ಫೆ.23 ರಂದು ರೈತ ಸಮಾವೇಶ: ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ರೈತ ಸಮಾವೇಶ-2020 ಫೆ. 23 ರಂದು ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ‘ ಸ್ಮರಣಿಕಾ’ ದಿವಾಕರ ಸನಿಲ್ ಉಡುಪಿ ರೆಸಿಡೆನ್ಸಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ಲೆಕ್ಕಚಾರವಿರದೆ ದಿನದಲ್ಲಿ 18-20 ಗಂಟೆ ಕೆಲಸ ಮಾಡಿದರೂ ಕೃಷಿ ಪ್ರಯೋಜನಕಾರಿಯಾಗಿ ಕಾಣದು. ಲೆಕ್ಕಚಾರವಿಟ್ಟು ವೈಜ್ಞಾನಿಕ ಕೃಷಿ ಮಾಡಿದರೆ, ಕೃಷಿಯಷ್ಟು ಲಾಭದಾಯಕ ಉದ್ಯಮ ಬೇರೆ ಇಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕಾಗಿದೆ ಸರಕಾರಗಳು ಕೃಷಿಗೆ, ಕೃಷಿಕರಿಗೆ ಮಹತ್ವ ನೀಡದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯ ಎಂದರು.
ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾತನಾಡಿ, 2020-21 ಸಾಲಿನ ಕೇಂದ್ರ ಬಜೆಟ್ ಕೃಷಿ ಕ್ಷೇತ್ರಕ್ಕೆ ಪೂರಕ ಯೋಜನೆಗಳನ್ನು ರೂಪಿಸಿರುವುದು ಸ್ವಾಗತಾರ್ಹ. ಕೃಷಿ ಉತ್ಪನ್ನಗಳ ಸಾಗಾಟಕ್ಕಾಗಿ ರೈಲು, ವಿಮಾನಗಳಲ್ಲಿ ಅವಕಾಶ ಕೃಷಿ ಸಾಲದ ಹೆಚ್ಚಳ, ಹೈನುಗಾರಿಕೆಗೆ ಉತ್ತೇಜನ ಕೃಷಿಕರಿಗೆ ಲಾಭಕರ ಎಂದರು.
ಕಾರ್ಯಕ್ರಮಕ್ಕೆ ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ದಿನೇಶ್ ಶೆಟ್ಟಿ ಹೆರ್ಗ, ವೇಣುಗೋಪಾಲ ಪಡುಕಳತ್ತೂರು, ದಯಾನಂದ ಕೆ., ಭಾರತಿ ಶೆಟ್ಟಿ ಅಂಜಾರು, ಜಯಲಕ್ಷಿ ಪಿತ್ರೋಡಿ, ರವೀಂದ್ರ ಪೂಜಾರಿ ಶೀಂಬ್ರ, ಪ್ರಥ್ವಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಣೆ ಮಾಡಿದರು.
Related Articles
– ರವೀಂದ್ರ ಗುಜ್ಜರಬೆಟ್ಟು
ಕಾರ್ಯದರ್ಶಿ
ಉಡುಪಿ ಜಿಲ್ಲಾ ಕೃಷಿಕ ಸಂಘ
ಗುರುಪ್ರಸಾದ್ ಕಟ್ಟಡ, ಅಲಂಕಾರ್ ಥಿಯೇಟರ್ ಹಿಂಬದಿ, ಉಡುಪಿ – 576101
Ph: 9686866940/ 9448107705/ 9844295967