷಿಯಲ್ಲಿ ನಷ್ಟವೆಂಬುದು ಇಲ್ಲ. ಮಕ್ಕಳಂತೆ ನಾವೇ ಉಸ್ತುವಾರಿ ನೋಡಿಕೊಂಡು ಕಾಲ ಕಾಲಕ್ಕೆ ಆರೈಕೆ ಮಾಡಿಕೊಂಡಿದ್ದರೆ ನಷ್ಟವಿಲ್ಲದೆ ಬೆಳೆಯಬಹುದು. ಕಜಜಯ ನಾಟಿ ಮಾಡಿ ಇಳುವರಿ ಪಡೆಯುತ್ತಿದ್ದು ಮನೆಗೆ, ಹೆಚ್ಚುವರಿಯನ್ನು ಮಾರಾಟ ಮಾಡುತ್ತೇನೆ. ಈಗ ನಾಟಿ ಮಾಡುವ ಯಂತ್ರವನ್ನು ಖರೀದಿಸಿ ಇತರರ ಕೃಷಿ ಭೂಮಿಯಲ್ಲಿ ಬೇಡಿಕೆ ಮೇರೆಗೆ ಹೋಗಿ ಉಳುಮೆ ಮಾಡುವ ಯೋಜನೆಯಿದೆ.
-ದಯಾನಂದ ಶೆಟ್ಟಿ ಕೃಷಿಕರು ಲಕ್ಷ್ಮೀ ನಾರಾಯಣರಾವ್