Advertisement

ಕಬ್ಬಿನ ತರಗಿಗೆ ಹಚ್ಚಿದ್ದ ಬೆಂಕಿಗೆ ಸಿಲುಕಿ ರೈತ ಸಾವು

08:19 PM Jan 20, 2021 | Team Udayavani |

ಮಂಡ್ಯ: ಕಬ್ಬಿನ ಗದ್ದೆಯಲ್ಲಿದ್ದ ತರಗಿಗೆ ಬೆಂಕಿ ಹಾಕಲು ಹೋಗಿದ್ದ ವೇಳೆ ಬೆಂಕಿಗೆ ಸಿಲುಕಿ ರೈತರೊಬ್ಬರು ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ನಿಂಗೇಗೌಡ(70) ಮೃತ ವ್ಯಕ್ತಿ. ಬುಧವಾರ ಸಂಜೆ 7 ಗಂಟೆ ಸಮಯದಲ್ಲಿ  ಗ್ರಾಮದ ಸಮೀಪ ಇರುವ ತಮ್ಮ ಜಮೀನಿನಲ್ಲಿ ಇತ್ತೀಚಿಗೆ ಕಬ್ಬನ್ನು ಕಟಾವು ಮಾಡಿಸಿದ್ದರು. ಅದರ ತರಗಿಗೆ ಬೆಂಕಿ ಹಾಕುವುದಾಗಿ ಮನೆಗೆ ಹೇಳಿ ಗದ್ದೆಯ ಬಳಿಗೆ ಬಂದು ಬೆಂಕಿ ಹಾಕಿದ್ದಾರೆ. ಆದರೆ ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲಿಗೆಗೆ ತಾವೇ ಬಲಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶಿವಮೂರ್ತಿ, ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಲೆಕ್ಕಾಧಿಕಾರಿ ಸುಧಾಕರ ಮತ್ತು ಪಟ್ಟಣ ಠಾಣೆಯ ಪಿಎಸ್‌ಐ ಬ್ಯಾಟರಾಯಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:  ಜನರ ಆಕ್ರೋಶಕ್ಕೆ ಮಣಿದ ‘ತಾಂಡವ್’ ತಂಡ: ವಿವಾದಿತ ದೃಶ್ಯಕ್ಕೆ ಕತ್ತರಿ ಪ್ರಯೋಗ

Advertisement

Udayavani is now on Telegram. Click here to join our channel and stay updated with the latest news.

Next